ಅಕ್ಕಿನೇನಿ ಕುಟುಂಬಕ್ಕೆ ಸಿಹಿ ಸುದ್ದಿ; ಖುಷಿಪಟ್ಟ ಅಭಿಮಾನಿಗಳು
ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಇದರ ಜತೆಗೆ ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಿಯಮಗಳು ಜಾರಿಯಲ್ಲಿವೆ. ಇದರ ಮಧ್ಯೆಯೂ ಅಕ್ಕಿನೇನಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಅಭಿನಯದ ‘ಬಂಗಾರ್ರಾಜು’ ಚಿತ್ರ ತೆರೆಗೆ ಬಂದಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಕ್ಕಿನೇನಿ ಕುಟುಂಬ (Akkineni Family) ಹಾಗೂ ಅವರ ಅಭಿಮಾನಿಗಳಿಗೆ ಬೇಸರ ಆಗುವ ಘಟನೆ ನಡೆದಿತ್ತು. ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ (Naga Chaitanya and Samantha Divorce) ಪಡೆದು ಬೇರೆ ಆದರು. ಇದಾಗಿ ಹಲವು ತಿಂಗಳು ಕಳೆದಿದೆ. ಈಗ ಅಕ್ಕಿನೇನಿ ಕುಟುಂಬ ಖುಷಿ ಪಡುವ ಘಟನೆ ಒಂದು ನಡೆದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಹಾಗಾದರೆ ಏನಿದು ಸಮಾಚಾರ? ಅವರ ಅಭಿಮಾನಿಗಳು ಖುಷಿಪಡುವಂತಹ ಘಟನೆ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೊವಿಡ್ನಿಂದ ದೇಶದ ಪರಿಸ್ಥಿತಿ ಹದಗೆಟ್ಟಿದೆ. ನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ನಿಯಂತ್ರಿಸೋಕೆ ಯಾವ ಸರ್ಕಾರಗಳಿಂದಲೂ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಇದರ ಜತೆಗೆ ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಿಯಮಗಳು ಜಾರಿಯಲ್ಲಿವೆ. ಇದರ ಮಧ್ಯೆಯೂ ಅಕ್ಕಿನೇನಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಅಭಿನಯದ ‘ಬಂಗಾರ್ರಾಜು’ ಚಿತ್ರ ತೆರೆಗೆ ಬಂದಿದೆ. ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ಚಿತ್ರ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.
Im a proud son and a proud brother ! Sankranthi is truly yours team #Bangarraaju congratulations! Thank you to our director @kalyankrishna_k for giving us yet another blockbuster. pic.twitter.com/Pef3OrA5A9
— Akhil Akkineni (@AkhilAkkineni8) January 17, 2022
ಮೂರು ದಿನಗಳಲ್ಲಿ ಈ ಚಿತ್ರ ಬರೋಬ್ಬರಿ 53 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಕೊವಿಡ್ ಮಧ್ಯೆಯೂ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರುವುದು ಸಹಜವಾಗಿಯೇ ಅಕ್ಕಿನೇನಿ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಸಂಕ್ರಾಂತಿ ಹಬ್ಬ ಈ ಕುಟುಂಬದ ಹಾಗೂ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ.
‘ಬಂಗಾರ‍್ರಾಜು’ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಹಾಗೂ ಕೃತಿ ಶೆಟ್ಟಿ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ‘ನಮ್ಮ ‘ಬಂಗಾರ‍್ರಾಜು’ ಪೊಂಗಲ್ ಹಬ್ಬದ ಸಿನಿಮಾ ಎಂದು ನಾನು ಯಾವಾಗಲೂ ನಂಬಿದ್ದೇನೆ. ಹಬ್ಬದ ಸಮಯದಲ್ಲಿ ಎಲ್ಲರೂ ಕುಳಿತು ಒಟ್ಟಾಗಿ ಸಿನಿಮಾ ನೋಡುತ್ತಾರೆ. ಇದು ನಮ್ಮ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಈ ಸಿನಿಮಾವನ್ನು ಒಮ್ಮೆಯಾದರೂ ನೋಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ’ ಎಂದು ಅಕ್ಕಿನೇನಿ ನಾಗಾರ್ಜುನ ಹೇಳಿದ್ದರು. ಆ ಮಾತು ಈಗ ನಿಜವಾಗಿದೆ.
ಇದನ್ನೂ ಓದಿ: ಅಕ್ಕಿನೇನಿ ನಾಗಾರ್ಜುನ ಚಿತ್ರದಿಂದ ಎರಡನೇ ಹೀರೋಯಿನ್ ಔಟ್; ಇದಕ್ಕಿದೆ ಮಹತ್ವದ ಕಾರಣ