AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Custody Movie: ಇಮೇಜ್​ ಬದಿಗಿಟ್ಟು ಕಾನ್ಸ್​ಟೇಬಲ್​ ಪಾತ್ರ ಮಾಡಿದ ನಾಗ ಚೈತನ್ಯ; ಆದರೆ ಇಲ್ಲಿದೆ ಒಂದು ಟ್ವಿಸ್ಟ್​​

Akkineni Naga Chaitanya: ಕಾನ್ಸ್​ಟೇಬಲ್​ ಪಾತ್ರ ಮಾಡುವಾಗ ಅಕ್ಕಿನೇನಿ ನಾಗ ಚೈತನ್ಯ ಅವರು ಇಮೇಜ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಥೆಗೆ ಅವರು ಹೆಚ್ಚು ಮಹತ್ವ ನೀಡಿದ್ದಾರೆ.

Custody Movie: ಇಮೇಜ್​ ಬದಿಗಿಟ್ಟು ಕಾನ್ಸ್​ಟೇಬಲ್​ ಪಾತ್ರ ಮಾಡಿದ ನಾಗ ಚೈತನ್ಯ; ಆದರೆ ಇಲ್ಲಿದೆ ಒಂದು ಟ್ವಿಸ್ಟ್​​
ನಾಗ ಚೈತನ್ಯ
Follow us
ಮದನ್​ ಕುಮಾರ್​
|

Updated on: May 12, 2023 | 6:45 AM

ಟಾಲಿವುಡ್​ನ ಸ್ಟಾ​ರ್​ ನಟ ಅಕ್ಕಿನೇನಿ ನಾಗ ಚೈತನ್ಯ (Akkineni Naga Chaitanya) ಅವರು ಒಂದು ಗೆಲುವಿಗಾಗಿ ಕಾದಿದ್ದಾರೆ. ಸಮಂತಾ ರುತ್​ ಪ್ರಭು ಜೊತೆಗಿನ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ ಬಳಿಕ ಅವರು ವೃತ್ತಿಜೀವನದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ ಗೆಲ್ಲಬೇಕು ಎಂಬ ಅವರ ಪ್ರಯತ್ನವಂತೂ ನಿಂತಿಲ್ಲ. ನಾಗ ಚೈತನ್ಯ ನಟಿಸಿದ್ದ ‘ಥ್ಯಾಂಕ್​ ಯೂ’ ಸಿನಿಮಾ 2022ರಲ್ಲಿ ಬಿಡುಗಡೆಯಾಗಿ ಸೋಲುಂಡಿತು. ಆಮಿರ್​ ಖಾನ್​ ಜೊತೆ ಅವರು ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಕೂಡ ನೆಲಕಚ್ಚಿತು. ಈಗ ಅವರು ‘ಕಸ್ಟಡಿ’ ಸಿನಿಮಾ (Custody Movie) ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಇಂದು (ಮೇ 12) ಬಿಡುಗಡೆ ಆಗುತ್ತಿದೆ. ಟ್ರೇಲರ್​ ಮೂಲಕ ‘ಕಸ್ಟಡಿ’ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಅವರು ಕಾನ್ಸ್​ಟೇಬಲ್​ (Police Constable) ಪಾತ್ರ ಮಾಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ಹೀರೋಗಳು ತಮ್ಮ ಪಾತ್ರದ ಇಮೇಜ್​ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅನೇಕ ಹೀರೋಗಳು ಈಗಾಗಲೇ ಪೊಲೀಸ್​ ಪಾತ್ರ ಮಾಡಿ ಮಿಂಚಿದ್ದಾರೆ. ಆದರೆ ಆ ಎಲ್ಲ ಪಾತ್ರಗಳು ಪೊಲೀಸ್​ ಇಲಾಖೆಯ ಉನ್ನತ ಅಧಿಕಾರಿಗಳ ಪಾತ್ರಗಳೇ ಆಗಿರುತ್ತವೆ. ಕಾನ್ಸ್​ಟೇಬಲ್​ ಪಾತ್ರದಲ್ಲಿ ಕಾಣಿಸಿಕೊಳ್ಳುಬೇಕು ಎಂದಾಗ ಕೆಲವು ಹೀರೋಗಳು ಒಪ್ಪಿಕೊಳ್ಳದೇ ಇರಬಹುದು. ಆದರೆ ನಾಗ ಚೈತನ್ಯ ಅವರು ಈ ಪಾತ್ರವನ್ನು ಇಷ್ಟಪಟ್ಟು ನಟಿಸಿದ್ದಾರೆ.

ಇದನ್ನೂ ಓದಿ: ‘ನಾನು ತಪ್ಪು ಮಾಡಿಲ್ಲ, ಭಯ ಪಡಲ್ಲ’; ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿಯ ಸ್ಪಷ್ಟನೆ

ಇದನ್ನೂ ಓದಿ
Image
ಆಮಿರ್​ ಖಾನ್​ ಮೇಲೆ ನಾಗ ಚೈತನ್ಯ ಫ್ಯಾನ್ಸ್​ ಬೇಸರ; ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​ನಿಂದ ನಿರಾಸೆ
Image
ವೃತ್ತಿಜೀವನದಲ್ಲೂ ಮಾಜಿ ಗಂಡನಿಗೆ ಎದುರಾಳಿಯಾಗಿ ನಿಂತ ಸಮಂತಾ; ನಾಗ ಚೈತನ್ಯ ಚಿತ್ರಕ್ಕೆ ‘ಯಶೋದ’ ಫೈಟ್​
Image
3 ವರ್ಷದ ಹಿಂದಿನ ಘಟನೆ ನೆನೆದು ಖುಷಿಪಟ್ಟ ಸಮಂತಾ; ಇದು ಮಾಜಿ ಪತಿ ನಾಗ ಚೈತನ್ಯ ಕುರಿತ ವಿಷಯ
Image
ವಿದೇಶದಲ್ಲಿ ಹಣ ಉಳಿಸಲು ಇಂಥ ಕೆಲಸ ಮಾಡಿದ್ರಾ​ ನಾಗ ಚೈತನ್ಯ-ರಾಶಿ ಖನ್ನಾ? ಇದು ಟಾಲಿವುಡ್​ ಗಾಸಿಪ್​

ಕಾನ್ಸ್​ಟೇಬಲ್​ ಪಾತ್ರ ಮಾಡುವಾಗ ಅಕ್ಕಿನೇನಿ ನಾಗ ಚೈತನ್ಯ ಅವರು ಇಮೇಜ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಥೆಗೆ ಅವರು ಹೆಚ್ಚು ಮಹತ್ವ ನೀಡಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬ ಭರವಸೆ ಅವರಿಗೆ ಇದೆ. ಪೊಲೀಸ್​ ಇಲಾಖೆಯಲ್ಲಿ ಕಾನ್ಸ್​ಟೇಬಲ್​ಗೆ ಹೆಚ್ಚು ಅಧಿಕಾರ ಇರುವುದಿಲ್ಲ. ಅಂಥ ಪಾತ್ರವನ್ನು ‘ಕಸ್ಟಡಿ’ ಚಿತ್ರದಲ್ಲಿ ಹೀರೋ ರೀತಿ ತೋರಿಸುತ್ತಿರುವುದು ವಿಶೇಷ. ಚಿತ್ರದ ದ್ವಿತೀಯಾರ್ಧದಲ್ಲಿ ಈ ಪಾತ್ರ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆಯಂತೆ. ಆಗ ಪ್ರೇಕ್ಷಕರಿಗೆ ಟ್ವಿಸ್ಟ್​ ಸಿಗಲಿದೆ. ಈ ಎಲ್ಲ ಕಾರಣದಿಂದ ನಾಗ ಚೈತನ್ಯ ಅವರು ಕಾನ್ಸ್​ಟೇಬಲ್​ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ.

ಇದನ್ನೂ ಓದಿ: ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತು, ಮೂರನೇ ವ್ಯಕ್ತಿಗಳ ಬಗ್ಗೆ ಆಕ್ರೋಶ

ವೆಂಕಟ್​ ಪ್ರಭು ಅವರು ‘ಕಸ್ಟಡಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅರವಿಂದ್​ ಸ್ವಾಮಿ ಅವರು ವಿಲನ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ಇಳಯರಾಜ ಮತ್ತು ಯುವನ್​ ಶಂಕರ್​ ರಾಜ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೃತಿ ಶೆಟ್ಟಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಪ್ರಿಯಾಮಣಿ, ಶರತ್​ ಕುಮಾರ್​, ಸಂಪತ್​ ರಾಜ್​, ಪ್ರೇಮ್​ಜಿ, ವೆನ್ನೆಲ ಕಿಶೋರ್​, ಪ್ರೇಮಿ ವಿಶ್ವನಾಥ್​ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ