‘ಸಿದ್ಲಿಂಗು 2’ ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರ? ಕುತೂಹಲ ಮೂಡಿಸಿದ ಪೋಸ್ಟರ್

‘ರ’ ಅಕ್ಷರ ಎಂದಾಕ್ಷಣ ಫ್ಯಾನ್ಸ್​ಗೆ ನೆನಪಾಗಿರೋದು ರಮ್ಯಾ ಅವರ ಹೆಸರು. ಅವರೇ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಬಹುದೇ ಎನ್ನುವ ಕುತೂಹಲ ಮೂಡಿದೆ. ರ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಇನ್ನೂ ಕೆಲವು ಹೀರೋಯಿನ್​ಗಳು ಕನ್ನಡದಲ್ಲಿ ಇದ್ದಾರೆ.

‘ಸಿದ್ಲಿಂಗು 2’ ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರ? ಕುತೂಹಲ ಮೂಡಿಸಿದ ಪೋಸ್ಟರ್
ರಮ್ಯಾ-ಸಿದ್ಲಿಂಗು 2 ತಂಡ

Updated on: Apr 11, 2024 | 7:28 AM

2012ರಲ್ಲಿ ರಿಲೀಸ್ ಆದ ‘ಸಿದ್ಲಿಂಗು’ ಸಿನಿಮಾದಲ್ಲಿ ಲೂಸ್ ಮಾದ ಯೋಗಿ (Yogi) ಹಾಗೂ ರಮ್ಯಾ ಒಟ್ಟಾಗಿ ನಟಿಸಿ ಗಮನ ಸೆಳೆದಿದ್ದರು. ಈ ಚಿತ್ರಕ್ಕೆ ಈಗ ಸೀಕ್ವೆಲ್ ಸಿದ್ಧವಾಗುತ್ತಿದೆ. ಮೊದಲ ಭಾಗದಲ್ಲಿ ರಮ್ಯಾ ಅವರ ಪಾತ್ರ ಕೊನೆಗೊಂಡಿದ್ದರಿಂದ ಅವರಂತೂ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಿಲ್ಲ. ಇದನ್ನು ತಂಡ ಮೊದಲೇ ಹೇಳಿಕೊಂಡಿತ್ತು. ಈಗ ರಮ್ಯಾ ಅತಿಥಿ ಪಾತ್ರದ ಮೂಲಕ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕಾರಣ ಆಗಿರೋದು ‘ಸಿದ್ಲಿಂಗು 2’ ಚಿತ್ರದ ಹೊಸ ಪೋಸ್ಟರ್.

ಯುಗಾದಿ ಸಂದರ್ಭದಲ್ಲಿ ಹಲವು ಸಿನಿಮಾಗಳು ಹೊಸ ಪೋಸ್ಟರ್ ರಿಲೀಸ್ ಮಾಡಿ ಸಂಭ್ರಮಿಸಿವೆ. ಅದೇ ರೀತಿ ‘ಸಿದ್ಲಿಂಗು 2’ ಚಿತ್ರ ತಂಡ ಕೂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್​ನಲ್ಲಿ ಕಾರ್​ನ ಫೋಟೋ ಇದೆ. ಇದರ ಜೊತೆಗೆ ‘ಬೇವು ಬೆಲ್ಲದೊಂದಿಗೆ ಅತಿಥಿಯಾಗಿ ಬಂದರೂ ಬರಬಹುದು. ಅವರ ಹೆಸರಿನ ಮೊದಲ ಅಕ್ಷರ ರ’ ಎಂದು ಬರೆಯಲಾಗಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

‘ರ’ ಅಕ್ಷರ ಎಂದಾಕ್ಷಣ ಫ್ಯಾನ್ಸ್​ಗೆ ನೆನಪಾಗಿರೋದು ರಮ್ಯಾ ಅವರ ಹೆಸರು. ಅವರೇ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಬಹುದೇ ಎನ್ನುವ ಕುತೂಹಲ ಮೂಡಿದೆ. ರ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಇನ್ನೂ ಕೆಲವು ಹೀರೋಯಿನ್​ಗಳು ಕನ್ನಡದಲ್ಲಿ ಇದ್ದಾರೆ. ಆದರೆ, ಮುಖ್ಯವಾಗಿ ರಮ್ಯಾ ಹೆಸರು ಫ್ಯಾನ್ಸ್​ಗೆ ನೆನಪಾಗಿದೆ.

‘ಸಿದ್ಲಿಂಗು 2’ ಸಿನಿಮಾದಲ್ಲಿ  ರಮ್ಯಾ ಬದಲು ಸೋನು ಗೌಡ ಅವರ ಎಂಟ್ರಿ ಆಗಿದೆ. ವಿಜಯ್ ಪ್ರಸಾದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಹರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯೋಗೆಶ್, ವಿಜಯಪ್ರಸಾದ್, ಮಂಜುನಾಥ್ ರಾಧಾಕೃಷ್ಣ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ: ‘ಉತ್ತರಕಾಂಡ’ ಸಿನಿಮಾದಿಂದ ಹೊರಬಂದ ರಮ್ಯಾ; ಅಭಿಮಾನಿಗಳಿಗೆ ನಿರಾಸೆ

ರಮ್ಯಾ ಅವರು ‘ಉತ್ತರಾಕಾಂಡ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವರು ಚಿತ್ರದಿಂದ ಹೊರ ನಡೆದಿದ್ದಾರೆ. ಈಗ ‘ಸಿದ್ಲಿಂಗು 2’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:27 am, Thu, 11 April 24