Agent Movie Trailer: ಆ್ಯಕ್ಷನ್.. ಆ್ಯಕ್ಷನ್​.. ಆ್ಯಕ್ಷನ್​..; ‘ಏಜೆಂಟ್​’ ಟ್ರೇಲರ್​ನಲ್ಲಿ ಮಾಸ್ ಆಗಿ ಮಿಂಚಿದ ಅಖಿಲ್ ಅಕ್ಕಿನೇನಿ

ಅಖಿಲ್ ಅವರು ಚಾಕೋಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಅವರು ಸಂಪೂರ್ಣ ಆ್ಯಕ್ಷನ್ ಸಿನಿಮಾ ಮಾಡಿದ್ದಾರೆ.

Agent Movie Trailer: ಆ್ಯಕ್ಷನ್.. ಆ್ಯಕ್ಷನ್​.. ಆ್ಯಕ್ಷನ್​..; ‘ಏಜೆಂಟ್​’ ಟ್ರೇಲರ್​ನಲ್ಲಿ ಮಾಸ್ ಆಗಿ ಮಿಂಚಿದ ಅಖಿಲ್ ಅಕ್ಕಿನೇನಿ
ಅಖಿಲ್ ಅಕ್ಕಿನೇನಿ
Follow us
ರಾಜೇಶ್ ದುಗ್ಗುಮನೆ
|

Updated on: Apr 19, 2023 | 8:01 AM

ಅಖಿಲ್ ಅಕ್ಕಿನೇನಿ ಅವರು ‘ಏಜೆಂಟ್​’ ಚಿತ್ರದ (Agent Movie) ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಮಾಸ್ ಆಗಿ ಕಾಣಿಸಿಕೊಳ್ಳಲು ಬಾಡಿ ಬಿಲ್ಡ್ ಮಾಡಿಕೊಂಡಿದ್ದಾರೆ. ಈ ಪರಿಶ್ರಮ ‘ಏಜೆಂಟ್​’ ಟ್ರೇಲರ್​ನಲ್ಲಿ ಗೊತ್ತಾಗಿದೆ. ಟ್ರೇಲರ್​ನ ಉದ್ದಕ್ಕೂ ಅಖಿಲ್ ಆ್ಯಕ್ಷನ್ ಮೆರೆದಿದ್ದಾರೆ. ಸದ್ಯ ಟ್ರೇಲರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಸೋಶಿಯಲ್ ಮೀಡಿಯಾ ಮೂಲಕ ಅಖಿಲ್ ಅಕ್ಕಿನೇನಿಗೆ (Akhil Akkineni) ಆಲ್​ ದಿ ಬೆಸ್ಟ್​ ಹೇಳುತ್ತಿದ್ದಾರೆ. ಈ ಚಿತ್ರ ಏಪ್ರಿಲ್ 28ರಂದು ರಿಲೀಸ್ ಆಗಲಿದೆ.

ಅಖಿಲ್ ಅಕ್ಕಿನೇನಿ ಚಿತ್ರರಂಗ ಹಿನ್ನೆಲೆಯವರು. ನಾಗಾರ್ಜುನ ಅಕ್ಕಿನೇನಿ ಅವರ ಮಗ ಹಾಗೂ ನಾಗ ಚೈತನ್ಯ ಅವರ ಸಹೋದರ. ಹೀಗಾಗಿ, ಅವರಿಗೆ ಚಿತ್ರರಂಗಕ್ಕೆ ಸುಲಭವಾಗಿ ಎಂಟ್ರಿ ಸಿಕ್ಕಿತು. 2015ರಲ್ಲಿ ರಿಲೀಸ್ ಆದ ‘ಅಖಿಲ್’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಹೀರೋ ಆಗಿ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾ ಕೂಡ ಹೇಳಿಕೊಳ್ಳುವಂತ ಯಶಸ್ಸು ತಂದುಕೊಟ್ಟಿಲ್ಲ. ಈಗ ‘ಏಜೆಂಟ್​’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಮೊದಲು ಅಖಿಲ್ ಅವರು ಚಾಕೋಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಅವರು ಸಂಪೂರ್ಣ ಆ್ಯಕ್ಷನ್ ಸಿನಿಮಾ ಮಾಡಿದ್ದಾರೆ. ಇದನ್ನೂ ಓದಿ: ‘ಏಜೆಂಟ್’ ಚಿತ್ರದಲ್ಲಿ ದಿನೋ ಮೋರಿಯಾ ಖಡಕ್​ ಲುಕ್​; ಅಖಿಲ್ ಜತೆ ಬಾಲಿವುಡ್ ಸ್ಟಾರ್​ ನಟನ ಅಬ್ಬರ​

ಏಜೆಂಟ್ ಜಾನಿ ಆಗಿ ಅಖಿಲ್ ಅಕ್ಕಿನೇನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶತ್ರುಗಳನ್ನು ಅವರು ನಾಶ ಮಾಡುತ್ತಾ ಹೋಗುತ್ತಾರೆ. ಮಲಯಾಳಂನ ಖ್ಯಾತ ನಟ ಮಮ್ಮೂಟಿ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಕರ್ನಲ್ ಮಹಾದೇವ್ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಆ್ಯಕ್ಷನ್ ಜೊತೆ ಸಸ್ಪೆನ್ಸ್ ಕೂಡ ಸಿನಿಮಾದಲ್ಲಿದೆ. ಇದೆಲ್ಲದರ ಜೊತೆ ಒಂದು ಪ್ರೇಮ ಕಥೆಯನ್ನು ಇಡಲಾಗಿದೆ.

ಇದನ್ನೂ ಓದಿ: ‘ಏಜೆಂಟ್’ ಚಿತ್ರದಲ್ಲಿ ದಿನೋ ಮೋರಿಯಾ ಖಡಕ್​ ಲುಕ್​; ಅಖಿಲ್ ಜತೆ ಬಾಲಿವುಡ್ ಸ್ಟಾರ್​ ನಟನ ಅಬ್ಬರ​

‘ಕಿಕ್​’, ‘ಸೈರಾ ನರಸಿಂಹ ರೆಡ್ಡಿ’ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸುರೇಂದರ ರೆಡ್ಡಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕಾರಣದಿಂದಲೂ ನಿರೀಕ್ಷೆ ಹೆಚ್ಚಿದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರದ ಮೂಲಕ ಅವರು ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ