‘ಜೈಲರ್’ ಗೆಲುವಿನ ಬೆನ್ನಲ್ಲೇ ‘ಲಾಲ್ ಸಲಾಮ್’ ಚಿತ್ರದ ಬಗ್ಗೆ ಹೆಚ್ಚಿದ ನಿರೀಕ್ಷೆ; ಐಶ್ವರ್ಯಾ ಮೇಲೆ ಬೀಳುತ್ತಿದೆ ಒತ್ತಡ?

‘ಜೈಲರ್’ ಚಿತ್ರದಲ್ಲಿ ಶಿವರಾಜ್​ಕುಮಾರ್, ಮೋಹನ್​ಲಾಲ್ ಹಾಗೂ ಜಾಕಿ ಶ್ರಾಫ್ ಅವರದ್ದು ಅತಿಥಿ ಪಾತ್ರ. ಆದರೂ ಈ ಪಾತ್ರಗಳು ಸಾಕಷ್ಟು ಪ್ರಭಾವ ಬೀರಿವೆ. ಚಿತ್ರಕ್ಕೆ ಮೈಲೇಜ್ ನೀಡಿವೆ. ‘ಲಾಲ್ ಸಲಾಮ್’ ಚಿತ್ರದಲ್ಲಿ ರಜನಿ ಪಾತ್ರದ ಮೇಲೆ ಇಷ್ಟೇ ನಿರೀಕ್ಷೆ ಇದೆ. ಅವರು ಮೊಹಿದ್ದೀನ್ ಭಾಯ್ ಆಗಿ ಮಿಂಚಲೇಬೇಕಾದ ಅನಿವಾರ್ಯತೆ ಇದೆ.

‘ಜೈಲರ್’ ಗೆಲುವಿನ ಬೆನ್ನಲ್ಲೇ ‘ಲಾಲ್ ಸಲಾಮ್’ ಚಿತ್ರದ ಬಗ್ಗೆ ಹೆಚ್ಚಿದ ನಿರೀಕ್ಷೆ; ಐಶ್ವರ್ಯಾ ಮೇಲೆ ಬೀಳುತ್ತಿದೆ ಒತ್ತಡ?
ರಜನಿ-ಐಶ್ವರ್ಯಾ ರಜನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 24, 2023 | 6:30 AM

ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ರಜನಿಕಾಂತ್ ವೃತ್ತಿಜೀನದಲ್ಲಿ ಬಹಳ ಪ್ರಮುಖ ಸಿನಿಮಾ ಎನಿಸಿಕೊಂಡಿದೆ. ಈಗ ರಜನಿಕಾಂತ್ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ರಜನಿಕಾಂತ್ ಮಗಳು ಐಶ್ವರ್ಯಾ ಮೇಲೆ ಒತ್ತಡ ಹೆಚ್ಚುತ್ತಿದೆಯಂತೆ! ಅದಕ್ಕೆ ಕಾರಣ, ಅವರು ನಿರ್ದೇಶನ ಮಾಡುತ್ತಿರುವ ‘ಲಾಲ್ ಸಲಾಮ್’ ಸಿನಿಮಾ. ಈ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ‘ಜೈಲರ್’ ಯಶಸ್ಸಿನ ಬಳಿಕ ಈ ಚಿತ್ರದ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಲಾಲ್ ಸಲಾಮ್’ ಚಿತ್ರದಲ್ಲಿ ರಜನಿಕಾಂತ್ ಅವರು ಮೊಹಿದ್ದೀನ್ ಭಾಯ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಸಿನಿಮಾದ ಪೋಸ್ಟರ್​ನಲ್ಲಿ ಅವರ ಲುಕ್ ಗಮನ ಸೆಳೆದಿತ್ತು. ತಲೆಗೆ ಟೋಪಿ ಧರಿಸಿ ಗಮನ ಸೆಳೆದಿದ್ದರು. ಅವರ ಹಿಂಭಾಗದಲ್ಲಿ ಜನರು ಧಂಗೆ ಎದ್ದಿರುವ ರೀತಿ ಕಾಣಿಸಿದೆ. ಈ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆದಿತ್ತು. ಅವರದ್ದು ಅತಿಥಿ ಪಾತ್ರವಾದರೂ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರಿಂದ ಸಹಜವಾಗಿಯೇ ರಜನಿ ಮಗಳು ಐಶ್ವರ್ಯಾ ಮೇಲೆ ಒತ್ತಡ ಬೀಳುತ್ತಿದೆ ಎನ್ನಲಾಗಿದೆ.

‘ಜೈಲರ್’ ಚಿತ್ರದಲ್ಲಿ ಶಿವರಾಜ್​ಕುಮಾರ್, ಮೋಹನ್​ಲಾಲ್ ಹಾಗೂ ಜಾಕಿ ಶ್ರಾಫ್ ಅವರದ್ದು ಅತಿಥಿ ಪಾತ್ರ. ಆದರೂ ಈ ಪಾತ್ರಗಳು ಸಾಕಷ್ಟು ಪ್ರಭಾವ ಬೀರಿವೆ. ಚಿತ್ರಕ್ಕೆ ಮೈಲೇಜ್ ನೀಡಿವೆ. ‘ಲಾಲ್ ಸಲಾಮ್’ ಚಿತ್ರದಲ್ಲಿ ರಜನಿ ಪಾತ್ರದ ಮೇಲೆ ಇಷ್ಟೇ ನಿರೀಕ್ಷೆ ಇದೆ. ಅವರು ಮೊಹಿದ್ದೀನ್ ಭಾಯ್ ಆಗಿ ಮಿಂಚಲೇಬೇಕಾದ ಅನಿವಾರ್ಯತೆ ಇದೆ. ಈ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: ಐಶ್ವರ್ಯಾ ರಜನಿಕಾಂತ್​ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಇಬ್ಬರ ಬಂಧನ ರಜನಿಕಾಂತ್ ಹೀರೋ ಆಗಿ ನಟಿಸಲಿರುವ ಮುಂದಿನ ಚಿತ್ರಕ್ಕೆ ಯಾರು ನಿರ್ದೇಶನ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅಥವಾ ಅಟ್ಲಿ ಅವರು ನಿರ್ದೇಶನ ಮಾಡಿದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ಅಭಿಮಾನಿಗಳು ಹೊರಹಾಕಿದ್ದಾರೆ. ಆದರೆ, ಯಾವುದೂ ಇನ್ನೂ ಫೈನಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು