ತೀವ್ರ ಟೀಕೆ ನಡುವೆಯೂ ‘ಅನಿಮಲ್​’ ಚಿತ್ರ 9 ದಿನದಲ್ಲಿ ಗಳಿಸಿದ್ದು ಎಷ್ಟು?

‘ಅನಿಮಲ್​’ ಸಿನಿಮಾದ ಯಶಸ್ಸಿನಿಂದ ರಣಬೀರ್​ ಕಪೂರ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಬಾಬಿ ಡಿಯೋಲ್​, ಅನಿಲ್​ ಕಪೂರ್​, ತೃಪ್ತಿ ದಿಮ್ರಿ, ರಶ್ಮಿಕಾ ಮಂದಣ್ಣ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಡುಗಡೆಯಾಗಿ 9 ದಿನ ಕಳೆದರೂ ಕೂಡ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ.

ತೀವ್ರ ಟೀಕೆ ನಡುವೆಯೂ ‘ಅನಿಮಲ್​’ ಚಿತ್ರ 9 ದಿನದಲ್ಲಿ ಗಳಿಸಿದ್ದು ಎಷ್ಟು?
ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Dec 10, 2023 | 8:20 AM

ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ (Animal Movie) ಕುರಿತಂತೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಸಿನಿಮಾದಲ್ಲಿ ಹಿಂಸೆಯನ್ನು ವಿಜೃಂಭಿಸಲಾಗಿದೆ. ಮಹಿಳೆಯರ ಬಗ್ಗೆ ಅವಹೇಳನ ಮಾಡುವಂತಹ ದೃಶ್ಯಗಳು ಇವೆ. ಅಸಭ್ಯವಾದ ಭಾಷೆ ಬಳಕೆ ಆಗಿದೆ. ಈ ಕಾರಣದಿಂದ ಸಿನಿಮಾಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಹಾಗಿದ್ದರೂ ಕೂಡ ‘ಅನಿಮಲ್​’ ಸಿನಿಮ ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ರಣಬೀರ್​ ಕಪೂರ್​ (Ranbir Kapoor) ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಒಳಗಾಗಿದೆ. 9 ದಿನದಲ್ಲಿ ‘ಅನಿಮಲ್​’ ಸಿನಿಮಾ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಮಾಡಿದ ಕಲೆಕ್ಷನ್​ ಬಗ್ಗೆ ಇಲ್ಲದೆ ಮಾಹಿತಿ..

ಮೊದಲ ದಿನ ‘ಅನಿಮಲ್​’ ಚಿತ್ರಕ್ಕೆ 52 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನ 57 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ 61 ಕೋಟಿ, ನಾಲ್ಕನೇ ದಿನ 38 ಕೋಟಿ, ಐದನೇ ದಿನ 32 ಕೋಟಿ, 6ನೇ ದಿನ 26 ಕೋಟಿ, 7ನೇ ದಿನ 22 ಕೋಟಿ, 8ನೇ ದಿನ 21 ಕೋಟಿ, 9ನೇ ದಿನ 34 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಈವರೆಗೆ ಒಟ್ಟು 344 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

ಇದನ್ನೂ ಓದಿ: ರಣಬೀರ್​ ಕಪೂರ್​ ಜತೆ ತೃಪ್ತಿ ದಿಮ್ರಿ ಬೋಲ್ಡ್​ ಪಾತ್ರ: ‘ಅನಿಮಲ್​’ ಚಿತ್ರಕ್ಕೆ ಈ ಸುಂದರಿ ಆಯ್ಕೆ ಆಗಿದ್ದು ಹೇಗೆ?

‘ಅನಿಮಲ್​’ ಸಿನಿಮಾದ ಯಶಸ್ಸಿನಿಂದ ರಣಬೀರ್​ ಕಪೂರ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಾಬಿ ಡಿಯೋಲ್​, ಅನಿಲ್​ ಕಪೂರ್​, ತೃಪ್ತಿ ದಿಮ್ರಿ, ರಶ್ಮಿಕಾ ಮಂದಣ್ಣ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂದೀಪ್​ ರೆಡ್ಡಿ ವಂಗ ಅವರು ‘ಅನಿಮಲ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ಚಿತ್ರವನ್ನು ಕ್ಲಾಸಿಕ್​ ಎಂದು ಹೊಗಳಿದ ಅಲ್ಲು ಅರ್ಜುನ್​; ರಶ್ಮಿಕಾ ನಟನೆಗೂ ಮೆಚ್ಚುಗೆ

2ನೇ ವೀಕೆಂಡ್​ನಲ್ಲಿ ‘ಅನಿಮಲ್​’ ಸಿನಿಮಾ ಉತ್ತಮವಾಗಿ ಕಮಾಯಿ ಮಾಡುತ್ತಿದೆ. ಹಲವು ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಅಂತಿಮವಾಗಿ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದುನೋಡಬೇಕು. ಈ ಸಿನಿಮಾಗೆ ಸೀಕ್ವೆಲ್​ ಕೂಡ ಬರಲಿದೆ ಎಂಬುದಕ್ಕೆ ಚಿತ್ರದ ಕೊನೆಯಲ್ಲಿ ಸುಳಿವು ನೀಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್