Puri Jagannadh: ಕೊನೆಗೂ ಪುರಿ ಜಗನ್ನಾಥ್​ಗೆ ಸಿಕ್ಕ ಹೀರೋ; ಆದರೆ ನಿರ್ದೇಶಕರು ಅಂದುಕೊಂಡಂತೆ ಆಗಲೇ ಇಲ್ಲ..

ಪುರಿ ಜಗನ್ನಾಥ್ ಅವರ ಒಂದು ಸಿನಿಮಾ ರಿಲೀಸ್ ಆದ ಬಳಿಕ ಮತ್ತೊಂದು ಸಿನಿಮಾ ಅನೌನ್ಸ್ ಆಗುತ್ತಿತ್ತು. ಹೀಗಾಗಿ ಪ್ರತಿ ವರ್ಷ ಅವರ ನಿರ್ದೇಶನದ ಒಂದು ಚಿತ್ರವಾದರೂ ರಿಲೀಸ್ ಆಗುತ್ತಿತ್ತು. ಆದರೆ ಇತ್ತೀಚೆಗೆ ಹಾಗಾಗಿಲ್ಲ.

Puri Jagannadh: ಕೊನೆಗೂ ಪುರಿ ಜಗನ್ನಾಥ್​ಗೆ ಸಿಕ್ಕ ಹೀರೋ; ಆದರೆ ನಿರ್ದೇಶಕರು ಅಂದುಕೊಂಡಂತೆ ಆಗಲೇ ಇಲ್ಲ..
ಪುರಿ ಜಗನ್ನಾಥ್
Follow us
ರಾಜೇಶ್ ದುಗ್ಗುಮನೆ
|

Updated on:May 12, 2023 | 7:12 AM

ಕಳೆದ ವರ್ಷ ರಿಲೀಸ್ ಆದ ಪುರಿ ಜಗನ್ನಾಥ್ (Puri Jagannadh) ನಿರ್ದೇಶನದ, ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಹೀನಾಯವಾಗಿ ಸೋಲು ಕಂಡಿತು. ಈ ಸೋಲು ಇಬ್ಬರಿಗೂ ದೊಡ್ಡ ಹೊಡೆತ ನೀಡಿತು. ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಅದ್ದೂರಿಯಾಗಿ ಈ ಸಿನಿಮಾ ಲಾಂಚ್ ಆಗಿತ್ತು ಕೂಡ. ಆದರೆ, ಸಿನಿಮಾ ಸೆಟ್ಟೇರಲೇ ಇಲ್ಲ. ‘ಲೈಗರ್’ (Liger Movie)ಸೋಲು ಎಷ್ಟು ಕೆಟ್ಟದಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನ. ಈ ಸಿನಿಮಾ ಬಳಿಕ ಸಿನಿಮಾ ಮಾಡೋಕೆ ಪುರಿ ಜಗನ್ನಾಥ್​ಗೆ ಯಾವುದೇ ಹೀರೋ ಸಿಕ್ಕಿರಲಿಲ್ಲ. ಈಗ ಕೊನೆಗೂ ಅವರಿಗೆ ಹೀರೋ ಸಿಕ್ಕಿದ್ದಾರೆ. ರಾಮ್ ಪೋತಿನೇನಿ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪುರಿ ಜಗನ್ನಾಥ್ ಅವರ ಒಂದು ಸಿನಿಮಾ ರಿಲೀಸ್ ಆದ ಬಳಿಕ ಮತ್ತೊಂದು ಸಿನಿಮಾ ಅನೌನ್ಸ್ ಆಗುತ್ತಿತ್ತು. ಹೀಗಾಗಿ ಪ್ರತಿ ವರ್ಷ ಅವರ ನಿರ್ದೇಶನದ ಒಂದು ಚಿತ್ರವಾದರೂ ರಿಲೀಸ್ ಆಗುತ್ತಿತ್ತು. 2000ನೇ ಇಸವಿಯಿಂದ 2020ರವರೆಗೆ ಇದು ಫಾಲೋ ಆಗಿದೆ. ಕೊವಿಡ್ ಹಾಗೂ ‘ಲೈಗರ್’ ಸಿನಿಮಾ ಕೆಲಸದ  ಕಾರಣದಿಂದ 2020 ಹಾಗೂ 2021ರಲ್ಲಿ ಅವರ ನಿರ್ದೇಶನದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ‘ಲೈಗರ್​’ ಚಿತ್ರಕ್ಕಾಗಿ ಮೂರು ವರ್ಷ ಮುಡಿಪಿಟ್ಟಿದ್ದು ವ್ಯರ್ಥವಾಗಿದೆ.

‘ಲೈಗರ್’ ಬಳಿಕ ಪುರಿ ಜಗನ್ನಾಥ್ ಅವರು ಸ್ಟಾರ್ ಹೀರೋ ಜೊತೆ ಕೆಲಸ ಮಾಡಬೇಕು ಎಂದು ಕನಸು ಕಂಡಿದ್ದರು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಅವರ ಜೊತೆ ಸಿನಿಮಾ ಮಾಡೋಕೆ ಯಾರೂ ಮುಂದೆ ಬರುತ್ತಿಲ್ಲ. ಇದು ಅವರನ್ನು ಚಿಂತೆಗೆ ಈಡು ಮಾಡಿತ್ತು. ಕೊನೆಗೂ ಅವರಿಗೆ ಹೀರೋ ಸಿಕ್ಕಿದ್ದಾನೆ.

ಇದನ್ನೂ ಓದಿ: ನಿರ್ದೇಶಕ ಪೂರಿ ಜಗನ್ನಾಥ್​ ಹೊಸ ಸಿನಿಮಾದಲ್ಲಿ ನಟ ಧ್ರುವ ಸರ್ಜಾ?

‘ಇಸ್ಮಾರ್ಟ್​ ಶಂಕರ್’ ಸಿನಿಮಾ 2019ರಲ್ಲಿ ತೆರೆಗೆ ಬಂದು ಯಶಸ್ಸು ಕಂಡಿತು. ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ರಾಮ್ ಪೋತಿನೇನಿ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದರು. ಸೀಕ್ವೆಲ್​ನಲ್ಲೂ ಅವರೇ ಮುಂದುವರಿಯಲಿದ್ದಾರೆ. ಚಿತ್ರದ ಕಥೆ ಇಷ್ಟವಾಗಿದ್ದು, ಅವರು ಸಿನಿಮಾ ಮಾಡೋಕೆ ಒಪ್ಪಿದ್ದಾರೆ. ಹೀಗಾಗಿ, ಸ್ಟಾರ್ ಹೀರೋ ಜೊತೆ ಮಾಡಬೇಕು ಎನ್ನುವ ಅವರ ಕನಸು ಕನಸಾಗಿಯೇ ಉಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:09 am, Fri, 12 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ