ಮಣಿರತ್ನಂ ನಿರ್ದೇಶನದ ಐತಿಹಾಸಿಕ ಸಿನಿಮಾ ‘ಪೊನ್ನಿಯನ್ ಸೆಲ್ವನ್’ ಈ ವರ್ಷದ ಅತಿದೊಡ್ಡ ತಮಿಳು ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ. ಮತ್ತು ವಿಶ್ವದಾದ್ಯಂತ ಬಾಕ್ಸ್ ಆಫೀಸ್ಲ್ಲಿ 500 ಕೋಟಿ ರೂಪಾಯಿ ದಾಟಿದೆ. ಕಾರ್ತಿ, ವಿಕ್ರಮ್, ಐಶ್ವರ್ಯ ರೈ ಬಚ್ಚನ್, ತ್ರಿಶಾ, ಜಯಂ ರವಿ ನಟಿಸಿರುವ ಈ ಚಿತ್ರವು ಒಂಭತ್ತನೇ ಚೋಳ ಸಾಮ್ರಾಜ್ಯದೊಳಗಿನ ಕಾಲ್ಪನಿಕ ಯುದ್ಧಗಳನ್ನು ವಿವರಿಸುತ್ತದೆ. ಇದರ ಜೊತೆಗೆ ಕಲ್ಕಿಯ ಕಥೆಗಳನ್ನು ಆಧರಿಸಿದ್ದು ಚಿತ್ರ ಅತ್ಯುತ್ತಮ ಪ್ರದರ್ಶನವನ್ನು ಕಂಡಿದೆ. ಇದರ ಯಶಸ್ಸಿನ ಗೌರವಾರ್ಥವಾಗಿ ಪಾರ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು.
ನಿರ್ಮಾಪಕ ರಾಧಾಕೃಷ್ಣನ್ ಪಾರ್ಥಿಬನ್ ರಜನಿಕಾಂತ್ ಜೊತೆ ಸೆಲ್ಫಿ ತೆಗೆದುಕೊಂಡು ಸೋಶಿಯಲ್ಮೀಡಿಯಾದಲ್ಲಿ ‘ಪೊನ್ನಿಯಿನ್ ಸೆಲ್ವನ್‘ ಸೂಪರ್ ಸಕ್ಸಸ್ ಪಾರ್ಟಿ ಯಶಸ್ಸಿನ ಮಗನೊಂದಿಗೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ರಜನಿಕಾಂತ್ ಮತ್ತು ಕಮಲ್ ಹಾಸನ್ ಚಿತ್ರದ ಪ್ರಚಾರದ ಸಮಯದಲ್ಲಿ ಬೆಂಬಲವನ್ನು ಸೂಚಿಸಿದ್ದರು. ಇನ್ನು ಬಿಡುಗಡೆಗೂ ಮುನ್ನ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಪಾತ್ರಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.
ದೊಡ್ಡ ಯಶಸ್ಸನ್ನು ಕಂಡಿರುವ ನಿರ್ದೇಶಕ ಮಣಿರತ್ನಂ ಮುಂದುವರೆದು ‘ಪೊನ್ನಿಯಿನ್ ಸೆಲ್ವನ್-2′ ಚಿತ್ರವನ್ನು 2023 ರ ಎಪ್ರಿಲ್ ತಿಂಗಳಿನಲ್ಲಿ ತೆರೆಯ ಮೇಲೆ ತರಲು ಇಚ್ಛಿಸಿದ್ದಾರೆ. ಇದು ಕೂಡ ಬಹುದೊಡ್ಡ ಯಶಸ್ಸು ಕಾಣುವ ನಿರೀಕ್ಷೆಯಿದೆ. ಮತ್ತು ಇದಾದ ಬಳಿಕ ಕಮಲ್ ಹಾಸನ್ ಅಭಿನಯದ ‘ಕೆಎಚ್234′ ಸಿನಿಮಾವನ್ನ ನಿರ್ದೇಶಿಸಲಿದ್ದಾರೆ.
ಮತ್ತಷ್ಟು ಮನರಂಜನಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ