AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಂಕಿ’ ಬಿಡುಗಡೆಗೆ ಕೆಲವೇ ದಿನ ಬಾಕಿ, ಈಗಲೂ ಚಿತ್ರೀಕರಣದಲ್ಲಿ ತಂಡ

Dunki: ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಈಗಷ್ಟೆ ಚಿತ್ರತಂಡ ದುಬೈನಲ್ಲಿ ಚಿತ್ರೀಕರಣ ಮಾಡಿದೆ.

‘ಡಂಕಿ’ ಬಿಡುಗಡೆಗೆ ಕೆಲವೇ ದಿನ ಬಾಕಿ, ಈಗಲೂ ಚಿತ್ರೀಕರಣದಲ್ಲಿ ತಂಡ
ಡಂಕಿ
Follow us
ಮಂಜುನಾಥ ಸಿ.
|

Updated on: Dec 10, 2023 | 9:51 PM

ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ (Dunki) ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಹಾಡು, ಟೀಸರ್, ಟ್ರೈಲರ್​ಗಳು ಈಗಾಗಲೇ ಬಿಡುಗಡೆ ಆಗಿ ವೈರಲ್ ಆಗಿವೆ. ಡ್ರಾಪ್ 1, ಡ್ರಾಪ್ 2, ಡ್ರಾಪ್ 3 ಹೆಸರಿನಲ್ಲಿ ಅವುಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಡ್ರಾಪ್ 4 ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಇದಕ್ಕಾಗಿ ಭರದಿಂದ ಚಿತ್ರೀಕರಣವನ್ನೂ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ಹತ್ತು ದಿನವಷ್ಟೆ ಸಮಯ ಇದೆ ಈ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ!

ಪಠಾಣ್ ಮತ್ತು ಜವಾನ್ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್ ಬಾದ್ಷಾ ಶಾರುಖ್ ಖಾನ್, ತಮ್ಮ ಮುಂದಿನ ಸಿನಿಮಾ “ಡಂಕಿ”ಗಾಗಿ ಎದುರು ನೋಡುತ್ತಿದ್ದಾರೆ. ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ರಾಜ್​ ಕುಮಾರ್ ಹಿರಾನಿ ನಿರ್ದೇಶನ ಡಂಕಿ ಸಿನಿಮಾ, ಡಿ.21ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಟ್ರೈಲರ್ನಿಂದಲೇ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.

ಡಂಕಿ ಡ್ರಾಪ್-3 ಬಳಿಕ ಡಂಕಿ ಡ್ರಾಪ್-4 ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಭರದಿಂದ ಚಿತ್ರೀಕರಣ ನಡೆಸಲಾಗಿದೆ. ಬಿಡುಗಡೆ ಸಜ್ಜಾಗಿರುವ ಹೊತ್ತಲ್ಲೇ ಇದೀಗ ಚಿತ್ರೀಕರಣ ಮಾಡುತ್ತಿದ್ದಾರೆಯೇ ಎಂದು ಹುಬ್ಬೇರಿಸುವುದು ಬೇಡ. ‘ಡಂಕಿ’ ಚಿತ್ರದ ಸ್ಪೆಷಲ್ ನಂಬರ್ ಇತ್ತೀಚಿಗಷ್ಟೇ ಅಬುದಬಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಪುತ್ರಿ ಸುಹಾನಾ ಖಾನ್ ಅವರ ಹೊಸ ಸಿನಿಮಾದ ಪ್ರೀಮಿಯರ್ ಮುಗಿಸಿದ ಕೂಡಲೇ ಯುಎಇಗೆ ಹಾರಿದ ಶಾರುಖ್ ಖಾನ್ ಅಲ್ಲಿ ತಂಡವನ್ನು ಸೇರಿಕೊಂಡಿದ್ದರು. ಮೂರು ದಿನ ಸ್ಪೆಷಲ್ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಡ್ರಾಪ್ 4 ಶೀಘ್ರವೇ ಬಿಡುಗಡೆ ಸಹ ಆಗಲಿದೆ.

ಇದನ್ನೂ ಓದಿ:‘ಸಲಾರ್​’ ಬಿಡುಗಡೆಗೂ ಮುನ್ನವೇ ಅಬ್ಬರಿಸಲಿದೆ ‘ಡಂಕಿ’; ಪ್ರಭಾಸ್​ಗಿಂತ ಒಂದು ದಿನ ಮುಂಚೆ ಶಾರುಖ್​ ಖಾನ್​ ಆಗಮನ

‘ಡಂಕಿ’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ನಟಿ ತಾಪ್ಪಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ವಿಕ್ಕಿ ಕೌಶಲ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬೊಮನ್ ಇರಾನಿ ಇನ್ನೂ ಕೆಲವು ಪ್ರಮುಖ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾನೂನು ಬಾಹಿರವಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವ ವಲಸಿಗರ ಕತೆಯನ್ನು ‘ಡಂಕಿ’ ಸಿನಿಮಾ ಒಳಗೊಂಡಿದೆ. ನಾಲ್ಕು ಜನ ಸ್ನೇಹಿತರು ಅಕ್ರಮವಾಗಿ ಲಂಡನ್​ಗೆ ವಲಸೆ ಹೋಗುವುದೇ ‘ಡಂಕಿ’ ಸಿನಿಮಾದ ಕತೆ.ಸಂಜು ಸಿನಿಮಾದ ಬ್ಲಾಕ್ ಬಸ್ಟರ್ ಸಕ್ಸಸ್ ಬಳಿಕ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಡಂಕಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಡಂಕಿ’ ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ.

ಶಾರುಖ್ ಖಾನ್ ನಟನೆಯ ಎರಡು ಸಿನಿಮಾಗಳು ಈ ವರ್ಷ ಈಗಾಗಲೇ ಬಿಡುಗಡೆ ಆಗಿದ್ದು, ಈ ವರ್ಷ ಬಿಡುಗಡೆ ಆಗುತ್ತಿರುವ ಶಾರುಖ್ ನಟನೆಯ ಮೂರನೇ ಸಿನಿಮಾ ಆಗಿರಲಿದೆ ‘ಡಂಕಿ’. ಈ ಮೊದಲು ಬಿಡುಗಡೆ ಆಗಿರುವ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾ ಎರಡೂ ಸೂಪರ್ ಡೂಪರ್ ಹಿಟ್ ಆಗಿದೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆದಿವೆ. ಇದೀಗ ‘ಡಂಕಿ’ ಸಿನಿಮಾ ಸಹ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ