ಜುಲೈ 3ರಿಂದ ‘ಕರ್ಣ’ ಧಾರಾವಾಹಿ; ಟಿವಿಗೂ ಮೊದಲೇ ಒಟಿಟಿಯಲ್ಲಿ ಪ್ರಸಾರ
Karna Serial: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ 16ರಂದೇ ‘ಕರ್ಣ’ ಧಾರಾವಾಹಿಯ ಮೊದಲ ಎಪಿಸೋಡ್ ಪ್ರಸಾರ ಕಂಡಿರಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಭವ್ಯಾ ಗೌಡ ಅವರ ‘ಬಿಗ್ ಬಾಸ್" ಒಪ್ಪಂದದ ಕಾರಣ ಟಿವಿ ಪ್ರಸಾರ ವಿಳಂಬವಾಯಿತು.ಜೀ ಕನ್ನಡದ ‘ಕರ್ಣ’ ಧಾರಾವಾಹಿ ಅನಿರೀಕ್ಷಿತವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮೊದಲು ಪ್ರಸಾರವಾಗಿದೆ.

ಸಾಮಾನ್ಯವಾಗಿ ಕೆಲವು ಸಿನಿಮಾಗಳು ಥಿಯೇಟರ್ನಲ್ಲಿ ಬಿಡುಗಡೆ ಆಗದೆ ಒಟಿಟಿಗೆ ಬಂದ ಉದಾಹರಣೆ ಇದೆ. ಥಿಯೇಟರ್ನಲ್ಲಿ ಸಿನಿಮಾಗಳು ರನ್ ಆಗುತ್ತೋ ಅಥವಾ ಇಲ್ಲವೋ ಎಂಬ ಅನುಮಾನ ಇದ್ದವರು ಈ ಮಾರ್ಗ ಅನುಸರಿಸುತ್ತಾರೆ. ಆದರೆ, ಈಗ ಸೀರಿಯಲ್ ಇತಿಹಾಸದಲ್ಲೇ ಒಂದು ಅಪರೂಪದ ಬೆಳವಣಿಗೆ ನಡೆದಿದೆ. ‘ಕರ್ಣ’ (Karna Serial) ಧಾರವಾಹಿ ಜುಲೈ 3ರಿಂದ ಟಿವಿಯಲ್ಲಿ ಪ್ರಸಾರ ಕಾಣಲಿದೆ. ಹಾಗಿರುವಾಗಲೇ ಈ ಧಾರಾವಾಹಿಯ ಮೊದಲ ಎಪಿಸೋಡ್ ಒಟಿಟಿಯಲ್ಲಿ ಪ್ರಸಾರ ಕಂಡಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ 16ರಂದೇ ‘ಕರ್ಣ’ ಧಾರಾವಾಹಿಯ ಮೊದಲ ಎಪಿಸೋಡ್ ಪ್ರಸಾರ ಕಂಡಿರಬೇಕಿತ್ತು. ಈ ಧಾರಾವಾಹಿಯಲ್ಲಿ ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಅವರು ನಟಿಸಿದ್ದಾರೆ. ಆದರೆ, ಈ ಧಾರಾವಾಹಿಗೆ ವಿಘ್ನ ಎದುರಾಯಿತು. ಭವ್ಯಾ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಭಾಗವಹಿಸುವ ವೇಳೆ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರು. ಆ ಒಪ್ಪಂದದ ಅವಧಿ ಮುಗಿಯುವ ಮೊದಲೇ ‘ಕರ್ಣ’ ಧಾರಾವಾಹಿ ಪ್ರಸಾರ ಕಂಡಿದ್ದರಿಂದ ಕೇಸ್ ಹಾಕಲಾಯಿತು.
ಇದೇ ಕಾರಣದಿಂದ ‘ಕರ್ಣ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಂಡಿರಲಿಲ್ಲ. ‘ಕರ್ಣ ಬರೋದು ತಡವಾಗಬಹುದು. ಆದರೆ, ಅವನು ಬರೋದು ಖಚಿತ’ ಎಂದು ವಾಹಿನಿಯವರು ಹೇಳಿದ್ದರು. ಈಗ ಈ ಧಾರಾವಾಹಿಯ ಮೊದಲ ಎಪಿಸೋಡ್ ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿಗೆ ವಿಘ್ನ; ಇಂದು ಪ್ರಸಾರ ಆಗಲ್ಲ ಸೀರಿಯಲ್
ಟಿವಿಯಲ್ಲಿ ಪ್ರಸಾರ ಕಂಡ ಬಳಿಕವೇ ಧಾರಾವಾಹಿಯನ್ನು ಒಟಿಟಿಯಲ್ಲಿ ಪ್ರಸಾರ ಮಾಡೋದು ವಾಡಿಕೆ. ಆದರೆ, ಜೀ ಕನ್ನಡ ಹಾಗೂ ಜೀ 5 ಈಗ ಹೊಸ ತಂತ್ರವನ್ನು ಬಳಸಿದೆ. ಈ ಧಾರಾವಾಹಿ ಸೋಮವಾರದಿಂದ ಶುಕ್ರವರಾದವರೆಗೆ ಟಿವಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರ ಕಾಣಲಿದೆ.
View this post on Instagram
ಈ ಧಾರಾವಾಹಿಯಲ್ಲಿ ಕಿರಣ್ ರಾಜ್ ವೈದ್ಯನ ಪಾತ್ರ ಮಾಡಿದ್ದಾರೆ. ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಸಹೋದರಿಯರಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೂ ಒಬ್ಬರ ಮೇಲೆ ಲವ್ ಆಗುತ್ತದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:29 pm, Wed, 2 July 25








