ವಿಚ್ಛೇದನದ ಬಳಿಕ ಮತ್ತೆ ನಟನೆಗೆ ಮರಳಿದ ಚಿರಂಜೀವಿ ಮನೆ ಮಗಳು ನಿಹಾರಿಕಾ ಕೊನಿಡೆಲಾ

ನಿಹಾರಿಕಾ ಬಣ್ಣದ ಲೋಕಕ್ಕೆ 2016ರಲ್ಲಿ ಕಾಲಿಟ್ಟರು. ‘ಒಕ ಮನಸು’ ಅವರ ನಟನೆಯ ಮೊದಲ ಚಿತ್ರ. ಈ ಚಿತ್ರಕ್ಕೆ ನಾಗ ಶೌರ್ಯ ಅವರು ಹೀರೋ ಆಗಿದ್ದರು. ಈ ಸಿನಿಮಾ ಗೆಲುವು ಕಾಣಲಿಲ್ಲ. ನಂತರ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದರು. ಈಗ ಅವರು ಐದು ವರ್ಷಗಳ ಬಳಿಕ ಕಂಬ್ಯಾಕ್ ಮಾಡುತ್ತಿದ್ದಾರೆ.

ವಿಚ್ಛೇದನದ ಬಳಿಕ ಮತ್ತೆ ನಟನೆಗೆ ಮರಳಿದ ಚಿರಂಜೀವಿ ಮನೆ ಮಗಳು ನಿಹಾರಿಕಾ ಕೊನಿಡೆಲಾ

Updated on: Feb 02, 2024 | 10:37 AM

ನಟಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು 2023ರಲ್ಲಿ ಸಖತ್ ಸುದ್ದಿ ಆಗಿದ್ದರು. ಅವರು ಪತಿ ಚೈತನ್ಯ ಅವರಿಂದ ವಿಚ್ಛೇದನ ಪಡೆದರು. ವಿಚ್ಛೇದನದ ಬಳಿಕ ಅವರು ನಟನೆಗೆ ಕಂಬ್ಯಾಕ್ ಮಾಡೋಕೆ ರೆಡಿ ಆಗಿದ್ದಾರೆ. ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅವರನ್ನು ದೊಡ್ಡ ಪರದೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. 2019ರಿಂದ ಈಚೆಗೆ ಅವರು ನಟನೆಯಿಂದ ದೂರ ಇದ್ದರು. ನಿರ್ಮಾಣ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಐದು ವರ್ಷಗಳ ಬಳಿಕ ಅವರ ಕಂಬ್ಯಾಕ್ ಆಗುತ್ತಿದೆ.

ನಿಹಾರಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2016ರಲ್ಲಿ. ‘ಒಕ ಮನಸು’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರಕ್ಕೆ ನಾಗ ಶೌರ್ಯ ಅವರು ಹೀರೋ. ಈ ಸಿನಿಮಾ ಗೆಲುವು ಕಾಣಲಿಲ್ಲ. ನಂತರ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ಯೂಟ್ಯೂಬ್ ವಿಡಿಯೋಗಳನ್ನು ಅವರು ಮಾಡಿದರು. ನಂತರ ನಿರ್ಮಾಣದತ್ತ ಹೊರಳಿದರು. ಅನೇಕ ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ. ಈಗ ಅವರು ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.

ನಿಹಾರಿಕಾ ಮುಂದಿನ ಸಿನಿಮಾ ಕುರಿತ ಪೋಸ್ಟ್​

ನಿಹಾರಿಕಾ ಹೊಸ ಸಿನಿಮಾ ತಮಿಳಿನಲ್ಲಿ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ‘ಮದ್ರಾಸ್ಕರನ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮಲಯಾಳಂ ನಟ ಶೇನ್ ನಿಗಮ್ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಶೇನ್ ಅವರ ಮೊದಲ ತಮಿಳು ಸಿನಿಮಾ. ನಿಹಾರಿಕಾಗೆ ಇದು ಎರಡನೇ ತಮಿಳು ಚಿತ್ರ. ಈ ಮೊದಲು ನಿಹಾರಿಕಾ ‘ಒರು ನಲ್ಲ ಬಾಲ್ ಪಾತು ಸೊಲ್ರನ್’ ಹೆಸರಿನ ತಮಿಳು ಸಿನಿಮಾದಲ್ಲಿ ಅವರು ನಟಿಸಿದ್ದರು.

ಇದನ್ನೂ ಓದಿ: ಸಮಂತಾ, ನಿಹಾರಿಕಾ ಬಳಿಕ ಮತ್ತೊಂದು ನಟಿಯ ವಿಚ್ಛೇದನ? ಮತ್ತದೇ ಪ್ಯಾಟರ್ನ್​

ನಿಹಾರಿಕಾ ಅವರು ನಾಗೇಂದ್ರ ಬಾಬು ಮಗಳು. 2020ರಲ್ಲಿ ಚೈತನ್ಯ ಹಾಗೂ ನಿಹಾರಿಕಾ ಅದ್ದೂರಿಯಾಗಿ ಮದುವೆ ಆದರು. ಚಿರಂಜೀವಿ ಸೇರಿ ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಿ ಹಾಕಿದ್ದರು. ಆದರೆ, ಮೂರೇ ವರ್ಷದಲ್ಲಿ ಇವರ ಸಂಬಂಧ ಮುರಿದು ಬಿತ್ತು. 2023ರ ವೇಳೆಗೆ ಚೈತನ್ಯ ಹಾಗೂ ನಿಹಾರಿಕಾ ಬೇರೆ ಆದರು. ವಿಚ್ಛೇದನ ವಿಚಾರವನ್ನು ನಿಹಾರಿಕಾ ಅವರೇ ಖಚಿತಪಡಿಸಿದ್ದರು. ಈಗ ಅವರು ಮತ್ತೆ ನಟನೆಯತ್ತ ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us