AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟ ಮಾತು ಉಳಿಸಿಕೊಂಡ ಅಕ್ಕಿನೇನಿ ನಾಗಾರ್ಜುನ; ಸ್ಟಾರ್​ ನಟನ ಕೆಲಸಕ್ಕೆ ಭಾರೀ ಶ್ಲಾಘನೆ

ರಾಜ್ಯ ಸಭೆಯ ಸದಸ್ಯ ಸಂತೋಷ್​ ಜೋಗಿನಪಲ್ಲಿ ಅವರಿಗೆ ಮರಗಳ ಮೇಲೆ ಅತ್ಯಂತ ಹೆಚ್ಚು ಪ್ರೀತಿ. ಅವರು ಮರಗಳನ್ನು ಉಳಿಸಲು ಹಾಗೂ ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇವರ ಪರಿಚಯ ಅನೇಕರಿಗೆ ಇದೆ. ಗ್ರೀನ್​ ಇಂಡಿಯಾ ಚಾಲೆಂಜ್​​ ಅಡಿಯಲ್ಲಿ 16 ಕೋಟಿ ಮರಗಳನ್ನು ಅವರು ಬೆಳೆಸಿದ್ದಾರೆ.

ಕೊಟ್ಟ ಮಾತು ಉಳಿಸಿಕೊಂಡ ಅಕ್ಕಿನೇನಿ ನಾಗಾರ್ಜುನ; ಸ್ಟಾರ್​ ನಟನ ಕೆಲಸಕ್ಕೆ ಭಾರೀ ಶ್ಲಾಘನೆ
ಅಕ್ಕಿನೇನಿ ನಾಗಾರ್ಜುನ
TV9 Web
| Edited By: |

Updated on:Feb 17, 2022 | 1:38 PM

Share

ಅಕ್ಕಿನೇನಿ ನಾಗಾರ್ಜುನ ಅವರು (Akkineni Nagarjuna) ಸಿನಿಮಾ ಜತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳ (Social Work) ಮೂಲಕವೂ ಗುರುತಿಸಿಕೊಂಡಿದ್ದಾರೆ. ಜನರಿಗೆ ಹಾಗೂ ಸಮಾಜಕ್ಕೆ ಒಳಿತಾಗುವ ಸಾಕಷ್ಟು ಕೆಲಸಗಳನ್ನು ಅವರು ಮಾಡಿದ್ದಾರೆ. ಕಳೆದ ವರ್ಷ ತೆಲುಗು ಬಿಗ್​ ಬಾಸ್ ವೇದಿಕೆ ಮೇಲೆ 1000 ಎಕರೆ ಕಾಡನ್ನು (Forest Land) ದತ್ತು ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈಗ ಅದನ್ನು ಈಡೇರಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅವರ ಕೆಲಸಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜ್ಯ ಸಭೆಯ ಸದಸ್ಯ ಸಂತೋಷ್​ ಜೋಗಿನಪಲ್ಲಿ ಅವರಿಗೆ ಮರಗಳ ಮೇಲೆ ಅತ್ಯಂತ ಹೆಚ್ಚು ಪ್ರೀತಿ. ಅವರು ಮರಗಳನ್ನು ಉಳಿಸಲು ಹಾಗೂ ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇವರ ಪರಿಚಯ ಅನೇಕರಿಗೆ ಇದೆ. ಗ್ರೀನ್​ ಇಂಡಿಯಾ ಚಾಲೆಂಜ್​​ ಅಡಿಯಲ್ಲಿ 16 ಕೋಟಿ ಮರಗಳನ್ನು ಅವರು ಬೆಳೆಸಿದ್ದಾರೆ. ಈ ಒಂದು ಅದ್ಭುತ ಕೆಲಸಕ್ಕೆ ಸಾಕಷ್ಟು ಸೆಲೆಬ್ರಿಟಿಗಳನ್ನೂ ಅವರು ಸೇರ್ಪಡೆ ಮಾಡಿಕೊಂಡಿದ್ದಾರೆ. ಈಗ ಈ ಸಾಲಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಂಡಿದ್ದರು.

ಸಂತೋಷ್​ ಅವರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಳೆದ ವರ್ಷ ತೆಲುಗು ಬಿಗ್​ ಬಾಸ್​ ವೇದಿಕೆ ಏರಿದ್ದರು. ಈ ವೇಳೆ ಪ್ರಭಾಸ್​ ಅವರು 1643 ಎಕರೆ ಅರಣ್ಯ ದತ್ತು ಪಡೆದಿದ್ದಾರೆ ಎಂದು ಸಂತೋಷ್​ ಮಾಹಿತಿ ನೀಡಿದ್ದರು. ಈ ವೇಳೆ ನಾಗಾರ್ಜುನ ಅವರು ನಿಜಕ್ಕೂ ಸಂತಸಗೊಂಡರು. ಅಲ್ಲದೆ, 1,080 ಎಕರೆ ಕಾಡನ್ನು ದತ್ತು ಪಡೆಯುವುದಾಗಿ ಆ ಕ್ಷಣವೇ ಘೋಷಿಸಿದ್ದರು. ‘ಪರಿಸರವನ್ನು ಕಾಪಾಡುವ ಜವಾಬ್ದಾರಿ ನಮ್ಮದು. ಹೀಗಾಗಿ, ಕಾಡುಗಳನ್ನು ನಾನು ದತ್ತುಪಡೆಯುತ್ತಿದ್ದೇನೆ. ಆ ಕಾಡನ್ನು ಪೋಷಿಸುವ ಹೊಣೆಯನ್ನು ನಾನು ಈಗಲೇ ಹೊತ್ತುಕೊಳ್ಳುತ್ತಿದ್ದೇನೆ’ ಎಂದಿದ್ದರು. ಈಗ ಆ ಭರವಸೆಯನ್ನು ಅವರು ಈಡೇರಿಸಿದ್ದಾರೆ.

ಹೈದರಾಬಾದ್ ಹೊರವಲಯದಲ್ಲಿರುವ ಚೆಂಗಿಚೆರ್ಲಾ ಅರಣ್ಯಭಾಗವನ್ನು ತಂದೆ ಅಕ್ಕಿನೇನಿ ನಾಗೇಶ್ವರ್​ ರಾವ್ ಹೆಸರಲ್ಲಿ ನಾಗಾರ್ಜುನ ದತ್ತು ಪಡೆದಿದ್ದಾರೆ. ಇದಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ನಡೆದಿದೆ. ಅಕ್ಕಿನೇನಿ ನಾಗಾರ್ಜುನ, ಅಮಲಾ, ನಾಗ ಚೈತನ್ಯ,  ಎಂಪಿ ಜೆ. ಸಂತೋಷ್​ ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾಡನ್ನು ಬೆಳೆಸಲು ನಾಗಾರ್ಜುನ ಅವರು ಎರಡು ಕೋಟಿ ರೂಪಾಯಿ ಚೆಕ್​ ನೀಡಿದ್ದಾರೆ.

‘ಗ್ರೀನ್ ಇಂಡಿಯಾ ಚಾಲೆಂಜ್​’ಅನ್ನು ನಾಗಾರ್ಜುನ  ಅವರು ಸ್ವೀಕರಿಸಿರುವುದಕ್ಕೆ ಸಂತೋಷ್​ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾಡಿನಲ್ಲಿ ಖಾಲಿ ಇರುವ ಜಾಗದಲ್ಲಿ, ಬಯಲು ಭಾಗದಲ್ಲಿ ಮರಗಳನ್ನು ನಡೆಯುವ ಕಾರ್ಯ ನಡೆಯಲಿದೆ. ಈ ಮೂಲಕ ಬರಡು ಭೂಮಿಯಲ್ಲಿ ಮತ್ತೆ ಹಸಿರನ್ನು ಚಿಗುರಿಸುವ ಯೋಜನೆ ಇದಾಗಿದೆ. ಗ್ರೀನ್​ ಇಂಡಿಯಾ ಚಾಲೆಂಜ್​ ಅಡಿಯಲ್ಲಿ ಹೈದರಾಬಾದ್ ಹೊರ ವಲಯದಲ್ಲಿರುವ 1.50 ಲಕ್ಷ ಎಕರೆ ಜಾಗವನ್ನು ರಕ್ಷಣೆ ಮಾಡಿ, ಕಾಡನ್ನು ಬೆಳೆಸಲಾಗುತ್ತದೆ. ಉದ್ಯಮಿಗಳು, ಸಾಮಾಜಿಕ ಕೆಲಸ ಮಾಡುವವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಅಕ್ಕಿನೇನಿ ನಾಗಾರ್ಜುನ ನಟನೆಯ ‘ಬಂಗಾರ್ರಾಜು’ ಸಿನಿಮಾ ಸಂಕ್ರಾಂತಿ ನಿಮಿತ್ತ ತೆರೆಗೆ ಬಂದು ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿದೆ. ಈಗ ಅವರು ವೆಬ್​ ಸೀರಿಸ್ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಕ್ಕಿನೇನಿ ಕುಟುಂಬಕ್ಕೆ ಸಿಹಿ ಸುದ್ದಿ; ಖುಷಿಪಟ್ಟ ಅಭಿಮಾನಿಗಳು

‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ

Published On - 1:27 pm, Thu, 17 February 22

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ