ಚೀಟಿಂಗ್ ಕೇಸ್: ಸನ್ನಿ ಲಿಯೋನ್​ಗೆ ರಿಲೀಫ್ ನೀಡಿದ ಕೇರಳ ಹೈಕೋರ್ಟ್

| Updated By: ರಾಜೇಶ್ ದುಗ್ಗುಮನೆ

Updated on: Nov 16, 2022 | 6:08 PM

ಸನ್ನಿ ಲಿಯೋನ್ ಹಾಗೂ ಅವರ ಪತಿ ಡ್ಯಾನಿಯಲ್ ವೇಬರ್ ವಿರುದ್ಧ ಕೇಸ್ ದಾಖಲಾಗಿತ್ತು. ನಟಿ ಹಾಗೂ ಅವರ ಪತಿ ಮೋಸ ಮಾಡಿದ್ದಾರೆ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ದೂರು ನೀಡಿತ್ತು.

ಚೀಟಿಂಗ್ ಕೇಸ್: ಸನ್ನಿ ಲಿಯೋನ್​ಗೆ ರಿಲೀಫ್ ನೀಡಿದ ಕೇರಳ ಹೈಕೋರ್ಟ್
ಸನ್ನಿ ಲಿಯೋನ್
Follow us on

ನಟಿ ಸನ್ನಿ ಲಿಯೋನ್ (Sunny Leone) ಅವರು ವಿವಾದದಿಂದ ಸದಾ ದೂರ ಇರಲು ಪ್ರಯತ್ನಿಸುತ್ತಾರೆ. ನೀಲಿ ಚಿತ್ರ ಲೋಕ ತೊರೆದ ನಂತರದಲ್ಲಿ ಅವರು ಸಾಮಾನ್ಯರಂತೆ ಜೀವಿಸಲು ಪ್ರಾರಂಭಿಸಿದ್ದಾರೆ. ಚೀಟಿಂಗ್ ಪ್ರಕರಣದಲ್ಲಿ ಸನ್ನಿಗೆ ಸಂಕಷ್ಟ ಎದುರಾಗಿತ್ತು. ಅದು ಈಗ ಪರಿಹಾರ ಆಗಿದೆ. 2019ರ ಪ್ರಕರಣ ಒಂದರ ತನಿಖೆಗೆ ಕೇರಳ ಹೈಕೋರ್ಟ್ (Kerala High Court) ತಡೆ ನೀಡಿ ಆದೇಶ ಹೊರಡಿಸಿದೆ. ಹಣದ ವಿಚಾರದಲ್ಲಿ ನಟಿಯಿಂದ ಮೋಸ ಆಗಿದೆ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯೊಂದು ದೂರು ನೀಡಿತ್ತು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದರು.

ಸನ್ನಿ ಲಿಯೋನ್ ಹಾಗೂ ಅವರ ಪತಿ ಡ್ಯಾನಿಯಲ್ ವೇಬರ್ ವಿರುದ್ಧ ಕೇಸ್ ದಾಖಲಾಗಿತ್ತು. ನಟಿ ಹಾಗೂ ಅವರ ಪತಿ ಮೋಸ ಮಾಡಿದ್ದಾರೆ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ದೂರು ನೀಡಿತ್ತು. ಈ ತನಿಖೆಗೆ ತಡೆ ನೀಡಬೇಕು ಎಂದು ಸನ್ನಿ ಕೋರ್ಟ್​ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್​, ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಇದನ್ನೂ ಓದಿ
ಗೋವಾದಲ್ಲಿ ನಟಿ ಸನ್ನಿ ಲಿಯೋನ್ ಚಿಲ್ಲಿಂಗ್; ಮಸ್ತ್ ಫೋಟೋ ವೈರಲ್
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

2019ರ ವ್ಯಾಲೆಂಟೈನ್ಸ್​ ಡೇ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಅವರು ಕೊಚ್ಚಿಗೆ ಬರುವುದಾಗಿ ಒಪ್ಪಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಅವರು ಬರೋಬ್ಬರಿ 29 ಲಕ್ಷ ರೂಪಾಯಿ ಹಣ ಪಡೆದಿದ್ದರು. ಹಣ ಪಡೆದ ಹೊರತಾಗಿಯೂ ಅವರು ಕಾರ್ಯಕ್ರಮಕ್ಕ ಬರಲೇ ಇಲ್ಲ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ಆರೋಪಿಸಿತ್ತು. ‘ನಾನು ಎರಡು ಬಾರಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದಿದ್ದೆ. ಆದರೆ, ಕಾರ್ಯಕ್ರಮ ಆರಂಭ ಆಗಿರಲೇ ಇಲ್ಲ’ ಎಂದು ಅವರು ಹೇಳಿದ್ದರು.

‘ಕಾರ್ಯಕ್ರಮದಲ್ಲಿ ತುಂಬಾನೇ ಅನಾನುಕೂಲವಾಗಿತ್ತು. ಅನೇಕ ಬಾರಿ ಕಾರ್ಯಕ್ರಮದ ಜಾಗ ಹಾಗೂ ಸಮಯವನ್ನು ಬದಲಿಸಲಾಯಿತು. ಅವರು 12 ಲಕ್ಷ ರೂಪಾಯಿ ಹಣವನ್ನು ಕೊಡದೆ ಬಾಕಿ ಉಳಿಸಿಕೊಂಡಿದ್ದರು’ ಎಂದು ಸನ್ನಿ ಪ್ರತ್ಯುತ್ತರ ನೀಡಿದ್ದರು.

ಇದನ್ನೂ ಓದಿ: ಗೋವಾದಲ್ಲಿ ನಟಿ ಸನ್ನಿ ಲಿಯೋನ್ ಚಿಲ್ಲಿಂಗ್; ಮಸ್ತ್ ಫೋಟೋ ವೈರಲ್

ಆದರೆ, ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯವರು ಇದನ್ನು ಅಲ್ಲಗಳೆದಿದ್ದರು. ‘ಸನ್ನಿ ಲಿಯೋನ್ ಅವರು ಹಣ ಪಡೆದ ಹೊರತಾಗಿಯೂ ತೊಂದರೆ ಮಾಡಿದ್ದಾರೆ. ಸ್ಟೇಜ್ ಪರ್ಫಾರ್ಮೆನ್ಸ್ ಮಾಡಲು ಅವರು ನಿರಾಕರಿಸಿದ್ದಾರೆ. ಕಾಂಟ್ರ್ಯಾಕ್ಟ್ ಅನ್ನು ಅವರು ಮುರಿದ್ದಾರೆ’ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ದೂರಿತ್ತು. ಸದ್ಯ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್​ ತನಿಖೆಗೆ ತಡೆ ನೀಡಿದೆ. ಇದರಿಂದ ಸನ್ನಿ ನಿಟ್ಟುಸಿರು ಬಿಡುವಂತಾಗಿದೆ.

Published On - 5:55 pm, Wed, 16 November 22