Adipurush: ‘ಆದಿಪುರುಷ್​’ ಚಿತ್ರತಂಡದ ಮೇಲೆ ಬಿತ್ತು ಕೇಸ್​; ರಾಮನ ಈ ಪೋಸ್ಟರ್​ನಲ್ಲಿ ಅಂಥ ತಪ್ಪು ಏನಿದೆ?

Prabhas | Om Raut: ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ‘ಆದಿಪುರುಷ್​’ ತಂಡದ ವಿರುದ್ಧ ದೂರು ನೀಡಲಾಗಿದೆ. ಈ ಹಿಂದೆ ಟೀಸರ್​ ಬಿಡುಗಡೆ ಆದಾಗಲೂ ಕಿರಿಕ್​ ಮಾಡಲಾಗಿತ್ತು.

Adipurush: ‘ಆದಿಪುರುಷ್​’ ಚಿತ್ರತಂಡದ ಮೇಲೆ ಬಿತ್ತು ಕೇಸ್​; ರಾಮನ ಈ ಪೋಸ್ಟರ್​ನಲ್ಲಿ ಅಂಥ ತಪ್ಪು ಏನಿದೆ?
ಆದಿಪುರುಷ್ ಸಿನಿಮಾ ಪೋಸ್ಟರ್
Follow us
|

Updated on:Apr 05, 2023 | 3:26 PM

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ನಟನೆಯ ‘ಆದಿಪುರುಷ್​’ ಸಿನಿಮಾಗೆ ಪ್ರತಿ ಹಂತದಲ್ಲೂ ಟ್ರೋಲ್​ ಕಾಟ ಎದುರಾಗುತ್ತಲೇ ಇದೆ. ಈ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಕೃತಿ ಸನೋನ್​ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಮನವಮಿ ಪ್ರಯುಕ್ತ ಆದಿಪುರುಷ್​’ ಸಿನಿಮಾ (Adipurush Movie) ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಯಿತು. ಆದರೆ ಅದನ್ನು ಕಂಡು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಈ ವಿಷಯ ಈಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ನಿರ್ದೇಶಕ ಓಂ ರಾವತ್ (Om Raut)​, ನಟ ಪ್ರಭಾಸ್​ ಸೇರಿದಂತೆ ಇಡೀ ಚಿತ್ರತಂಡದ ಮೇಲೆ ದೂರು ನೀಡಲಾಗಿದೆ. ಈ ಪೋಸ್ಟರ್​ನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಲಾಗಿದೆ.

ಸಂಜಯ್​ ದೀನನಾಥ್​ ತಿವಾರಿ ಎಂಬುವವರು ‘ಆದಿಪುರುಷ್​’ ಸಿನಿಮಾತಂಡದ ವಿರುದ್ಧ ದೂರು ನೀಡಿದ್ದಾರೆ. ಹೊಸ ಪೋಸ್ಟರ್​ನಲ್ಲಿ ರಾಮಚರಿತಮಾನಸದ ವಿವರಗಳನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಮ ಧರಿಸಿದ ವಸ್ತ್ರ ಸರಿಯಾಗಿಲ್ಲ. ಜನಿವಾರವನ್ನು ತೆಗೆಯಕಲಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿಂದೆ ಟೀಸರ್​ ಬಿಡುಗಡೆ ಆದಾಗಲೂ ಕಿರಿಕ್​ ಮಾಡಲಾಗಿತ್ತು.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

‘ಆದಿಪುರುಷ್​​’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್​ ಆದೇಶ

ಚಿತ್ರಕ್ಕೆ ನೂರಾರು ಕೋಟಿ ಸುರಿಯಲಾಗಿದೆ. ಗ್ರಾಫಿಕ್ಸ್ ಗಮನ ಸೆಳೆಯಲಿದೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ ಆಗಿತ್ತು. ಆದರೆ, ಈ ನಿರೀಕ್ಷೆ ಸುಳ್ಳಾಯಿತು. ಕಳೆದ ವರ್ಷ ರಿಲೀಸ್ ಆದ ಟೀಸರ್ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ನುಚ್ಚು ನೂರು ಮಾಡಿತ್ತು. ಇದೇ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ ಎಂದು ವರದಿ ಆಗಿತ್ತು.

View this post on Instagram

A post shared by Prabhas (@actorprabhas)

‘ಆದಿಪುರುಷ್​’ ಸಿನಿಮಾದ ದೃಶ್ಯಗಳಲ್ಲಿನ ಗ್ರಾಫಿಕ್ಸ್​ನಲ್ಲಿ ಕೆಲ ಬದಲಾವಣೆ ಮಾಡಲು ತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಆದರೆ, ಹೊಸ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ರಾಮ, ಲಕ್ಷ್ಮಣ ಹಾಗೂ ಸೀತೆ ನಿಂತಿದ್ದಾರೆ. ಹನುಮಂತ ಇವರಿಗೆ ನಮಿಸುತ್ತಿದ್ದಾನೆ. ಈ ರೀತಿಯಲ್ಲಿ ಪೋಸ್ಟರ್ ಮೂಡಿಬಂದಿದೆ. ಅದರಲ್ಲಿನ ತಪ್ಪುಗಳನ್ನು ಗುರುತಿಸಿ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

ಈ ಚಿತ್ರವನ್ನು ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ಭುಷಣ್ ಕುಮಾರ್, ಕೃಷನ್ ಕುಮಾರ್, ಓಂ ರಾವತ್​, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ನಿರ್ಮಾಣ ಮಾಡುತ್ತಿದ್ದಾರೆ. ‘ಆದಿಪುರುಷ್​’ ಸಿನಿಮಾ ಜೂನ್​ 16ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಆದರೆ ನಿರ್ದೇಶಕ ಓಂ ರಾವತ್​ ಅವರು ಸರಿಯಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಪ್ರಭಾಸ್​ ಫ್ಯಾನ್ಸ್ ಗರಂ ಆಗಿದ್ದಾರೆ. ಸ್ಟಾರ್​ ನಟರ ಸಿನಿಮಾಗೆ ಎರಡೂವರೆ ತಿಂಗಳು ಮಾತ್ರ ಬಾಕಿ ಇದೆ ಎಂದಾಗ ಭರ್ಜರಿಯಾಗಿ ಪ್ರಚಾರ ಕಾರ್ಯ ಆರಂಭ ಆಗುತ್ತದೆ. ಆದರೆ ಓಂ ರಾವತ್​ ಸುಮ್ಮನೆ ಕುಳಿತಿರುವುದಕ್ಕೆ ಅವರನ್ನು ಪ್ರಭಾಸ್​ ಫ್ಯಾನ್ಸ್​ ಟ್ರೋಲ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:26 pm, Wed, 5 April 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ