ಲಾಕ್​ಡೌನ್​ ಮಧ್ಯೆಯೂ ಐಶ್ವರ್ಯಾ ಕುಟುಂಬಕ್ಕೆ ವಿಶೇಷ ದಿನ; ಕೇಕ್​ ಕತ್ತರಿಸಿ ಸಂಭ್ರಮ

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹೀಗಾಗಿ, ಮಹಾರಾಷ್ಟ್ರ ಸೇರಿ ಸಾಕಷ್ಟು ಕಡೆಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದ ಮನೆಯಿಂದ ಹೊರಹೋಗೋಕೆ ಸಾಧ್ಯವಾಗುತ್ತಿಲ್ಲ.

ಲಾಕ್​ಡೌನ್​ ಮಧ್ಯೆಯೂ ಐಶ್ವರ್ಯಾ ಕುಟುಂಬಕ್ಕೆ ವಿಶೇಷ ದಿನ; ಕೇಕ್​ ಕತ್ತರಿಸಿ ಸಂಭ್ರಮ
ಐಶ್ವರ್ಯಾ ರೈ ಕುಟುಂಬ

Updated on: Jun 01, 2021 | 7:10 PM

ಆರಾಧ್ಯಾ ಹುಟ್ಟಿದ ನಂತರದಲ್ಲಿ ನಟಿ ಐಶ್ವರ್ಯಾ ರೈ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಮಗು ಹಾಗೂ ಕುಟುಂಬದ ಆರೈಕೆಯಲ್ಲಿ ಹೆಚ್ಚು ಬ್ಯುಸಿ ಆದರು. ಈಗ ತಮ್ಮನ್ನು ಆರೈಕೆ ಮಾಡಿದ ಅವರ ತಾಯಿ ಬೃಂದ್ಯ ರೈ ಅವರ 70ನೇ ಜನ್ಮದಿನವನ್ನು ಮನೆಯಲ್ಲೇ ಸಿಂಪಲ್​ ಆಗಿ ಆಚರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿವೆ.

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹೀಗಾಗಿ, ಮಹಾರಾಷ್ಟ್ರ ಸೇರಿ ಸಾಕಷ್ಟು ಕಡೆಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದ ಮನೆಯಿಂದ ಹೊರಹೋಗೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಐಶ್ವರ್ಯಾ ರೈ, ಅಭಿಷೇಕ್​ ಬಚ್ಚನ್​, ಆರಾಧ್ಯ ಮತ್ತು ಬೃಂದ್ಯ ರೈ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಬೃಂದ್ಯ ರೈ ಅವರ 70ನೇ ಜನ್ಮದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ.

ಡೈನಿಂಗ್ ಟೇಬಲ್​ ಮೇಲೆ, ಹೂವು, ಕೇಕ್​ಗಳನ್ನು ಇಡಲಾಗಿದೆ. ನಾನಾ ರೀತಿಯ ಕೇಕ್​ಗಳನ್ನು ಮನೆಯಲ್ಲೇ ಮಾಡಿದ್ದು ಎನ್ನಲಾಗಿದೆ. ಈ ಫೋಟೋಗಳನ್ನು ಐಶ್ವರ್ಯಾ ರೈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಐಶ್ವರ್ಯಾ ತಾಯಿಗೆ ಶುಭಾಶಯಗಳ ಸುರಿಮಳೆ ಸುರಿಸಿದ್ದು, ನೂರು ಕಾಲ ಬಾಳುವಂತೆ ಶುಭಹಾರೈಸಿದ್ದಾರೆ. ಅಲ್ಲದೆ, ಕೆಲವರು ಐಶ್ವರ್ಯಾ ಅವರ ಬಳಿ ಮತ್ತೆ ಚಿತ್ರರಂಗಕ್ಕೆ ಮರಳುವಂತೆ ಆಹ್ವಾನ ನೀಡಿದ್ದಾರೆ.

ಅಭಿಷೇಕ್​ ಮತ್ತು ಐಶ್ವರ್ಯಾ ರೈ 2007ರಲ್ಲಿ ಮದುವೆ ಆದರು. 2011ರಲ್ಲಿ ಆರಾಧ್ಯಾ ಜನಿಸಿದರು. ಐಶ್ವರ್ಯಾ ರೈ ಸದ್ಯ, ಮಣಿ ರತ್ನ ಅವರ ಪ್ರಾಜೆಕ್ಟ್​ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಎರಡು ಪಾರ್ಟ್​ಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪುರುಷ ಮಾಡೆಲ್​ ವಿಚಾರಕ್ಕೆ ಕಿತ್ತಾಡಿಕೊಂಡಿದ್ದ ಐಶ್ವರ್ಯಾ ರೈ-ಮನಿಷಾ ಕೊಯಿರಾಲಾ; ಬಚ್ಚನ್​ ಸೊಸೆಯ ಕಣ್ಣೀರ ಕಥೆ

ಪತಿ ಅಭಿಷೇಕ್​ ಎದುರಲ್ಲೇ ಐಶ್ವರ್ಯಾ ರೈಗೆ ಅಪರಿಚಿತ ವ್ಯಕ್ತಿಯ ಮದುವೆ​ ಪ್ರಪೋಸ್​; ವಿಡಿಯೋ ವೈರಲ್​

Published On - 7:36 pm, Wed, 26 May 21