ಪ್ರಶಾಂತ್ ನೀಲ್ ಸಿನಿಮಾನಲ್ಲಿ ನಟಿಸಲಿರುವ ಅಲ್ಲು ಅರ್ಜುನ್, ಹೆಸರೇನು ಗೊತ್ತೆ?

Allu Arjun and Prashanth Neel: ಪ್ರಶಾಂತ್ ನೀಲ್ ಪ್ರಸ್ತುತ ಜೂ ಎನ್​ಟಿಆರ್ ನಟನೆಯ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ‘ಪುಷ್ಪ 2’ ಬಳಿಕ ಅಟ್ಲಿ ನಿರ್ದೇಶನದ ಹಾಲಿವುಡ್ ಮಾದರಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಈ ಇಬ್ಬರೂ ಸೇರಿ ಸಿನಿಮಾ ಒಂದನ್ನು ಮಾಡಲಿದ್ದು, ದಿಲ್ ರಾಜು ಆ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಈ ಬಗ್ಗೆ ಸ್ವತಃ ದಿಲ್ ರಾಜು ಮಾತನಾಡಿದ್ದಾರೆ.

ಪ್ರಶಾಂತ್ ನೀಲ್ ಸಿನಿಮಾನಲ್ಲಿ ನಟಿಸಲಿರುವ ಅಲ್ಲು ಅರ್ಜುನ್, ಹೆಸರೇನು ಗೊತ್ತೆ?
Allu Arjun Prashanth Neel

Updated on: Jul 02, 2025 | 6:26 PM

ಪ್ರಶಾಂತ್ ನೀಲ್ (Prashanth Neel), ‘ಕೆಜಿಎಫ್ 2’ ಬಳಿಕ ತೆಲುಗು ಚಿತ್ರರಂಗದಲ್ಲಿಯೇ ಸೆಟಲ್ ಆದಂತಿದೆ. ‘ಕೆಜಿಎಫ್ 2’ ಸಿನಿಮಾದ ಬಳಿಕ ಅವರು ಪ್ರಭಾಸ್​ಗಾಗಿ ‘ಸಲಾರ್’ ಸಿನಿಮಾ ನಿರ್ದೇಶಿಸಿದರು. ಅದು ಹಿಟ್ ಎನಿಸಿಕೊಂಡಿತು. ಈಗ ಜೂ ಎನ್​ಟಿಆರ್​ಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದಾದ ಬಳಿಕ ಪ್ರಭಾಸ್ ಜೊತೆಗೆ ‘ಸಲಾರ್ 2’ ಮಾಡಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕವಾದರೂ ಪ್ರಶಾಂತ್ ನೀಲ್ ಕನ್ನಡಕ್ಕೆ ಮರಳುತ್ತಾರೆ ಎನ್ನಲಾಗಿತ್ತು, ಆದರೆ ಈಗ ಅವರು ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲು ತಯಾರಾಗಿದ್ದಾರೆ. ಈ ಬಗ್ಗೆ ನಿರ್ಮಾಪಕರು ಮಾತನಾಡಿದ್ದಾರೆ.

ಅಲ್ಲು ಅರ್ಜುನ್​ಗಾಗಿ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಸಿನಿಮಾಕ್ಕೆ ‘ರಾವಣಮ್’ ಎಂದು ಹೆಸರಿಡಲಾಗಿದೆ. ಸಿನಿಮಾ ಅನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ನಿರ್ಮಾಣ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ದಿಲ್ ರಾಜು ಸುದ್ದಿ ಖಾತ್ರಿಗೊಳಿಸಿದ್ದಾರೆ. ದಿಲ್ ರಾಜು ನಿರ್ಮಾಣದ ‘ತಮ್ಮುಡು’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಅವರು ಈ ವಿಷಯ ಬಹಿರಂಗಗೊಳಿಸಿದ್ದಾರೆ. ‘ರಾವಣಮ್’ ಹೆಸರಿನ ಸಿನಿಮಾ ಅನ್ನು ನಮ್ಮ ಬ್ಯಾನರ್​​ನಲ್ಲಿ ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ. ಆದರೆ ಅಲ್ಲು ಅರ್ಜುನ್ ಮತ್ತು ಪ್ರಶಾಂತ್ ನೀಲ್ ಅವರುಗಳು ತಮಗೆ ಈಗಿರುವ ಸಿನಿಮಾ ಕಮಿಟ್​ಮೆಂಟ್ಗಳನ್ನು ಮುಗಿಸಿದ ಬಳಿಕವಷ್ಟೆ ‘ರಾವಣಮ್’ ಸಿನಿಮಾ ಪ್ರಾರಂಭ ಆಗಲಿದೆ’ ಎಂದಿದ್ದಾರೆ ದಿಲ್ ರಾಜು.

ಇದನ್ನೂ ಓದಿ:ನೀನು ಸೋತೆ, ಅಲ್ಲು ಅರ್ಜುನ್ ಗೆದ್ದ: ಸ್ಟಾರ್ ಹೀರೋಗೆ ನೇರವಾಗಿ ಹೇಳಿದ ದಿಲ್ ರಾಜು

ಆದರೆ ಇಬ್ಬರೂ ನಟರಿಗೆ ಈಗಿರುವ ಕಮಿಟ್​ಮೆಂಟ್ ನೋಡಿದರೆ ‘ರಾವಣಮ್’ ಸಿನಿಮಾ ಸೆಟ್ಟೇರಲು ಕನಿಷ್ಟ ಎರಡು ವರ್ಷ ಬೇಕಾಗಬಹುದು ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಪ್ರಸ್ತುತ ಜೂ ಎನ್​ಟಿಆರ್ ನಟನೆಯ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದು ವರ್ಷ ಸಮಯ ಬೇಕಿದೆ. ಅದಾದ ಬಳಿಕ ಪ್ರಭಾಸ್ ಸಿನಿಮಾ ಕೈಗೆತ್ತಿಕೊಂಡರೆ ಅದಕ್ಕೂ ಕನಿಷ್ಟ ಒಂದು ವರ್ಷ ಬೇಕಾಗಬಹುದು. ಹಾಗಾಗಿ ಅಲ್ಲು ಅರ್ಜುನ್ ಸಿನಿಮಾ ಶುರುವಾಗುವುದೇ ಎರಡು ವರ್ಷ ಆದ ಬಳಿಕ ಎಂದು ಅಂದಾಜಿಸಬಹುದು.

ಇನ್ನು ಅಲ್ಲು ಅರ್ಜುನ್ ಸಹ ಬಹಳ ಬ್ಯುಸಿ ಆಗಿದ್ದಾರೆ ಪ್ರಸ್ತುತ ಅವರು ಅಟ್ಲಿ ನಿರ್ದೇಶನದ ಫ್ಯಾಂಟಸಿ ಮಾದರಿಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಹಾಲಿವುಡ್​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಒಳಗೊಂಡಿದೆ. ಯಾವುದೋ ಲೋಕದಲ್ಲಿ ಚಿತ್ರ-ವಿಚಿತ್ರ ಜೀವಿಗಳ ನಡುವೆ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ಸನ್ ನೆಟ್ವರ್ಕ್ಸ್​ನ ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ