ರಾಮ್ ಚರಣ್ ಬರ್ತ್​ಡೇಗೆ ‘ಗೇಮ್ ಚೇಂಜರ್’ ಸಾಂಗ್ ರಿಲೀಸ್; ಗಮನ ಸೆಳೆದ ಕಾಂಬಿನೇಷನ್

ಸಿನಿಮಾ ರಿಲೀಸ್​ಗೂ ಮೊದಲು ಚಿತ್ರತಂಡದವರು ಸಾಂಗ್ ರಿಲೀಸ್ ಮಾಡುವ ವಾಡಿಕೆ ಮೊದಲಿನಿಂದಲೂ ಇದೆ. ಅದೇ ರೀತಿ ‘ಗೇಮ್ ಚೇಂಜರ್’ ಸಿನಿಮಾ ತಂಡದಿಂದ ‘ಜರಗಂಡಿ..’ ಹಾಡು ರಿಲೀಸ್ ಮಾಡಲಾಗಿದೆ. ಈ ಹಾಡಿನಲ್ಲಿ ಕಿಯಾರಾ ಹಾಗೂ ರಾಮ್ ಚರಣ್ ಸ್ಟಿಲ್​ಗಳನ್ನು ಬಳಕೆ ಮಾಡಲಾಗಿದೆ.

ರಾಮ್ ಚರಣ್ ಬರ್ತ್​ಡೇಗೆ ‘ಗೇಮ್ ಚೇಂಜರ್’ ಸಾಂಗ್ ರಿಲೀಸ್; ಗಮನ ಸೆಳೆದ ಕಾಂಬಿನೇಷನ್
ಕಿಯಾರಾ-ರಾಮ್ ಚರಣ್
Follow us
ರಾಜೇಶ್ ದುಗ್ಗುಮನೆ
|

Updated on: Mar 27, 2024 | 10:28 AM

ರಾಮ್ ಚರಣ್ (Ram Charan) ಅವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಬಿಟ್ಟರೆ ಯಾವುದೇ ಅಪ್​ಡೇಟ್ ಸಿಕ್ಕಿರಲಿಲ್ಲ. ಈಗ ‘ಗೇಮ್ ಚೇಂಜರ್’ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಇಂದು (ಮಾರ್ಚ್ 27) ರಾಮ್ ಚರಣ್ ಅವರ ಬರ್ತ್​ಡೇ. ಆ ಪ್ರಯುಕ್ತ ತಂಡದವರು ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಹಾಡಿಗೆ ‘ಜರಗಂಡಿ..’ ಎಂದು ಟೈಟಲ್ ಇಡಲಾಗಿದೆ.

ಸಿನಿಮಾ ರಿಲೀಸ್​ಗೂ ಮೊದಲು ಚಿತ್ರತಂಡದವರು ಸಾಂಗ್ ರಿಲೀಸ್ ಮಾಡುವ ವಾಡಿಕೆ ಮೊದಲಿನಿಂದಲೂ ಇದೆ. ಅದೇ ರೀತಿ ‘ಗೇಮ್ ಚೇಂಜರ್’ ಸಿನಿಮಾ ತಂಡದಿಂದ ‘ಜರಗಂಡಿ..’ ಹಾಡು ರಿಲೀಸ್ ಮಾಡಲಾಗಿದೆ. ಈ ಹಾಡಿನಲ್ಲಿ ಕಿಯಾರಾ ಹಾಗೂ ರಾಮ್ ಚರಣ್ ಸ್ಟಿಲ್​ಗಳನ್ನು ಬಳಕೆ ಮಾಡಲಾಗಿದ್ದು ಅವರ ಕಾಂಬಿನೇಷನ್ ಗಮನ ಸೆಳೆದಿದೆ.

ಟಾಲಿವುಡ್​ನಲ್ಲಿ ವಿಶೇಷ ಹಾಡುಗಳಿಗೆ ದೊಡ್ಡ ದೊಡ್ಡ ಸೆಟ್ ಹಾಕಲಾಗುತ್ತದೆ. ‘ಗೇಮ್ ಚೇಂಜರ್’ ಹಾಡಿನ ಶೂಟ್​ಗೂ ಭರ್ಜರಿ ಸೆಟ್ ಬಳಕೆ ಮಾಡಲಾಗಿದೆ ಎಂಬುದು ಈ ಸಾಂಗ್ ಮೂಲಕ ಗೊತ್ತಾಗಿದೆ. ಈ ಹಾಡಿಗೆ ಥಮನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು ರಿಲೀಸ್ ಆದ ಒಂದೇ ಗಂಟೆ ಲಕ್ಷ ಲಕ್ಷ ವೀಕ್ಷಣೆ ಕಂಡಿದೆ. ಫ್ಯಾನ್ಸ್ ಈ ಹಾಡನ್ನು ಇಷ್ಟಪಡುತ್ತಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಕೈಯಲ್ಲಿದೆ ಮೂರು ಬಿಗ್ ಬಜೆಟ್ ಸಿನಿಮಾ

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಆದಾಗ್ಯೂ ಇನ್ನೂ ಸಿನಿಮಾದ ಕೆಲಸ ಮುಗಿದಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ದಿನ ಸಿನಿಮಾ ಬಗ್ಗೆ ಅಪ್​ಡೇಟ್ ಸಿಗದೆ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಬಿಸಿ ಮಾಡಿಕೊಂಡಿದ್ದರು. ಆದರೆ, ಈಗ ಸಾಂಗ್ ರಿಲೀಸ್ ಆಗಿರುವುದರಿಂದ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ