ಕಿಚ್ಚ ಸುದೀಪ್ ಬರ್ತ್​​ಡೇಗೆ ಶುರುವಾಯ್ತು ಕೌಂಟ್​ಡೌನ್​; ಶಿವಣ್ಣ ಅನಾವರಣ ಮಾಡಿದ ಕಾಮನ್ ಡಿಪಿ ಹೇಗಿದೆ ನೋಡಿ

ಕಿಚ್ಚ ಸುದೀಪ್ ಅವರಿಗೆ ಬರ್ತ್​ಡೇ ವಿಶೇಷವಾಗಿರಲಿದೆ. ಇದಕ್ಕೆ ಕಾರಣ ‘ವಿಕ್ರಾಂತ್​’ ರೋಣ ಸಿನಿಮಾದ ಯಶಸ್ಸು. ಇದು ಸುದೀಪ್ ಹಾಗೂ ಅವರ ಫ್ಯಾನ್ಸ್ ಖುಷಿಯನ್ನು ಹೆಚ್ಚಿಸಿದೆ. ಈ ಕಾರಣಕ್ಕೆ ಕಿಚ್ಚನಿಗೆ ಈ ಬಾರಿಯ ಬರ್ತ್​ಡೇ ವಿಶೇಷವಾಗಿರಲಿದೆ.

ಕಿಚ್ಚ ಸುದೀಪ್ ಬರ್ತ್​​ಡೇಗೆ ಶುರುವಾಯ್ತು ಕೌಂಟ್​ಡೌನ್​; ಶಿವಣ್ಣ ಅನಾವರಣ ಮಾಡಿದ ಕಾಮನ್ ಡಿಪಿ ಹೇಗಿದೆ ನೋಡಿ
ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 27, 2022 | 7:53 PM

ಕಿಚ್ಚ ಸುದೀಪ್ (Kichcha Sudeep) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ವಿಕ್ರಾಂತ್ ರೋಣ’ ಸಿನಿಮಾದಿಂದ ಬಾಲಿವುಡ್​ನಲ್ಲಿ ಅವರಿಗೆ ಅಭಿಮಾನಿಗಳು ಹೆಚ್ಚಿದ್ದಾರೆ. ಈಗ ಸುದೀಪ್ ಜನ್ಮದಿನಕ್ಕೆ ಕೌಂಟ್​ಡೌನ್ ಶುರುವಾಗಿದೆ. ಸೆಪ್ಟೆಂಬರ್ 2ರಂದು ಸುದೀಪ್ 49ನೇ ವರ್ಷದ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈಗ ಶಿವರಾಜ್​ಕುಮಾರ್ (Shivarajkumar) ಅವರು ಕಾಮನ್ ಡಿಪಿ ಅನಾವರಣ ಮಾಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ಬರ್ತ್​ಡೇ ವಿಶೇಷವಾಗಿರಲಿದೆ. ಇದಕ್ಕೆ ಕಾರಣ ‘ವಿಕ್ರಾಂತ್​’ ರೋಣ ಸಿನಿಮಾದ ಯಶಸ್ಸು. ಜುಲೈ 29ರಂದು ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಸುದೀಪ್ ಹಾಗೂ ಅವರ ಫ್ಯಾನ್ಸ್ ಖುಷಿಯನ್ನು ಹೆಚ್ಚಿಸಿದೆ. ಈ ಕಾರಣಕ್ಕೆ ಕಿಚ್ಚನಿಗೆ ಈ ಬಾರಿಯ ಬರ್ತ್​ಡೇ ವಿಶೇಷವಾಗಿರಲಿದೆ.

ಇದನ್ನೂ ಓದಿ
Image
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
Image
Kichcha Sudeep: ಹೈದರಾಬಾದ್​​ನಲ್ಲಿ ‘ವಿಕ್ರಾಂತ್​ ರೋಣ’ ಸಕ್ಸಸ್​ ಮೀಟ್​; ತೆಲುಗು ಸ್ನೇಹಿತರಿಗೆ, ಪ್ರೇಕ್ಷಕರಿಗೆ ಕಿಚ್ಚನ ಧನ್ಯವಾದ
Image
‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
Image
‘ವಿಕ್ರಾಂತ್​ ರೋಣ ಪಾರ್ಟ್​ 2 ಐಡಿಯಾ ಇದೆ, ಅದು ಬೇರೆ ಪ್ರಪಂಚದಲ್ಲಿ ನಡೆಯುತ್ತೆ’: ಅನೂಪ್​ ಭಂಡಾರಿ

ಆದರೆ, ಈ ಬಾರಿ ಸುದೀಪ್ ಬರ್ತ್​ಡೇ ಆಚರಿಸಿಕೊಳ್ಳುವುದು ಅನುಮಾನವೇ. ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ ಒಂದು ವರ್ಷ ಕಳೆದಿಲ್ಲ. ಅವರಿಲ್ಲ ಎಂಬ ನೋವು ಈಗಲೂ ಫ್ಯಾನ್ಸ್​ಗೆ ಕಾಡುತ್ತಿದೆ. ಸುದೀಪ್ ಅವರಿಗೂ ಪುನೀತ್​ಗೂ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಅವರಿಲ್ಲ ಎಂಬ ನೋವು ಸುದೀಪ್​ಗೆ ಅತಿಯಾಗಿ ಕಾಡುತ್ತಿದೆ. ಈ ಕಾರಣದಿಂದ ಅವರು ಈ ಬಾರಿ ಜನ್ಮದಿನ ಆಚರಿಸಿಕೊಳ್ಳುವುದು ಅನುಮಾನವೇ. ಈ ಬಗ್ಗೆ ಅವರ ಕಡೆಯಿಂದ ಶೀಘ್ರವೇ ಘೋಷಣೆ ಆಗಬೇಕಿದೆ.

ಸುದೀಪ್ ಅವರ ಬರ್ತ್​ಡೇಗೂ ಮೊದಲು ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ. ಶಿವಣ್ಣ ಅವರು ಕಾಮನ್​ ಡಿಪಿಯನ್ನು ಅನಾವರಣ ಮಾಡಿದ್ದಾರೆ. ಇದು ಸಾಕಷ್ಟು ಗಮನ ಸೆಳೆಯುತ್ತಿದೆ. ಸುದೀಪ್ ಅವರು ಕುಳಿತಿದ್ದಾರೆ. ಅವರ ಹೆಗಲಮೇಲೆ, ಕೈ ಮೇಲೆ, ನೆಲದಮೇಲೆ ಫ್ಯಾನ್ಸ್ ಕುಳಿತಿದ್ದಾರೆ. ಹಿಂಭಾಗದಲ್ಲಿ ‘ಬಾದ್​ಶಾ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್​

ಕಿಚ್ಚ ಸುದೀಪ್ ಬರ್ತ್​ಡೇಗೆ ಒಂದು ವಿಶೇಷ ಗಿಫ್ಟ್ ಸಿಗುತ್ತಿದೆ. ‘ವಿಕ್ರಾಂತ್ ರೋಣ’ ಸಿನಿಮಾ ಸೆಪ್ಟೆಂಬರ್ 2ರಂದು ಜೀ5 ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆಗುತ್ತಿದೆ. ಇದು ಸುದೀಪ್ ಫ್ಯಾನ್ಸ್​ಗೆ ಖುಷಿ ನೀಡಿದೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಈ ಚಿತ್ರವನ್ನು ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಅದು ಸುದೀಪ್ ಬರ್ತ್​ಡೇ ದಿನವೇ ಅನ್ನೋದು ವಿಶೇಷ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ