Akkineni Nagarjuna: 63ರ ಪ್ರಾಯದಲ್ಲೂ ಹದಿಹರೆಯದ ಹುಡುಗನಂತೆ ಕಾಣುವ ನಾಗಾರ್ಜುನ ಆರೋಗ್ಯದ ಗುಟ್ಟು ಏನು?

Akkineni Nagarjuna Birthday: ಉತ್ತಮವಾದ ಜೀವನಶೈಲಿಯೇ ತಮ್ಮ ಫಿಟ್ನೆಸ್​ಗೆ ಶೇ.50ರಷ್ಟು ಕಾರಣ ಎಂದು ಅಕ್ಕಿನೇನಿ ನಾಗಾರ್ಜುನ ನಂಬಿದ್ದಾರೆ. ಇನ್ನುಳಿದಂತೆ ವರ್ಕೌಟ್​ ಮತ್ತು ಡಯೆಟ್​ ತಲಾ ಶೇ.25ರಷ್ಟು ಪಾತ್ರವನ್ನು ವಹಿಸುತ್ತಿವೆ.

Akkineni Nagarjuna: 63ರ ಪ್ರಾಯದಲ್ಲೂ ಹದಿಹರೆಯದ ಹುಡುಗನಂತೆ ಕಾಣುವ ನಾಗಾರ್ಜುನ ಆರೋಗ್ಯದ ಗುಟ್ಟು ಏನು?
ಅಕ್ಕಿನೇನಿ ನಾಗಾರ್ಜುನ
Updated By: ಮದನ್​ ಕುಮಾರ್​

Updated on: Aug 29, 2022 | 11:23 AM

ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ (Akkineni Nagarjuna Birthday) ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಹಾಗೂ ಕುಟುಂಬದವರು ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗದಲ್ಲಿ ನಾಗಾರ್ಜುನ ಅವರಿಗೆ ಮೂರೂವರೆ ದಶಕಗಳ ಅನುಭವ ಇದೆ. ಇಂದಿಗೂ ಕೂಡ ಅವರ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಫಿಟ್ನೆಸ್​ (Fitness) ವಿಚಾರದಲ್ಲೂ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಅವರ ಆರೋಗ್ಯದ ಗುಟ್ಟು ತಿಳಿಯಲು ಅಭಿಮಾನಿಗಳಿಗೆ ಆಸಕ್ತಿ ಇದೆ. ಆ ಬಗ್ಗೆ ಕೆಲವು ಸಂದರ್ಶನದಲ್ಲಿ ನಾಗಾರ್ಜುನ ಮಾತನಾಡಿದ್ದುಂಟು.

ಫಿಟ್ನೆಸ್​ ಬಗ್ಗೆ ನಾಗಾರ್ಜುನ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಸಿನಿಮಾ ಕೆಲಸಗಳಲ್ಲಿ ಅವರು ಎಷ್ಟೇ ಬ್ಯುಸಿ ಆಗಿದ್ದರೂ ವರ್ಕೌಟ್​ ತಪ್ಪಿಸುವುದಿಲ್ಲ. ಅದೇ ರೀತಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಶಿಸ್ತನ್ನು ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ಅವರು 63ರ ಪ್ರಾಯದಲ್ಲೂ ಹದಿಹರೆಯದ ಯುವಕನಂತೆ ಕಟ್ಟುಮಸ್ತಾಗಿ ದೇಹ ಇಟ್ಟುಕೊಂಡಿದ್ದಾರೆ. ಸಿನಿಮಾಗಳಲ್ಲಿ ಹೊಸ ಹೀರೋ ರೀತಿಯಲ್ಲಿ ಅವರು ಫೈಟಿಂಗ್​ ಮಾಡುತ್ತಾರೆ.

ಪ್ರತಿದಿನ ಬೆಳಗ್ಗೆ 6 ಗಂಟೆಗೆ ನಾಗಾರ್ಜುನ ಅವರು ಜಿಮ್​ನಲ್ಲಿ ವರ್ಕೌಟ್​ ಆರಂಭಿಸುತ್ತಾರೆ. ಅದಾದ ಬಳಿಕ ನಿಯಮಿತವಾಗಿ ಆಹಾರ ಸೇವಿಸುತ್ತಾರೆ. ಇದರಲ್ಲಿ ಎಗ್​ ವೈಟ್​ ಮತ್ತು ಬ್ರೆಡ್​ ಇರುತ್ತದೆ. 11 ಗಂಟೆಗೆ ಎರಡನೇ ಬಾರಿ ಉಪಹಾರ ಸೇವಿಸುತ್ತಾರೆ. ದೋಸೆ, ಇಡ್ಲಿ, ಪೊಂಗಲ್​ ಮುಂತಾದ ಆಹಾರವನ್ನು ಅವರು ತಿನ್ನುತ್ತಾರೆ. ಮಧ್ಯಾಹ್ನದ ಭೋಜನದಲ್ಲಿ ಅನ್ನ, ರೋಟಿ ಮತ್ತು ನಾಲ್ಕು ಬಗೆಯ ತರಕಾರಿ ಪಲ್ಯವನ್ನು ನಾಗಾರ್ಜುನ ಸೇವಿಸುತ್ತಾರೆ. ಸಂಜೆ 7 ಗಂಟೆಗೆ ಊಟ ಮುಗಿಸುತ್ತಾರೆ. ಗ್ರಿಲ್ಡ್​ ಚಿಕನ್​ ಅಥವಾ ಫಿಶ್​ ಜೊತೆಗೆ ಬೇಯಿಸಿದ ತರಕಾರಿಯನ್ನು ನಾಗಾರ್ಜುನ ತಿನ್ನುತ್ತಾರೆ. ರಾತ್ರಿ 10 ಗಂಟೆಗೆ ಮಲಗುವ ಅಭ್ಯಾಸವನ್ನು ಅವರು ರೂಢಿಸಿಕೊಂಡಿದ್ದಾರೆ.

ಇದನ್ನೂ ಓದಿ
Akkineni Nagarjuna: ‘ಬಿಗ್​ ಬಾಸ್​ ತೆಲುಗು ಸೀಸನ್​ 6’ ನಿರೂಪಣೆಗೆ ಸಜ್ಜಾದ ನಾಗಾರ್ಜುನ; ಇಲ್ಲಿದೆ ಹೊಸ ಪ್ರೋಮೋ
​‘ಬ್ರಹ್ಮಾಸ್ತ್ರ’ ಟ್ರೇಲರ್​ನಲ್ಲಿ ಗಮನ ಸೆಳೆದ ಪಾತ್ರವರ್ಗ; ಆಲಿಯಾ, ರಣಬೀರ್​ ಜತೆ ಬಚ್ಚನ್​, ನಾಗಾರ್ಜುನ ಮಿಂಚಿಂಗ್​
ದುಬೈನಲ್ಲಿ ಅಕ್ಕಿನೇನಿ ನಾಗಾರ್ಜುನ ಜತೆ ಇರೋ ಈ ಹುಡುಗಿ ಯಾರು? ವೈರಲ್​ ಆಯ್ತು ಫೋಟೋ
ಕೊಟ್ಟ ಮಾತಿನಂತೆ 1000 ಎಕರೆ ಕಾಡನ್ನು ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ; ಇಲ್ಲಿವೆ ಫೋಟೋಗಳು

ಬೇರೆ ನಟರಂತೆ ಡಯೆಟ್​ಗೆ ನಾಗಾರ್ಜುನ ಅವರು ಹೆಚ್ಚು ಮಹತ್ವ ನೀಡುವುದಿಲ್ಲ. ತಾವು ಅಭ್ಯಾಸ ಮಾಡಿಕೊಂಡಿರುವ ಉತ್ತಮವಾದ ಜೀವನಶೈಲಿಯೇ ತಮ್ಮ ಫಿಟ್ನೆಸ್​ಗೆ ಶೇ.50ರಷ್ಟು ಕಾರಣ ಎಂದು ಅವರು ನಂಬಿದ್ದಾರೆ. ಇನ್ನುಳಿದಂತೆ ವರ್ಕೌಟ್​ ಮತ್ತು ಡಯೆಟ್​ ತಲಾ ಶೇ.25ರಷ್ಟು ಪಾತ್ರವನ್ನು ವಹಿಸುತ್ತಿವೆ.

ನಟನಾಗಿ, ನಿರೂಪಕನಾಗಿ ನಾಗಾರ್ಜುನ ಅವರು ಗಮನ ಸೆಳೆಯುತ್ತಿದ್ದಾರೆ. ತೆಲುಗಿನಲ್ಲಿ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ನಿರೂಪಿಸಿ ಜನಮನ ಗೆದ್ದಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹಿಂದಿಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.