ಟೀಕೆ ಬೆನ್ನಲ್ಲೇ ವರಸೆ ಬದಲಿಸಿದ ‘ಆದಿಪುರುಷ್’ ತಂಡ; ಮೊದಲು ಹೇಳಿದ್ದೊಂದು, ಈಗ ಹೇಳೋದೊಂದು
ರಾಮ ನವಮಿ, ಹನುಮ ಜಯಂತಿ ಸಂದರ್ಭದಲ್ಲಿ ಪೋಸ್ಟರ್ ರಿಲೀಸ್ ಮಾಡಿ ‘ಆದಿಪುರುಷ್’ ತಂಡ ಶುಭಕೋರಿತ್ತು. ಆದರೆ, ಯಾವಾಗ ಟೀಕೆಗಳು ಎದುರಾದವೋ ಆಗ ತಂಡ ತನ್ನ ನಿಲುವು ಬದಲಾಯಿಸಿದೆ.
‘ಆದಿಪುರುಷ್’ (Adipurush Movie) ತಂಡ ಈಗ ಟೀಕೆಗಳ ಮೇಲೆ ಟೀಕೆ ಎದುರಿಸುತ್ತಿದೆ. ಮೂಲ ರಾಮಾಯಣಕ್ಕೂ ಈ ರಾಮಾಯಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪ್ರತಿ ದೃಶ್ಯಕ್ಕೂ ಸಿನಿಮೀಯ ಅಂಶಗಳನ್ನು ನೀಡಲಾಗಿದೆ. ಈ ಕಾರಣಕ್ಕೆ ರಾಮ ಭಕ್ತರು, ಹನುಮಂತನ ಭಕ್ತರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಈ ಮಧ್ಯೆ ಚಿತ್ರತಂಡ ಕೂಡ ಪ್ಲೇಟ್ ಬದಲಿಸುತ್ತಿದೆ. ರಿಲೀಸ್ಗೂ ಮೊದಲು ಇದು ರಾಮಾಯಣ (Ramayana) ಆಧಾರಿತ ಚಿತ್ರ ಎಂದು ಹೇಳುತ್ತಾ ಬಂದಿದ್ದ ತಂಡ, ಈಗ ತನ್ನ ನಿಲುವು ಬದಲಾಯಿಸಿದೆ. ಇದು ರಾಮಾಯಾಣ ಆಧರಿಸಿದ ಸಿನಿಮಾ ಅಲ್ಲವೇ ಅಲ್ಲ ಎನ್ನುತ್ತಿದೆ. ಚಿತ್ರತಂಡದ ಈ ದ್ವಂದ ನೀತಿ ಬಗ್ಗೆ ಟೀಕೆ ವ್ಯಕ್ತವಾಗಿದೆ.
‘ಆದಿಪುರುಷ್’ ಸಿನಿಮಾ ರಾಮಾಯಣ ಆಧರಿಸಿದ ಚಿತ್ರ ಎಂದು ನಿರ್ದೇಶಕ ಓಂ ರಾವತ್ ಈ ಮೊದಲಿನಿಂದಲೂ ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ರಾಮ ನವಮಿ, ಹನುಮ ಜಯಂತಿ ಸಂದರ್ಭದಲ್ಲಿ ಪೋಸ್ಟರ್ ರಿಲೀಸ್ ಮಾಡಿ ತಂಡ ಶುಭಕೋರಿತ್ತು. ಆದರೆ, ಯಾವಾಗ ಟೀಕೆಗಳು ಎದುರಾದವೋ ಆಗ ತಂಡ ತನ್ನ ನಿಲುವು ಬದಲಾಯಿಸಿದೆ.
‘ಆದಿಪುರುಷ್’ ಹೀರೋ ಪ್ರಭಾಸ್ಗೆ 150 ಕೋಟಿ ರೂ. ಸಂಬಳ; ಇನ್ನುಳಿದ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು?
‘ಆದಿಪುರುಷ್ ಮಾಡರ್ನ್ ಮಾಡೋಕೆ ನಾವು ಪ್ರಯತ್ನಿಸಿಲ್ಲ. ಜನರು ಓದಿದ, ಕೇಳಿದ ರಾಮಾಯಣವನ್ನೇ ನಾವು ಹೇಳುತ್ತಿದ್ದೇವೆ’ ಎಂದು ‘ಆದಿಪುರುಷ್’ ತಂಡದ ಸಂಭಾಷಣಾಕಾರ ಮನೋಜ್ ಈ ಮೊದಲು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಸಿನಿಮಾ ರಿಲೀಸ್ ಆದ ಬಳಿಕ ನಿಲುವು ಬದಲಾಗಿದೆ. ‘ನಾವು ಈ ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬರುತ್ತಿದ್ದೇವೆ. ನಾವು ರಾಮಯಾಣವನ್ನೇ ಸಿನಿಮಾ ಮಾಡಿಲ್ಲ. ರಾಮಾಯಣವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದೇವೆ ಅಷ್ಟೇ’ ಎಂದು ಅವರು ಹೇಳಿದ್ದಾರೆ.
View this post on Instagram
ಇದನ್ನೂ ಓದಿ: ‘ಆದಿಪುರುಷ್’ ಪ್ರದರ್ಶನಕ್ಕೂ ಮುನ್ನ ಬರುವ ಸ್ಪಷ್ಟೀಕರಣದಲ್ಲಿ ಏನಿದೆ? ಚಿತ್ರತಂಡದ ಅಸಲಿ ವಾದ ಇಲ್ಲಿದೆ ನೋಡಿ..
ಈ ಎರಡೂ ಹೇಳಿಕೆಗಳನ್ನು ಜೋಡಿಸಿ ವಿಡಿಯೋಗಳನ್ನು ಹರಿಬಿಡಲಾಗಿದೆ. ‘ಆದಿಪುರುಷ್’ ತಂಡದವರು ಹೇಗೆ ಮಾತು ಬದಲಾಯಿಸುತ್ತಾರೆ ಎಂಬುದಕ್ಕೆ ಇವು ಸಾಕ್ಷಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಚಿತ್ರತಂಡದವರ ನಡೆಗೆ ಅನೇಕರಿಂದ ಟೀಕೆ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ