‘ಆದಿಪುರುಷ್​’ ಚಿತ್ರದ ಅವಧಿ ಬರೋಬ್ಬರಿ 3 ಗಂಟೆ; ಪ್ರಭಾಸ್ ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ

ಜೂನ್​ 16ರಂದು ‘ಆದಿಪುರುಷ್​’ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ, ಅಂದರೆ ಜೂನ್​ 13ರಂದು ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಪ್ರೀಮಿಯರ್​ ಶೋ ನಡೆಯಲಿದೆ.

‘ಆದಿಪುರುಷ್​’ ಚಿತ್ರದ ಅವಧಿ ಬರೋಬ್ಬರಿ 3 ಗಂಟೆ; ಪ್ರಭಾಸ್ ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ
ಆದಿಪುರುಷ್ ಪೋಸ್ಟರ್​
Follow us
|

Updated on: Apr 19, 2023 | 1:25 PM

ಬಹುನಿರೀಕ್ಷಿತ ‘ಆದಿಪುರುಷ್​’ (Adipurush) ಸಿನಿಮಾದಿಂದ ಪ್ರಭಾಸ್​ ಅವರು ಯಶಸ್ಸು ಪಡೆಯಬೇಕು ಎಂದು ಕಾದಿದ್ದಾರೆ. ಆದರೆ ಈ ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್​ ಆಗುತ್ತಲೇ ಇದೆ. ಮೊದಲು ಟೀಸರ್​ ಬಿಡುಗಡೆ ಮಾಡಿದಾಗ ಕಳಪೆ ಗ್ರಾಫಿಕ್ಸ್​ ಮತ್ತು ಪಾತ್ರಗಳ ವಿಚಿತ್ರ ವೇಷದಿಂದ ಟೀಕೆ ಕೇಳಿಬಂತು. ಈಗ ಈ ಸಿನಿಮಾದ ಅವಧಿ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಭಾಸ್​ (Prabhas) ಅಭಿನಯದ ಈ ಚಿತ್ರದ ಅವಧಿ ಬರೋಬ್ಬರಿ 174 ನಿಮಿಷ ಇದೆ. ಅಂದರೆ 3 ಗಂಟೆಗೆ ಕೇವಲ 6 ನಿಮಿಷ ಮಾತ್ರ ಬಾಕಿ. ಇಂಟರ್​ವಲ್​ ಸಮಯವನ್ನೂ ಸೇರಿದರೆ ಮೂರು ಗಂಟೆ ಮೀರಲಿದೆ. ಇದು ಪ್ರೇಕ್ಷಕರಿಗೆ ತಲೆನೋವಾಗಿ ಪರಿಗಣಿಸಿದರೂ ಅಚ್ಚರಿ ಇಲ್ಲ. ಅಷ್ಟಕ್ಕೂ ‘ಆದಿಪುರುಷ್​’ ಸಿನಿಮಾದ ಅವಧಿ (Adipurush Movie Duration) ಬಗ್ಗೆ ಮಾಹಿತಿ ಬಹಿರಂಗ ಆಗಿದ್ದು ಹೇಗೆ? ಅದಕ್ಕೆ ಉತ್ತರ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್​’!

ನ್ಯೂಯಾರ್ಕ್​ನಲ್ಲಿ ಜೂನ್​ 7ರಿಂದ ಜೂನ್​ 18ರವರೆಗೆ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್​’ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್​’ ಸಿನಿಮಾ ಆಯ್ಕೆ ಆಗಿದೆ. ಸಿನಿಮೋತ್ಸವದ ವೆಬ್​ಸೈಟ್​ನಲ್ಲಿ ಈ ಚಿತ್ರದ ಅವಧಿ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಮೂರು ಗಂಟೆ ಅವಧಿಯ ಸಿನಿಮಾವನ್ನು ನೋಡಬೇಕು ಎಂದರೆ ಪ್ರೇಕ್ಷಕರಿಗೆ ಸಖತ್ ತಾಳ್ಮೆ ಅಗತ್ಯ. ಹಾಗಾಗಿ ಇಷ್ಟು ದೀರ್ಘವಾದ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಇದನ್ನೂ ಓದಿ: Om Raut: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಆದ ‘ಆದಿಪುರುಷ್’ ನಿರ್ದೇಶಕ ಓಂ ರಾವತ್

‘ಬಾಹುಬಲಿ 2’ ಬಳಿಕ ಪ್ರಭಾ​ಸ್​ ನಟಿಸಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ‘ಆದಿಪುರುಷ್​’ ಚಿತ್ರದಲ್ಲಿ ಅವರು ರಾಮನ ಪಾತ್ರ ಮಾಡಿದ್ದಾರೆ. ಪೌರಾಣಿಕ ಕಥಾಹಂದರದ ಈ ಚಿತ್ರಕ್ಕೆ ಓಂ ರಾವತ್​ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಪೌರಾಣಿಕ ಸಿನಿಮಾಗಳು ಗೆದ್ದಿದ್ದು ತೀರಾ ವಿರಳ. ಹಾಗಾಗಿ ‘ಆದಿಪುರುಷ್​’ ಭವಿಷ್ಯ ಏನಾಗಬಹುದು ಎಂದು ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ.

ಇದನ್ನೂ ಓದಿ: Adipurush: ‘ಆದಿಪುರುಷ್​’ ಚಿತ್ರತಂಡದ ಮೇಲೆ ಬಿತ್ತು ಕೇಸ್​; ರಾಮನ ಈ ಪೋಸ್ಟರ್​ನಲ್ಲಿ ಅಂಥ ತಪ್ಪು ಏನಿದೆ?

‘ಆದಿಪುರುಷ್​’ ಚಿತ್ರವನ್ನು ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಕೃಷನ್ ಕುಮಾರ್, ಓಂ ರಾವತ್​, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಜೂನ್​ 16ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮುನ್ನ, ಅಂದರೆ ಜೂನ್​ 13ರಂದು ತ್ರಿಬ್ಯಾಕಾ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರೀಮಿಯರ್​ ಶೋ ನಡೆಯಲಿದೆ.

ಪ್ರಭಾಸ್​ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಕೃತಿ ಸನೋನ್​ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​ ಅಬ್ಬರಿಸಲಿದ್ದಾರೆ. ರಾಮ ನವಮಿ ಪ್ರಯುಕ್ತ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. ಆದರೆ ಆ ಪೋಸ್ಟರ್​ಗೆ ಕೆಲವರು ತಕರಾರು ತೆಗೆದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ