AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀ ಟೂ ಆರೋಪ ಮಾಡಿದ್ದ ನಟಿ ಈಗ ‘ಮಾಂಸ ದಂಧೆ’ಯಲ್ಲಿ ಬಂಧನ

Meenu Muneer: ಮೀ ಟೂ ಚಳವಳಿಯ ವೇಳೆ ಹಲವು ನಟರುಗಳು, ತಂತ್ರಜ್ಞರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ನಟಿಯೇ ಈಗ ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ತಮಿಳುನಾಡು ಪೊಲೀಸರು ಪೋಕ್ಸೊ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳನ್ನು ನಟಿಯ ವಿರುದ್ಧ ದಾಖಲಿಸಿದ್ದು, ನಟಿಯನ್ನು ಬಂಧಿಸಿದ್ದಾರೆ.

ಮೀ ಟೂ ಆರೋಪ ಮಾಡಿದ್ದ ನಟಿ ಈಗ ‘ಮಾಂಸ ದಂಧೆ’ಯಲ್ಲಿ ಬಂಧನ
Minu Muneer
ಮಂಜುನಾಥ ಸಿ.
|

Updated on: Aug 15, 2025 | 3:17 PM

Share

ಈ ಹಿಂದೆ ಮೀ ಟೂ ಆರೋಪ ಮಾಡಿ ಸುದ್ದಿಯಾಗಿದ್ದ ನಟಿ ಈಗ ‘ಮಾಂಸ ದಂಧೆ’ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ನಟಿ ಮೀನು ಮುನೀರ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬಾಕೆಯನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ತಳ್ಳಿದ ಆರೋಪ ಸೇರಿದಂತೆ ಇನ್ನೂ ಕೆಲವು ಆರೋಪಗಳು ನಟಿಯ ಮೇಲಿದೆ. ತಮಿಳುನಾಡು ಪೊಲೀಸರು ನಟಿ ಮೀನು ಮುನೀರ್ ಅನ್ನು ಕೇರಳದ ಅಲುವಾನಲ್ಲಿ ಬಂಧಿಸಿ ಚೆನ್ನೈಗೆ ಕರೆದುಕೊಂಡು ಬಂದಿದ್ದಾರೆ.

ತಮಿಳು ಮತ್ತು ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀನು ಮುನೀರ್ ತಮ್ಮದೇ ಸಂಬಂಧದ ಯುವತಿಯೊಬ್ಬಾಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದರಂತೆ. 2014 ರಲ್ಲಿ ಈ ಘಟನೆ ನಡೆದಿದ್ದು ಈಗ ಪ್ರಕರಣ ದಾಖಲಾಗಿದೆ. ಮೀನು ಮುನೀರ್, ತನ್ನ ಹತ್ತಿರದ ಸಂಬಂಧದ ಯುವತಿಯೊಬ್ಬಾಕೆಗೆ ಸಿನಿಮಾನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರಂತೆ. ತಮಿಳುನಾಡಿನ ಚೆನ್ನೈನ ತಿರುಮಂಗಲಂ ಪೊಲೀಸರ ಬಳಿ ಈ ಬಗ್ಗೆ ದೂರು ದಾಖಲಾಗಿತ್ತು. ಪೋಕ್ಸೊ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಅದರನ್ವಯ ನಟಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:  ಅತ್ಯಾಚಾರ ಪ್ರಕರಣದ ಆರೋಪಿ ನಟ ಮಡೆನೂರು ಮನುಗೆ ಜಾಮೀನು ಮಂಜೂರು

ಇನ್ನು ನಟಿ ಮೀನು ಮುನೀರ್​ಗೆ ಪ್ರಕರಣ, ಜೈಲು ಹೊಸದೇನೂ ಅಲ್ಲ. ಮಲಯಾಳಂ ನಟ ಬಾಲಚಂದ್ರ ಮೆನನ್ ವಿರುದ್ಧ ನಟಿ ಮೀನು ಮುನೀರ್ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದರು. ಆದರೆ ಸಾಕ್ಷ್ಯಗಳ ಕೊರತೆಯಿಂದಾಗಿ ಆ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತು. ಬಳಿಕ ನಟ ಬಾಲಚಂದ್ರ ಮೆನನ್, ಮೀನು ಮುನೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಈ ಪ್ರಕರಣದಲ್ಲಿ ಮೀನು ಮುನೀರ್ ಜೈಲು ಸಹ ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರಬಂದರು. ಇದೇ ಪ್ರಕರಣದಲ್ಲಿ ಬಾಲಚಂದ್ರ ಮೆನನ್ ಗೆ ಬ್ಲಾಕ್​ ಮೇಲ್ ಮಾಡಿ ಹಣ ವಸೂಲು ಮಾಡಲು ಯತ್ನಿಸಿದ ಕಾರಣಕ್ಕೆ ನಟಿ ಮೀನು ಮುನೀರ್ ಅವರ ವಕೀಲರನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವರದಿ ನೀಡಲು ಹೇಮಾ ಸಮಿತಿ ರಚಿಸಿದಾಗ ನಟಿ ಮೀನು ಮುನೀರ್ ಹಲವಾರು ಮಂದಿಯ ವಿರುದ್ಧ ಆರೋಪಗಳನ್ನು ಮಾಡಿದ್ದರು. ಬಾಲಚಂದ್ರ ಮೆನನ್, ಮುಖೇಶ್, ಮಣಿಯನ್‌ಪಿಳ್ಳ ರಾಜು, ಜಯಸೂರ್ಯ, ಎಡವಲೆ ಬಾಬು, ನಿರ್ಮಾಣ ನಿಯಂತ್ರಕ ನೋಬಲ್ ಮತ್ತು ವಿಚು ಅವರುಗಳ ಮೇಲೆ ಸಹ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮೀನು ಮುನೀರ್ ಮಾಡಿದ್ದರು. ಆದರೆ ಈಗ ನಟಿಯೇ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಮೀನು ಮುನೀರ್, ‘ಕ್ಯಾಲೆಂಡರ್’, ‘ತಾ ತಡಿಯಾ’, ‘ಒನ್ ವೇ ಟಿಕೆಟ್‘, ‘ಪ್ರಮುಖನ್’, ‘ಪ್ರಬಲನ್ ನಲ್ಲ ಪಟ್ಟುಕರ್’, ‘ದೇ ಇಂಗೊಟ್ಟು ನೋಕಿಯೇ’,‘ಪುಲ್ಲುಕೆಟ್ ಮುತ್ತಮ್ಮ’ ಇನ್ನೂ ಕೆಲವು ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೀನು ಮುನೀರ್ ಕೆಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಕೇರಳದವರಾದ ಮೀನು, ಶಿಕ್ಷಣ ಪಡೆದಿರುವುದು ಮಂಗಳೂರಿನಲ್ಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!