AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವ್ಯಕ್ತಿ ಬಟ್ಟೆ ಬಿಚ್ಚಿ ನಿಮ್ಮ ಎದುರು ನಿಲ್ಲುತ್ತಾನೆ ಎಂದರೆ ಅದು ನಂಬಿಕೆ’; ಚೈತ್ರಾ ಹೀಗೆ ಹೇಳಿದ್ದೇಕೆ?

ಬಿಗ್ ಬಾಸ್ ಕೊಟ್ಟ ಹಣವನ್ನು ಪ್ರತಿ ತಂಡದವರು ತಮ್ಮ ಸ್ಪರ್ಧಿಗಳಿಗೆ ಹಂಚಿದ್ದಾರೆ. ಈ ರೀತಿಯಲ್ಲಿ ಹಂಚಲ್ಪಟ್ಟ ಹಣವನ್ನು ತುಂಬಾನೇ ಜೋಪಾನವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ಬೇರೆಯವರು ಇದನ್ನು ಕದಿಯುವ ಸಾಧ್ಯತೆ ಇರುತ್ತದೆ. ಈಗಲೂ ಹಾಗೆಯೇ ಆಗಿದೆ. ಇದಕ್ಕೆ ಚೈತ್ರಾ ಸಿಟ್ಟಾಗಿದ್ದಾರೆ.

‘ವ್ಯಕ್ತಿ ಬಟ್ಟೆ ಬಿಚ್ಚಿ ನಿಮ್ಮ ಎದುರು ನಿಲ್ಲುತ್ತಾನೆ ಎಂದರೆ ಅದು ನಂಬಿಕೆ’; ಚೈತ್ರಾ ಹೀಗೆ ಹೇಳಿದ್ದೇಕೆ?
ಚೈತ್ರಾ
ರಾಜೇಶ್ ದುಗ್ಗುಮನೆ
|

Updated on: Nov 22, 2024 | 6:47 AM

Share

ಬಿಗ್ ಬಾಸ್ ಮನೆಯಲ್ಲಿ ಈಗ ದುಡ್ಡು ಹರಿದಾಡಿದೆ. ಅಂದರೆ, ಅಸಲಿ ಹಣ ಅಲ್ಲ. ಬಿಗ್ ಬಾಸ್ ಕಡೆಯಿಂದ ಎಲ್ಲಾ ಸ್ಪರ್ಧಿಗಳಿಗೆ ಹಣ ನೀಡಲಾಗುತ್ತದೆ. ಈ ಹಣ ತುಂಬಾನೇ ಮುಖ್ಯ. ಅಂತಿಮವಾಗಿ ಯಾರ ಬಳಿ ಹೆಚ್ಚು ಹಣ ಇರುತ್ತದೆಯೋ ಅವರು ಗೆದ್ದಂತೆ. ಈ ಆಟ ಮನೆಯ ರೋಚಕತೆ ಹೆಚ್ಚಿಸಿದೆ. ಹಣವನ್ನು ಕದಿಯುವ ಬಗ್ಗೆ ಸ್ಪರ್ಧಿಗಳ ಮಧ್ಯೆಯ ಮಾತುಕತೆ ಆಗುತ್ತಿದೆ. ಇದು ಆಟಕ್ಕೆ ಹೊಸ ತಿರುವು ನೀಡಿದೆ. ಇದು ಚೈತ್ರಾ ಹಾಗೂ ಗೌತಮಿ ಮಧ್ಯೆ ಜಗಳಕ್ಕೆ ಕಾರಣ ಆಗಿದೆ.

ಬಿಗ್ ಬಾಸ್ ಕೊಟ್ಟ ಹಣವನ್ನು ಪ್ರತಿ ತಂಡದವರು ತಮ್ಮ ಸ್ಪರ್ಧಿಗಳಿಗೆ ಹಂಚಿದ್ದಾರೆ. ಈ ರೀತಿಯಲ್ಲಿ ಹಂಚಲ್ಪಟ್ಟ ಹಣವನ್ನು ತುಂಬಾನೇ ಜೋಪಾನವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ಬೇರೆಯವರು ಇದನ್ನು ಕದಿಯುವ ಸಾಧ್ಯತೆ ಇರುತ್ತದೆ. ಈಗಲೂ ಹಾಗೆಯೇ ಆಗಿದೆ. ಚೈತ್ರಾ ಅವರು ಹಣ ಇಟ್ಟುಕೊಂಡು ಓಡಾಡುವಾಗ ಅದನ್ನು ಕದಿಯುವ ಆಲೋಚನೆ ಮಂಜುಗೆ ಬಂದಿದೆ. ಇದಕ್ಕೆ ಅವರು ಗೌತಮಿ ಹಾಗೂ ಐಶ್ವರ್ಯಾ ಅವರನ್ನು ಮುಂದಿಟ್ಟಿದ್ದಾರೆ.

ಚೈತ್ರಾಗೆ ಗೌತಮಿ ಹಾಗೂ ಐಶ್ವರ್ಯಾ ಪಂಚೆ ಹಾಕುವ ಐಡಿಯಾ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಚೈತ್ರಾ ವಾಶ್​ರೂಂಗೆ ಹೋದರು. ಅಲ್ಲಿ ಹಣ ಕದಿಯುವ ಪ್ರಯತ್ನ ನಡೆದಿದೆ. ಇದಕ್ಕೆ ಚೈತ್ರಾ ಅವರು ಸಿಟ್ಟಾಗಿದ್ದಾರೆ. ಅವರು ಐಶ್ವರ್ಯಾ ಹಾಗೂ ಗೌತಮಿ ಮೇಲೆ ಸಿಟ್ಟಾಗಿದ್ದಾರೆ. ಅವರು ಸಾಕಷ್ಟು ಕೂಗಾಟ ನಡೆಸಿದ್ದಾರೆ. ಅವರು ಕೂಗುತ್ತಲೇ ವಶಾ್​ರೂಂನಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ: ಓವರ್​ ಕಾನ್ಫಿಡೆನ್ಸ್​ನಿಂದ ಬಿಗ್​ ಬಾಸ್​ನಲ್ಲಿ ಎಡವುತ್ತಿದ್ದಾರಾ ಶೋಭಾ ಶೆಟ್ಟಿ?

‘ನನಗೆ ತುಂಬಾ ಖುಷಿ ಇದೆ. ನೀವು ನಂಬಿಸಿ ಮೋಸ ಮಾಡಿದ್ದೀರಿ. ನೀವು ಡ್ರಾಮಾ ಕ್ವೀನ್. ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದೀರಿ. ನೀವು ದಡ್ಡರು ಎಂದು ಸಾಬೀತು ಮಾಡಿಕೊಂಡಿರಿ. ಗುಂಪುಗಾರಿಕೆ ಮಾಡಿದ್ರೂ ಪ್ಲ್ಯಾನ್ ವರ್ಕೌಟ್ ಆಗಿಲ್ಲ. ಓರ್ವ ವ್ಯಕ್ತಿ ಬಟ್ಟೆ ಬಿಚ್ಚಿ ನಿಮ್ಮ ಎದುರು ನಿಲ್ಲುತ್ತಾನೆ ಎಂದರೆ ಅದು ನಂಬಿಕೆ. ಆ ನಂಬಿಕೆಯನ್ನೇ ಉಳಿಸಿಕೊಂಡಿಲ್ಲ’ ಎಂದು ಚೈತ್ರಾ ಕೂಗಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ