‘ನಿರ್ಮಾಪಕರ ಖಾಸಗಿ ಬೇಡಿಕೆಗೆ ಒಪ್ಪದ್ದಕ್ಕೆ ಸಿನಿಮಾದಿಂದ ಹೊರಗಿಟ್ಟರು’; ನಟಿಯ ಅಳಲು

ಇದು ಯಾವ ಸಿನಿಮಾ, ಅದರ ನಿರ್ಮಾಪಕರು ಯಾರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅದಿತಿ ಅವರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಅದಿತಿ ಅವರು ಸದ್ಯ ‘ಭೇಜಾ ಫ್ರೈ 2’ ಹಾಗೂ ‘ಪಹೇಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

‘ನಿರ್ಮಾಪಕರ ಖಾಸಗಿ ಬೇಡಿಕೆಗೆ ಒಪ್ಪದ್ದಕ್ಕೆ ಸಿನಿಮಾದಿಂದ ಹೊರಗಿಟ್ಟರು’; ನಟಿಯ ಅಳಲು
ಅದಿತಿ
Edited By:

Updated on: Dec 06, 2023 | 2:45 PM

ಮೀ ಟೂ ಅಭಿಯಾನ ಶುರುವಾದಾಗ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಅನೇಕ ನಟಿಯರು ಮಾತನಾಡಿದ್ದಾರೆ. ಸಾಕಷ್ಟು ಹೀರೋಯಿನ್​ಗಳು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ನಿರ್ಮಾಪಕರು, ನಟರು ಇಡುವ ಖಾಸಗಿ ಬೇಡಿಕೆಗಳನ್ನು ಪೂರೈಸದೇ ಇರುವುದಕ್ಕೆ ಸಾಕಷ್ಟು ಸಿನಿಮಾ ಆಫರ್​ಗಳನ್ನು ಕಳೆದುಕೊಂಡ ಬಗ್ಗೆ ಅನೇಕ ನಟಿಯರು ಹೇಳಿಕೊಂಡಿದ್ದಾರೆ. ಈಗ ಸೂಪರ್ ಮಾಡೆಲ್ ಹಾಗೂ ನಟಿ ಅದಿತಿ ಗೋವಿತ್ರಿಕರ್ (Aditi Govitrikar) ಕೂಡ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

1999ರಲ್ಲಿ ರಿಲೀಸ್ ಆದ ‘ತಮ್ಮುಡು’ ಸಿನಿಮಾ ಮೂಲಕ ಅದಿತಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. 2001ರಲ್ಲಿ ಅವರು ‘ಮಿಸಸ್ ವರ್ಲ್ಡ್​’ ಟೈಟಲ್ ಪಡೆದರು. ಈ ಟೈಟಲ್ ಪಡೆದ ಮೊದಲ ಮಹಿಳೆ ಎನ್ನುವ ಖ್ಯಾತಿ ಅವರಿಗೆ ಸಿಕ್ಕಿದೆ.  ಅವರಿಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು.

ಸಿದ್ದಾರ್ಥ್ ಖನ್ನಾ ಅವರ ಜೊತೆಗಿನ ಸಂದರ್ಶನದಲ್ಲಿ ಅದಿತಿ ಮಾತನಾಡಿದ್ದಾರೆ. ‘ದೊಡ್ಡ ಸಿನಿಮಾ ಶೂಟಿಂಗ್​ಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದೆ. ಆ ವ್ಯಕ್ತಿ ಮಾಡುತ್ತಿದ್ದ ಕೆಲವು ವರ್ತನೆಗಳ ಹಿಂದಿನ ಉದ್ದೇಶ ನನಗೆ ಗೊತ್ತಾಗಲಿಲ್ಲ. ಹೀಗಾಗಿ ನಾನು ನಕ್ಕು ಅಲ್ಲಿಂದ ನಡೆದೆ ಮತ್ತು ನೀವು ಮೂರ್ಖರಾ ಎಂದು ಕೇಳಿದೆ. ಇದು ಅವರ ಅಹಂಗೆ ಪೆಟ್ಟು ಕೊಟ್ಟಿತು. ಆ ಕ್ಷಣವೇ ಶೂಟಿಂಗ್​ ಮುಗಿಯಿತು ಎಂದರು. ಮರುದಿನ ಮುಂಬೈಗೆ ಬರಬೇಕಾಯಿತು. ಹೀಗೇಕೆ ಹೇಳಿದರು ಎಂಬುದೇ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಅದಿತಿ.

‘ನಂತರ ಮತ್ತೆ ನನ್ನನ್ನು ಕರೆದರು. ನಾಲ್ಕು ದಿನದ ಶೂಟ್ ಬಾಕಿ ಇತ್ತು. ಆದರೆ, ಆ ಸಂದರ್ಭದಲ್ಲಿ ಅವರು ಬೇರೆ ಬೇರೆ ರೀತಿಯ ಕಾರಣಗಳನ್ನು ನೀಡುತ್ತಿದ್ದರು. ಆಗ ನನಗೆ ಎಲ್ಲವೂ ಅರಿವಾಯಿತು. ನಾನು ಅವರ ಆಸೆಯಂತೆ ನಡೆದುಕೊಳ್ಳಲಿಲ್ಲ, ಹೀಗಾಗಿ ಸಿನಿಮಾದಿಂದ ನನ್ನನ್ನು ತೆಗೆದರು ಅನ್ನೋದು ಅರಿವಿಗೆ ಬಂತು’ ಎಂದಿದ್ದಾರೆ ಅದಿತಿ.

ಇದನ್ನೂ ಓದಿ: ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಒಬ್ಬ ನಟ ನನ್ನ ಹಿಂದೆ ಬಿದ್ದಿದ್ದ: ಹನ್ಸಿಕಾ ಮೊಟ್ವಾನಿ

ಇದು ಯಾವ ಸಿನಿಮಾ, ಅದರ ನಿರ್ಮಾಪಕರು ಯಾರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅದಿತಿ ಅವರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಅದಿತಿ ಅವರು ಸದ್ಯ ‘ಭೇಜಾ ಫ್ರೈ 2’ ಹಾಗೂ ‘ಪಹೇಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:31 pm, Wed, 6 December 23