‘ಇಂಡಿಯನ್ 2’ ಕಳಪೆ ಪ್ರದರ್ಶನ; ರಾಮ್ ಚರಣ್ ಫ್ಯಾನ್ಸ್​ಗೂ ಶುರುವಾಗಿದೆ ಆತಂಕ

‘ಇಂಡಿಯನ್ 2’ ಸಿನಿಮಾ ಸೆಟ್ಟೇರಿದ್ದು 2019ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಸಿನಿಮಾ ಶೂಟ್ ಮಾಡುತ್ತಲೇ ಬರಲಾಗುತ್ತಿತ್ತು. ಶಂಕರ್ ಅವರು ಈ ಚಿತ್ರಕ್ಕಾಗಿ ಸುದೀರ್ಘ ಸಮಯ ತೆಗೆದುಕೊಂಡರು. ಹೀಗಾಗಿ, ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬಂದಿಲ್ಲ. ಈಗ ರಾಮ್ ಚರಣ್ ಸಿನಿಮಾ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.

‘ಇಂಡಿಯನ್ 2’ ಕಳಪೆ ಪ್ರದರ್ಶನ; ರಾಮ್ ಚರಣ್ ಫ್ಯಾನ್ಸ್​ಗೂ ಶುರುವಾಗಿದೆ ಆತಂಕ
ರಾಮ್ ಚರಣ್
Edited By:

Updated on: Jul 13, 2024 | 7:50 AM

ಶಂಕರ್ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಹೆಚ್ಚಿನ ಭರವಸೆ ಇರುತ್ತಿತ್ತು. ಅವರ ನಿರ್ದೇಶನದ ಚಿತ್ರಗಳು ಯಶಸ್ಸು ಕಂಡಿದ್ದೇ ಹೆಚ್ಚು. ಆದರೆ, ಈಗ ‘ಇಂಡಿಯನ್ 2’ ಸಿನಿಮಾ ರಿಲೀಸ್ ಆದಮೇಲೆ ಅವರ ನಿರ್ದೇಶನದ ಸಿನಿಮಾಗಳ ಬಗ್ಗೆ ಇದ್ದ ಭರವಸೆ ಹೋಗಿದೆ. ಹೌದು, ಕಮಲ್ ಹಾಸನ್, ಸಿದ್ದಾರ್ಥ್ ಮೊದಲಾದವರು ನಟಿಸಿರೋ ‘ಇಂಡಿಯನ್ 2’ ಸಿನಿಮಾ ಹೀನಾಯವಾಗಿ ಸೋಲುವ ಸೂಚನೆ ಸಿಕ್ಕಿದೆ. ಈ ಬೆನ್ನಲ್ಲೇ ರಾಮ್ ಚರಣ್ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಅದಕ್ಕೆ ಕಾರಣ ಆಗಿರೋದು ‘ಗೇಮ್ ಚೇಂಜರ್’ ಚಿತ್ರ.

‘ಇಂಡಿಯನ್ 2’ ಸಿನಿಮಾ ಸೆಟ್ಟೇರಿದ್ದು 2019ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಸಿನಿಮಾ ಶೂಟ್ ಮಾಡುತ್ತಲೇ ಬರಲಾಗುತ್ತಿತ್ತು. ಶಂಕರ್ ಅವರು ಈ ಚಿತ್ರಕ್ಕಾಗಿ ಸುದೀರ್ಘ ಸಮಯ ತೆಗೆದುಕೊಂಡರು. ಹೀಗಾಗಿ, ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬಂದಿಲ್ಲ. ಈ ಚಿತ್ರಕ್ಕೆ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ನಲ್ಲಿ ಸಿಕ್ಕಿರೋದು ಕೇವಲ 6.3 ರೇಟಿಂಗ್. ಭಾರತದಲ್ಲಿ ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 26 ಕೋಟಿ ರೂಪಾಯಿ. ಸಿನಿಮಾದ ಅವಧಿ 3 ಗಂಟೆ ಇರುವುದರಿಂದ ಸಿನಿಮಾ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿದೆ.

ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಇದೇ ಎಸ್​. ಶಂಕರ್. ಈ ಚಿತ್ರ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಇತ್ತೀಚೆಗಷ್ಟೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ರಾಮ್ ಚರಣ್ ಸರಿ ಸುಮಾರು ಮೂರು ವರ್ಷ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ‘ಇಂಡಿಯನ್ 2’ ಚಿತ್ರಕ್ಕೆ ಆದ ಗತಿಯೇ ಈ ಚಿತ್ರಕ್ಕೂ ಆದರೆ ಏನು ಎನ್ನುವ ಭಯ ರಾಮ್ ಚರಣ್ ಅಭಿಮಾನಿಗಳನ್ನು ಕಾಡಿದೆ.

‘ಆರ್​ಆರ್​ಆರ್’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಬಿಡುಗಡೆ ಆಗಿದ್ದು ‘ಆಚಾರ್ಯ’ ಸಿನಿಮಾ. ಈ ಚಿತ್ರ ಹೀನಾಯ ಸೋಲು ಕಂಡಿತು. ಸದ್ಯ ವಿಕಿಪೀಡಿಯಾದಲ್ಲಿ ಇರೋ ಮಾಹಿತಿ ಪ್ರಕಾರ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರ 2025ರಲ್ಲಿ ಬಿಡುಗಡೆ ಆಗಲಿದೆ ಎಂದಿದೆ. ಇದು ನಿಜವೇ ಆದಲ್ಲಿ ಫ್ಯಾನ್ಸ್ ಈ ಚಿತ್ರಕ್ಕಾಗಿ ಮತ್ತಷ್ಟು ದಿನ ಕಾಯಬೇಕು.

ಇದನ್ನೂ ಓದಿ: ರಾಮ್ ಚರಣ್ ಬರ್ತ್​ಡೇಗೆ ‘ಗೇಮ್ ಚೇಂಜರ್’ ಸಾಂಗ್ ರಿಲೀಸ್; ಗಮನ ಸೆಳೆದ ಕಾಂಬಿನೇಷನ್

ಸದ್ಯ ‘ಗೇಮ್ ಚೇಂಜರ್’ ಸಿನಿಮಾದಿಂದ ಪೋಸ್ಟರ್​ಗಳು ಮಾತ್ರ ರಿಲೀಸ್ ಆಗಿವೆ. ಸಿನಿಮಾದ ಟೀಸರ್ ಹಾಗೂ ಟ್ರೇಲರ್ ರಿಲೀಸ್ ಆದರೆ ಸಿನಿಮಾ ಹೇಗೆ ಮೂಡಿ ಬಂದಿರಬಹುದು ಎನ್ನುವ ಐಡಿಯಾ ಫ್ಯಾನ್ಸ್​ಗೆ ಸಿಗುತ್ತದೆ. ಅಲ್ಲಿಯವರೆಗೆ ಫ್ಯಾನ್ಸ್ ಆತಂಕದಲ್ಲೇ ಇರಬೇಕಾದ ಅನಿವಾರ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.