‘ಕಾರ್ತಿಕ್ ಆರ್ಯನ್​ಗೂ ಇದೇ ಗತಿ ಬರುತ್ತದೆ’; ಸುಶಾಂತ್ ಸಾವಿನ ಬಳಿಕ ಮೂಡಿತ್ತು ಆತಂಕ

ಕಾರ್ತಿಕ್ ಆರ್ಯನ್ ಅವರಿಗೆ ಇಂದು (ನವೆಂಬರ್ 22) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಅವರ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಇದು ಕಾರ್ತಿಕ್ ಆರ್ಯನ್ ಖುಷಿ ಹೆಚ್ಚಿಸಿದೆ.

‘ಕಾರ್ತಿಕ್ ಆರ್ಯನ್​ಗೂ ಇದೇ ಗತಿ ಬರುತ್ತದೆ’; ಸುಶಾಂತ್ ಸಾವಿನ ಬಳಿಕ ಮೂಡಿತ್ತು ಆತಂಕ
ಕಾರ್ತಿಕ್ ಆರ್ಯನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 22, 2024 | 7:23 AM

ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ಗೊತ್ತೇ ಇದೆ. ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ವಿಚಾರ ಚರ್ಚೆಯಲ್ಲಿದೆ. 2020ರಲ್ಲಿ ಅವರು ನಿಧನ ಹೊಂದಿದರು. ಆರಂಭದಲ್ಲಿ ಸುಶಾಂತ್ ಅವರದ್ದು ಆತ್ಮಹತ್ಯೆ ಎಂದೇ ಹೇಳಲಾಯಿತು. ಅವರನ್ನು ಬಾಲಿವುಡ್​ನಲ್ಲಿ ಹೊರಗಿನವರು ಎಂದು ಪರಿಗಣಿಸಲಾಗಿತ್ತು. ಇದೇ ಗತಿ ಕಾರ್ತಿಕ್ ಆರ್ಯನ್​ಗೂ ಬರುತ್ತದೆ ಎನ್ನುವ ಮಾತುಗಳು ಕೇಳಿ ಬಂದವು. ಅದೃಷ್ಟವಶಾತ್ ಆ ರೀತಿ ಆಗಿಲ್ಲ.

ಕಾರ್ತಿಕ್ ಆರ್ಯನ್ ಅವರಿಗೆ ಇಂದು (ನವೆಂಬರ್ 22) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಅವರ ನಟನೆಯ ‘ಭೂಲ್ ಭುಲಯ್ಯ 3’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಇದು ಕಾರ್ತಿಕ್ ಆರ್ಯನ್ ಖುಷಿ ಹೆಚ್ಚಿಸಿದೆ. ಅವರು ಆರಂಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು.

ಸುಶಾಂತ್ ಅವರನ್ನು ತುಳಿಯುವ ಪ್ರಯತ್ನಗಳು ನಡೆದಿವೆ ಎನ್ನುವ ಆರೋಪ ಇದೆ. ದೊಡ್ಡ ದೊಡ್ಡ ತಲೆಗಳು ಸುಶಾಂತ್ ಸಾವಿಗೆ ಕಾರಣ ಎನ್ನುವ ಆರೋಪ ಇದೆ. ಅವರ ಸಾವಿನ ಬಳಿಕ ಎಲ್ಲರೂ ಕಾರ್ತಿಕ್ ಆರ್ಯನ್ ಬಗ್ಗೆ ಆತಂಕ ಹೊರಹಾಕಿದ್ದರು. ಅವರಿಗೂ ಇದೆ ಗತಿ ಬರಹುದು ಎಂದು ಹೇಳಲಾಗಿತ್ತು.

ಬಾಲಿವುಡ್​ನಲ್ಲಿರುವ ಕಷ್ಟಗಳ ಬಗ್ಗೆ ಮಾತನಾಡಿದ್ದ ಕಾರ್ತಿಕ್ ಆರ್ಯನ್, ‘ಅವಕಾಶ ಸಿಗೋದು ತುಂಬಾನೇ ಕಷ್ಟ. ನೀವು ಹೊರಗಿನವರು ಎಂದಾಗ ನಿಮ್ಮ ಕೆಲಸಗಳನ್ನು ಗುರುತಿಸೋದು ಕೂಡ ಕಡಿಮೆ. ನಾವು ಸಿನಿಮಾ ರಂಗದವರು ಅಲ್ಲ ಎಂಬುದು ಪದೇ ಪದೇ ನಿಮ್ಮ ಮೇಲೆ ಪ್ರಭಾವ ಬೀರುತ್ತಾ ಇರುತ್ತದೆ’ ಎಂದಿದ್ದರು.

ಇದನ್ನೂ ಓದಿ: ಕರ್ನಾಟಕದ ಈ ಸ್ಥಳಕ್ಕೆ ಭೇಟಿ ಮಾಡಲು ಬಯಸಿದ್ದಾರೆ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಅವರು ಹೊರಗಿನವರಾದರೂ ‘ಸೋನು ಕಿ ಟು ಕಿ ಸ್ವೀಟಿ’, ’ಭೂಲ್ ಭುಲಯ್ಯ 2’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಭೂಲ್ ಭುಲಯ್ಯ 3’ ಕೂಡ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿದೆ.  ಸದ್ಯ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ಯಶಸ್ವಿ ಹೀರೋಗಳ ಸಾಲಿನಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್