ಬಾಲಿವುಡ್​ ನಿರ್ಮಾಪಕರನ್ನು ಸಂಪೂರ್ಣವಾಗಿ ನಿಯಂತ್ರಿಸಿದ ಅಲ್ಲು ಅರ್ಜುನ್; ‘ಶಹಜಾದಾ’ ಚಿತ್ರಕ್ಕೆ ಲಾಭ

ಈ ಚಿತ್ರದ ರಿಲೀಸ್​ ಸಂದರ್ಭದಲ್ಲಿ ‘ಅಲ ವೈಕುಂಠಪುರಮುಲೋ’ ಹಿಂದಿ ವರ್ಷನ್ ಯೂಟ್ಯೂಬ್​ನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಲಾಗಿತ್ತು. ಇದು ಕಾರ್ತಿಕ್ ಆರ್ಯನ್ ಚಿತ್ರಕ್ಕೆ ಹಿನ್ನಡೆ ತಂದಿತ್ತು.

ಬಾಲಿವುಡ್​ ನಿರ್ಮಾಪಕರನ್ನು ಸಂಪೂರ್ಣವಾಗಿ ನಿಯಂತ್ರಿಸಿದ ಅಲ್ಲು ಅರ್ಜುನ್; ‘ಶಹಜಾದಾ’ ಚಿತ್ರಕ್ಕೆ ಲಾಭ
ಅಲ್ಲು ಅರ್ಜುನ್

Updated on: Feb 06, 2023 | 7:26 AM

ಬಾಲಿವುಡ್​ನ ಗೋಲ್ಡ್​ಮೈನ್ ನಿರ್ಮಾಣ ಸಂಸ್ಥೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರವನ್ನು (Pushpa Movie) ಹಿಂದಿಯಲ್ಲಿ ರಿಲೀಸ್ ಮಾಡಿ ಒಳ್ಳೆಯ ಲಾಭ ಕಂಡಿತ್ತು. ಈ ಸಿನಿಮಾ ಬಾಲಿವುಡ್​ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿತ್ತು. ಈಗ ‘ಅಲ ವೈಕುಂಠಪುರಮುಲೋ’ (Ala Vaikunthapurramuloo) ಸಿನಿಮಾನ ಥಿಯೇಟರ್​ನಲ್ಲಿ ರಿಲೀಸ್ ಮಾಡಲು ಗೋಲ್ಡ್​ಮೈನ್ ಪ್ಲ್ಯಾನ್ ಮಾಡಿದ್ದರು. ಬಳಿಕ ಅದು ಕ್ಯಾನ್ಸಲ್ ಆಗಿತ್ತು. ಈ ಚಿತ್ರವನ್ನು ಯೂಟ್ಯೂಬ್​ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇತ್ತು. ಆದರೆ, ಈಗ ಅದು ಕೂಡ ರದ್ದಾಗಿದೆ. ಇದಕ್ಕೆ ಅಲ್ಲು ಅರ್ಜುನ್ ಕಾರಣ ಎನ್ನಲಾಗಿದೆ.

‘ಅಲ ವೈಕುಂಠಪುರಮುಲೋ’ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಹಿಂದಿ ಮಂದಿ ಅದನ್ನು ‘ಶಹಜಾದಾ’ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸನೋನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರಕ್ಕೆ ಹಿಂದಿಯಲ್ಲಿ ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ರಿಲೀಸ್​ ಸಂದರ್ಭದಲ್ಲಿ ‘ಅಲ ವೈಕುಂಠಪುರಮುಲೋ’ ಹಿಂದಿ ವರ್ಷನ್ ಯೂಟ್ಯೂಬ್​ನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಲಾಗಿತ್ತು. ಇದು ಕಾರ್ತಿಕ್ ಆರ್ಯನ್ ಚಿತ್ರಕ್ಕೆ ಹಿನ್ನಡೆ ತಂದಿತ್ತು.

ಆದರೆ, ಇದನ್ನು ಅಲ್ಲು ಅರ್ಜುನ್ ಅವರು ತಡೆದಿದ್ದಾರೆ. ‘ಅಲ ವೈಕುಂಠಪುರಮುಲೋ’ ರಿಲೀಸ್ ಮಾಡಲು ಮುಂದಾದ ಗೋಲ್ಡ್​ಮೈನ್ ಕಂಪನಿಯವರ ಜತೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ‘ಶೆಹಜಾದ’ ತಂಡದವರು ಈ ಬಗ್ಗೆ ಅಲ್ಲು ಅರ್ಜುನ್ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ಅವರೇ ಮಾತುಕತೆಗೆ ಇಳಿದಿದ್ದಾರೆ. ಈ ಮಾತುಕತೆ ಯಶಸ್ವಿ ಆಗಿದೆ.

ಇದನ್ನೂ ಓದಿ
150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ
ಮೂರೇ ದಿನಕ್ಕೆ ಅರ್ಧಶತಕ ಬಾರಿಸಿದ ಕಾರ್ತಿಕ್ ಆರ್ಯನ್ ಸಿನಿಮಾ; ಬಾಲಿವುಡ್​ಗೆ ಸಿಕ್ತು ಹೊಸ ಬೂಸ್ಟ್​
ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ
ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?

ಇದನ್ನೂ ಓದಿ:  ಮುಂದಿನ ಸಂಕ್ರಾಂತಿಗೆ ಬಾಕ್ಸ್ ಆಫೀಸ್​ನಲ್ಲಿ ಅಲ್ಲು ಅರ್ಜುನ್​-ರಾಮ್ ಚರಣ್ ಮಧ್ಯೆ ಫೈಟ್​?

‘ಪುಷ್ಪ’ ಚಿತ್ರದಿಂದ ಅಲ್ಲು ಅರ್ಜುನ್ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ‘ಪುಷ್ಪ 2’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಪುಷ್ಪ’ ಸಿನಿಮಾ ಹಿಂದಿಯಲ್ಲೂ ಒಳ್ಳೆಯ ಕಮಾಯಿ ಮಾಡಿದೆ. ಇದರ ಜತೆ ‘ಶಹಜಾದ’ ಬರುತ್ತಿದೆ. ಈ ಸಂದರ್ಭದಲ್ಲಿ ‘ಅಲ ವೈಕುಂಠಪುರಮುಲೋ’ ಸಿನಿಮಾದ ಹಿಂದಿ ವರ್ಷನ್ ರಿಲೀಸ್ ಮಾಡಿದರೆ ಹೆಚ್ಚು ವೀಕ್ಷಣೆ ಪಡೆಯಬಹುದು ಅನ್ನೋದು ಗೋಲ್ಡ್​ಮೈನ್ ಅವರ ಆಲೋಚನೆ ಆಗಿತ್ತು. ಆದರೆ, ಈಗ ಅದು ವಿಫಲ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us