ತಾತ ತೀರಿಹೋದಾಗ ಅಲ್ಲು ಅರ್ಜುನ್ಗೆ ಸಿಕ್ಕಿತ್ತು ಲಕ್ಷ ಲಕ್ಷ ಹಣ; ಮೊಮ್ಮೊಗನ ಮೇಲಿರಲಿಲ್ಲ ನಂಬಿಕೆ?
ಅಲ್ಲು ಅರ್ಜುನ್ ಕುಟುಂಬ ಸಿನಿಮಾ ರಂಗದಲ್ಲಿ ಸಾಕಷ್ಟು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಅವರ ತಾತ ದೊಡ್ಡ ಕಾಮಿಡಿ ಹೀರೋ ಆಗಿದ್ದರು. 1950ರಲ್ಲಿ ರಿಲೀಸ್ ಆದ ‘ಪುಟ್ಟಿಲ್ಲು’ ಅವರ ನಟನೆಯ ಮೊದಲ ಸಿನಿಮಾ. ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರಿಂದ ಅಲ್ಲುಗೆ 17 ಲಕ್ಷ ಸಿಕ್ಕಿತ್ತು.

ಅಲ್ಲು ಅರ್ಜುನ್ (Allu Arjun) ಅವರು ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಕೇವಲ ತೆಲುಗು ಸಿನಿಮಾಗಳಲ್ಲಿ ನಟಿಸಿದ ಹೊರತಾಗಿಯೂ ಅವರು ಬಾಲಿವುಡ್ ಮಂದಿಗೆ ಪರಿಚಯ ಇದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಪುಷ್ಪ’ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡಿತು. ಅಲ್ಲು ಅರ್ಜುನ್ ಅವರು ಈಗಾಗ ಸಾಕಷ್ಟು ಹಣ ಮಾಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಅವರ ತಾತ ಮೃತಪಟ್ಟಾಗ ಇವರಿಗೆ 17 ಲಕ್ಷ ರೂಪಾಯಿ ಸಿಕ್ಕಿತ್ತಂತೆ. ಇದಕ್ಕೆ ಕಾರಣವೇನು ಎಂಬುದನ್ನು ಅಲ್ಲು ಅರ್ಜುನ್ ವಿವರಿಸಿದ್ದರು.
ಅಲ್ಲು ಅರ್ಜುನ್ ಅವರು ಶೋ ಒಂದಕ್ಕೆ ಬಂದಿದ್ದರು. ಈ ವೇಳೆ ಅಚ್ಚರಿಯ ವಿಚಾರ ಒಂದನ್ನು ವಿವರಿಸಿದ್ದಾರೆ. ‘ನನ್ನ ತಾತನಿಗೆ ನಾವು ಎಂಟು ಜನ ಮೊಮ್ಮಕ್ಕಳು. ಅವರು ಮೃತಪಟ್ಟ ನಂತರ ಎಂಟರಲ್ಲಿ ನನಗೆ ಮಾತ್ರ 17 ಲಕ್ಷ ರೂಪಾಯಿ ವಿಮೆ ಹಣ ಬಂದಿತ್ತು. ನಾನು ನಾಲ್ಕನೇ ಕ್ಲಾಸ್ನಲ್ಲಿದ್ದಾಗಿನಿಂದಲೇ ನನಗಾಗಿ ತಾತ ಹಣ ಕಟ್ಟುತ್ತಾ ಬರುತ್ತಿದ್ದರು’ ಎಂದು ಅಲ್ಲು ಅರ್ಜುನ್ ಹೇಳಿಕೊಂಡಿದ್ದರು.
ಎಂಟು ಜನರಲ್ಲಿ ಅಲ್ಲು ಅರ್ಜುನ್ಗೆ ಮಾತ್ರ ಹಣ ಬಂದಿದ್ದು ಏಕೆ? ಇದಕ್ಕೆ ಕಾರಣ ಆಸಕ್ತಿಕರವಾಗಿದೆ. ಅಲ್ಲು ಅರ್ಜುನ್ ಮೇಲೆ ಅವರ ತಾತ ಅಲ್ಲು ರಾಮಲಿಂಗಂಗೆ ನಂಬಿಕೆ ಇರಲಿಲ್ಲವಂತೆ. ‘8 ಮೊಮ್ಮಕಳ ಪೈಕಿ ನಾನು ಕೆಲಸಕ್ಕೆ ಬಾರದವನು, ಹೇಗೆ ಬದುಕುತ್ತಾನೋ ಎಂದು ಭಾವಿಸಿ ಅವರು ನನ್ನ ಹೆಸರಿನಲ್ಲಿ ಹಣ ಕೂಡಿಟ್ಟಿದ್ದರು’ ಎಂದು ಅಲ್ಲು ಅರ್ಜುನ್ ಹೇಳಿಕೊಂಡಿದ್ದರು.
View this post on Instagram
ಅಲ್ಲು ರಾಮಲಿಂಗಯ್ಯಾ ಬಗ್ಗೆ
ಅಲ್ಲು ಅರ್ಜುನ್ ಕುಟುಂಬ ಸಿನಿಮಾ ರಂಗದಲ್ಲಿ ಸಾಕಷ್ಟು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಅವರ ತಾತ ದೊಡ್ಡ ಕಾಮಿಡಿ ಹೀರೋ ಆಗಿದ್ದರು. 1950ರಲ್ಲಿ ರಿಲೀಸ್ ಆದ ‘ಪುಟ್ಟಿಲ್ಲು’ ಅವರ ನಟನೆಯ ಮೊದಲ ಸಿನಿಮಾ. ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2003ರಲ್ಲಿ ರಿಲೀಸ್ ಆದ ‘ಕಲ್ಯಾಣ ರಾಮುಡು’ ಅವರ ನಟನೆಯ ಕೊನೆಯ ಸಿನಿಮಾ. 2004ರ ಜುಲೈ 31ರಂದು ಅವರು ನಿಧನ ಹೊಂದಿದರು.
ಇದನ್ನೂ ಓದಿ: 51 ಟೇಕ್ ತೆಗೆದುಕೊಂಡ ಅಲ್ಲು ಅರ್ಜುನ್; ‘ಪುಷ್ಪ 2’ ಟೀಸರ್ ಹಿಂದಿದೆ ಅಚ್ಚರಿ ವಿಷಯ
ಅಲ್ಲು ಅರ್ಜುನ್ ಸಿನಿಮಾ
‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಅಲ್ಲು ಅರ್ಜುನ್ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರ ರಿಲೀಸ್ಗೂ ಮೊದಲೇ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎಂದು ವರದಿ ಆಗಿದೆ. ಈ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಅನೇಕರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ