‘ಬಿಗ್ ಬಾಸ್’ ನಿರೂಪಣೆಗೆ ನಾಗಾರ್ಜುನ ಪಡೆವ ಸಂಭಾವನೆ ಸುದೀಪ್ಗಿಂತಲೂ ಹೆಚ್ಚು?
ತೆಲುಗಿನಲ್ಲಿ ‘ಬಿಗ್ ಬಾಸ್ 6’ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಸೆಪ್ಟೆಂಬರ್ 4ರಿಂದ ಹೊಸ ಸೀಸನ್ ಆರಂಭ ಆಗಲಿದೆ. 100 ದಿನಗಳ ಕಾಲ ನಡೆಯುವ ಈ ಶೋಗಾಗಿ ಅಕ್ಕಿನೇನಿ ನಾಗಾರ್ಜುನ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.
‘ಬಿಗ್ ಬಾಸ್’ (Bigg Boss) ರಿಯಾಲಿಟಿ ಶೋಗೆ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಅನೇಕ ಭಾಷೆಗಳಲ್ಲಿ ಈ ಶೋ ಪ್ರಸಾರ ಕಾಣುತ್ತಿದೆ. ಕನ್ನಡದಲ್ಲಿ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಸೀಸನ್ ಆರಂಭ ಆಗಿದೆ. ಅದಾದ ಬಳಿಕ ‘ಕನ್ನಡ ಬಿಗ್ ಬಾಸ್ ಸೀಸನ್ 9’ ಆರಂಭ ಆಗಲಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ತೆಲುಗು ಹಾಗೂ ಹಿಂದಿಯಲ್ಲಿ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಮಧ್ಯೆ ತೆಲುಗು ಬಿಗ್ ಬಾಸ್ಗಾಗಿ ಅಕ್ಕಿನೇನಿ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅವರು ಸುದೀಪ್ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ.
ತೆಲುಗಿನಲ್ಲಿ ಬಿಗ್ ಬಾಸ್ ಅನ್ನು ವಿವಿಧ ಹೀರೋ-ಹೀರೋಯಿನ್ಗಳು ನಡೆಸಿಕೊಟ್ಟಿದ್ದಾರೆ. ಸೀಸನ್ 1ಗೆ ಜ್ಯೂ.ಎನ್ಟಿಆರ್ ಅವರು ಮುಂದಾಳತ್ವ ವಹಿಸಿದರೆ, ಸೀಸನ್ 2ಗೆ ನಾನಿ ನಿರೂಪಣೆ ಮಾಡಿದ್ದರು. ನಂತರ ಈ ಜವಾಬ್ದಾರಿ ನಾಗಾರ್ಜುನ ಅವರ ಹೆಗಲು ಏರಿತು. ಮಧ್ಯದಲ್ಲಿ ಕೆಲವೊಮ್ಮೆ ಅವರು ಬಿಗ್ ಬಾಸ್ ನಿರೂಪಣೆಯಿಂದ ಬ್ರೇಕ್ ತೆಗೆದುಕೊಂಡಿದ್ದು ಇದೆ. ಆದರೆ, ಅವರು ಸಂಪೂರ್ಣವಾಗಿ ನಿರೂಪಣೆಯನ್ನು ತ್ಯಜಿಸಿಲ್ಲ.
ತೆಲುಗಿನಲ್ಲಿ ‘ಬಿಗ್ ಬಾಸ್ 6’ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಸೆಪ್ಟೆಂಬರ್ 4ರಿಂದ ಹೊಸ ಸೀಸನ್ ಆರಂಭ ಆಗಲಿದೆ. 100 ದಿನಗಳ ಕಾಲ ನಡೆಯುವ ಈ ಶೋಗಾಗಿ ಅಕ್ಕಿನೇನಿ ನಾಗಾರ್ಜುನ ಅವರು 15 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ 7-8 ಕೋಟಿ ರೂಪಾಯಿ ಪಡೆಯುತ್ತಿದ್ದರು. ಈ ಬಾರಿ ಅವರ ಸಂಭಾವನೆ ದ್ವಿಗುಣವಾಗಿದೆ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್
ಕಿಚ್ಚ ಸುದೀಪ್ ಅವರು ಕನ್ನಡದಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಬಿಗ್ ಬಾಸ್ ನಿರೂಪಣೆ ಮಾಡುತ್ತಾರೆ. ಇದಕ್ಕಾಗಿ ಅವರು 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ಸುದೀಪ್ಗಿಂತ ದ್ವಿಗುಣ ಸಂಭಾವನೆಯನ್ನು ಅಕ್ಕಿನೇನಿ ನಾಗಾರ್ಜುನ ಅವರು ತೆಗೆದುಕೊಳ್ಳುತ್ತಾರೆ ಎನ್ನುತ್ತಿವೆ ವರದಿಗಳು. ಆದರೆ, ಇವರಿಬ್ಬರ ಸಂಭಾವನೆ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಸದ್ಯ, ತೆಲುಗು ಬಿಗ್ ಬಾಸ್ಗೆ ಕಾಲಿಡುವ ಸಂಭಾವ್ಯರ ಪಟ್ಟಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.