Custody Twitter Review: ‘ಕಸ್ಟಡಿ’ ಸಿನಿಮಾ ನೋಡಿ ಖುಷಿಯಾದ ಪ್ರೇಕ್ಷಕರು; ನಾಗ ಚೈತನ್ಯಗೆ ಅಭಿಮಾನಿಗಳಿಂದ ಫುಲ್​ ಮಾರ್ಕ್ಸ್​

|

Updated on: May 12, 2023 | 2:02 PM

Custody Movie: ಮೊದಲ ದಿನವೇ ‘ಕಸ್ಟಡಿ’ ಸಿನಿಮಾ ನೋಡಿದ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಬಹಳ ದಿನಗಳ ಬಳಿಕ ಒಂದು ಥ್ರಿಲ್ಲರ್​ ಸಿನಿಮಾ ನೋಡಿ ಎಂಜಾಯ್​ ಮಾಡಿರುವುದಾಗ ಅಭಿಮಾನಿಗಳು ಟ್ವೀಟ್​ ಮಾಡಿದ್ದಾರೆ.

Custody Twitter Review: ‘ಕಸ್ಟಡಿ’ ಸಿನಿಮಾ ನೋಡಿ ಖುಷಿಯಾದ ಪ್ರೇಕ್ಷಕರು; ನಾಗ ಚೈತನ್ಯಗೆ ಅಭಿಮಾನಿಗಳಿಂದ ಫುಲ್​ ಮಾರ್ಕ್ಸ್​
ನಾಗ ಚೈತನ್ಯ
Follow us on

ನಟ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಅವರ ಮುಖದಲ್ಲಿ ನಗು ಮೂಡಿದೆ. ಅದಕ್ಕೆ ಕಾರಣ ‘ಕಸ್ಟಡಿ’ ಸಿನಿಮಾಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ. ಇಂದು (ಮೇ 12) ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಪೊಲೀಸ್​ ಕಾನ್ಸ್​ಟೇಬಲ್​ ಪಾತ್ರದಲ್ಲಿ ನಾಗ ಚೈತನ್ಯ ಅವರು ಕಾಣಿಸಿಕೊಂಡಿದ್ದಾರೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ವೆಂಕಟ್​ ಪ್ರಭು ಅವರು ‘ಕಸ್ಟಡಿ’ (Custody) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅರವಿಂದ್​ ಸ್ವಾಮಿ ಅವರು ವಿಲನ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ಇಳಯರಾಜ ಮತ್ತು ಯುವನ್​ ಶಂಕರ್​ ರಾಜ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೃತಿ ಶೆಟ್ಟಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಮೊದಲ ದಿನವೇ ಸಿನಿಮಾ ನೋಡಿಬಂದಿರುವ ಅಭಿಮಾನಿಗಳು ಟ್ವಿಟರ್​ ಮೂಲಕ ವಿಮರ್ಶೆ (Custody Twitter Review) ಹಂಚಿಕೊಳ್ಳುತ್ತಿದ್ದಾರೆ.

ಕಾನ್ಸ್​ಟೇಬಲ್​ ಪಾತ್ರ ಮಾಡಿರುವ ಅಕ್ಕಿನೇನಿ ನಾಗ ಚೈತನ್ಯ ಅವರು ಇಮೇಜ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಥೆಗೆ ಅವರು ಹೆಚ್ಚು ಮಹತ್ವ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಇಷ್ಟ ಆಗಿದೆ. ಪ್ರಿಯಾಮಣಿ, ಶರತ್​ ಕುಮಾರ್​, ಸಂಪತ್​ ರಾಜ್​, ಪ್ರೇಮ್​ಜಿ, ವೆನ್ನೆಲ ಕಿಶೋರ್​, ಪ್ರೇಮಿ ವಿಶ್ವನಾಥ್​ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.

‘ಕಸ್ಟಡಿ’ ಸಿನಿಮಾದಲ್ಲಿನ ಸಾಹಸ ದೃಶ್ಯಗಳು ಮೈ ನವಿರೇಳಿಸುವಂತಿವೆ ಎಂದು ಪ್ರೇಕ್ಷಕರು ಹೇಳಿದ್ದಾರೆ. ಚಿತ್ರದಲ್ಲಿ ಹಲವು ಫೈಟಿಂಗ್​ ಸನ್ನಿವೇಶಗಳಿದ್ದು, ಎಲ್ಲದರಲ್ಲೂ ಹೊಸತನ ಕಾಣಿಸುತ್ತದೆ. ಆ್ಯಕ್ಷನ್​ ಪ್ರಿಯರಿಗೆ ಈ ಸಿನಿಮಾ ಸಖತ್​ ಇಷ್ಟ ಆಗುತ್ತಿದೆ. ನಾಗ ಚೈತನ್ಯ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಸಿನಿಮಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ನಾಗ ಚೈತನ್ಯ ಅವರು ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಗೆಲುವು ಪಡೆದಿಲ್ಲ. ‘ಥ್ಯಾಂಕ್​ ಯೂ’, ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾಗಳು ಸೋತಿದ್ದವು. ಆದರೆ ‘ಕಸ್ಟಡಿ’ ಸಿನಿಮಾಗೆ ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ ನಾಗ ಚೈತನ್ಯ ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳುವ ಸೂಚನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಕಸ್ಟಡಿ’ ಸಿನಿಮಾದಲ್ಲಿನ ಸಾಹಸ ಸನ್ನಿವೇಶಗಳು ತುಂಬ ನೈಜವಾಗಿ ಮೂಡಿಬಂದಿವೆ. ಪೊಲೀಸ್​ ಸ್ಟೇಷನ್​ನಲ್ಲಿ ನಡೆಯುವ ಫೈಟಿಂಗ್​ ಸೀನ್​ ಚೆನ್ನಾಗಿದೆ. ಅಂಡರ್​ ವಾಟರ್​ ಸನ್ನಿವೇಶ, ರೈಲಿನ ದೃಶ್ಯ ಸಖತ್​ ಆಗಿದೆ. ಹಿನ್ನೆಲೆ ಸಂಗೀತ ತುಂಬ ಚೆನ್ನಾಗಿದೆ ಎಂದು ಪ್ರೇಕ್ಷಕರು ಪಾಸಿಟಿವ್​ ವಿಮರ್ಶೆ ತಿಳಿಸಿದ್ದಾರೆ.

ತುಂಬ ದಿನಗಳ ಬಳಿಕ ಒಂದು ಥ್ರಿಲ್ಲಿಂಗ್​ ಸಿನಿಮಾ ನೋಡಿದ ಅನುಭವ ಆಯಿತು. ಈಗ ಅಭಿಮಾನಿಗಳೆಲ್ಲರೂ ನಾಗ ಚೈತನ್ಯರ ಕಸ್ಟಡಿಯಲ್ಲಿ ಇದ್ದಾರೆ. ಕೃತಿ ಶೆಟ್ಟಿ ಅವರ ನಟನೆ ಚೆನ್ನಾಗಿದೆ. ಅರವಿಂದ್​ ಸ್ವಾಮಿ ಅವರ ಪಾತ್ರ ಮತ್ತು ಡೈಲಾಗ್​ಗಳು ಚೆನ್ನಾಗಿವೆ. ಪ್ರತಿ 10ರಿಂದ 15 ನಿಮಿಷಕ್ಕೊಂದು ಫೈಟಿಂಗ್​ ದೃಶ್ಯ ಬರುತ್ತದೆ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.