ಬಿಡುಗಡೆಯಾಗಿ 10 ದಿನ ಕಳೆದಿದ್ದರೂ ಕೂಡ ‘ಅನಿಮಲ್’ (Animal) ಸಿನಿಮಾದ ಹವಾ ಕಡಿಮೆ ಆಗಿಲ್ಲ. ಈ ಸಿನಿಮಾದಲ್ಲಿ ಹೆಚ್ಚು ಕ್ರೌರ್ಯ ಇದೆ ಎಂದು ಅನೇಕರು ಟೀಕಿಸಿದ್ದಾರೆ. ಹಾಗಿದ್ದರೂ ಕೂಡ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ಗೆಲ್ಲಿಸಿದ್ದಾರೆ. ಹಿಂಸೆಯ ವಿಜೃಂಭಣೆ ಮಾಡಲಾಗಿದೆ, ಅಸಭ್ಯ ಭಾಷೆ ಬಳಸಲಾಗಿದೆ ಎಂಬ ಕಾರಣಕ್ಕೆ ಈ ಸಿನಿಮಾಗೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿತ್ತು. ಈಗ ‘ಸಲಾರ್’ (Salaar) ಸಿನಿಮಾಗೂ ಸೆನ್ಸಾರ್ ಬೋರ್ಡ್ನಿಂದ ‘ಎ’ ಸರ್ಟಿಫಿಕೇಟ್ (A certificate) ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
ಪ್ರಭಾಸ್ ಅವರು ‘ಸಲಾರ್’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರ ಸಿನಿಮಾಗಳಲ್ಲಿ ಅಭಿಮಾನಿಗಳು ಆ್ಯಕ್ಷನ್ ಬಯಸುತ್ತಾರೆ. ‘ಸಲಾರ್’ ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ದೃಶ್ಯಗಳು ಇರಲಿವೆ ಎಂದು ‘ಹೊಂಬಾಳೆ ಫಿಲ್ಸ್’ ಈಗಾಗಲೇ ಹೇಳಿದೆ. ಅದ್ದರಿಂದ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
Censor done for #SalaarCeaseFire 🔥
Get ready for an intense ‘𝐀’ction drama in cinemas from December 22nd 💥#Salaar #Prabhas #PrashanthNeel @PrithviOfficial @shrutihaasan @VKiragandur @hombalefilms @IamJagguBhai @sriyareddy @bhuvangowda84 @RaviBasrur @vchalapathi_art @anbariv… pic.twitter.com/OdP97BN0GZ
— Hombale Films (@hombalefilms) December 11, 2023
ಯಾವುದೇ ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕರೆ 18 ವರ್ಷಕ್ಕಿಂತ ಕಿರಿಯರು ಆ ಸಿನಿಮಾವನ್ನು ನೋಡುವಂತಿಲ್ಲ. ಇದರಿಂದ ಮಕ್ಕಳ ಜೊತೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗಲಿದೆ. ಅದರ ನಡುವೆಯೂ ಕೆಲವು ಸಿನಿಮಾಗಳು ಅಬ್ಬರಿಸುತ್ತವೆ. ಈಗ ‘ಸಲಾರ್’ ಸಿನಿಮಾ ಎ ಪ್ರಮಾಣಪತ್ರ ಪಡೆದುಕೊಂಡಿದೆ. ‘ಅನಿಮಲ್’ ರೀತಿಯೇ ‘ಸಲಾರ್’ ಕೂಡ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಾ ಎಂದು ಕಾದುನೋಡಬೇಕು.
ಇದನ್ನೂ ಓದಿ: ‘ಸಲಾರ್’ ವರ್ಸಸ್ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್ ಖಾನ್ ಮೇಲುಗೈ
‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಮಾಲಿವುಡ್ನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೂ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಇದೆ. ಟ್ರೇಲರ್ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ. ಕೆಲವರು ಈ ಚಿತ್ರವನ್ನು ‘ಉಗ್ರಂ’ ರಿಮೇಕ್ ಎನ್ನುತ್ತಿದ್ದಾರೆ. ಅದು ಹೌದೋ, ಅಲ್ಲವೋ ಎಂಬುದು ಬಿಡುಗಡೆ (ಡಿ.22) ನಂತರವೇ ತಿಳಿಯಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.