‘ನಮಗೆ ಈಗ ವೇದಿಕೆ ಸಿಕ್ಕಿದೆ’; ವೇವ್ಸ್ ಬಗ್ಗೆ ಅಲ್ಲು ಅರ್ಜುನ್ ಮಾತು

ವರ್ಲ್ಡ್ ಆಡಿಯೋ ವಿಶ್ಯುವಲ್ಸ್ ಎಂಟರ್ಟೈನ್ಮೆಂಟ್ ಸಮ್ಮೇಳನ ವೇವ್ಸ್ 2025ರಲ್ಲಿ ಭಾಗವಹಿಸಿದ ಅಲ್ಲು ಅರ್ಜುನ್, ಭಾರತೀಯ ಸಿನಿಮಾಕ್ಕೆ ಹೊಸ ವೇದಿಕೆ ಸೃಷ್ಟಿಯಾಗಿದೆ ಎಂದು ಹೇಳಿದರು. ಅವರ ಹೊಸ ಚಿತ್ರದ ಬಗ್ಗೆಯೂ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಮತ್ತು ಅಂತರರಾಷ್ಟ್ರೀಯ ತಂತ್ರಜ್ಞಾನದ ಸಮ್ಮಿಲನವನ್ನು ಪ್ರತಿಬಿಂಬಿಸುವ ಚಿತ್ರ ಇದಾಗಿದೆ ಎಂದರು.

‘ನಮಗೆ ಈಗ ವೇದಿಕೆ ಸಿಕ್ಕಿದೆ’; ವೇವ್ಸ್ ಬಗ್ಗೆ ಅಲ್ಲು ಅರ್ಜುನ್ ಮಾತು
ಅಲ್ಲು ಅರ್ಜುನ್

Updated on: May 02, 2025 | 9:46 AM

ಮುಂಬೈನ ಜಿಯೋ ವರ್ಲ್ಡ್ ಸೆಂಟರ್​ನಲ್ಲಿ ವರ್ಲ್ಡ್​ ಆಡಿಯೋ ವಿಶ್ಯುವಲ್ಸ್ ಎಂಟರ್​​ಟೇನ್​ಮೆಂಟ್ ಸಮ್ಮೇಳನ 2025 (ವೇವ್ಸ್ 2025​) ನಡೆದಿದೆ. ನಟ ಅಲ್ಲು ಅರ್ಜುನ್ (Allu Arjun) ಅವರು ಇದರಲ್ಲಿ ಭಾಗಿ ಆದರು. ಈ ವೇಳೆ ಅವರು ಈ ಸಮ್ಮೇಳನದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ‘ಟ್ಯಾಲೆಂಟ್ ಆ್ಯಂಡ್ ಬಿಯಾಂಡ್ ಬಾರ್ಡರ್ಸ್’ ಸೆಷನ್​ನಲ್ಲಿ ಟಿವಿ9 ಕನ್ನಡ ಎಂಡಿ ಹಾಗೂ ಸಿಇಒ ಬರುಣ್ ದಾಸ್ ಜೊತೆ ಅವರು ಮಾತುಕತೆ ನಡೆಸಿದ್ದಾರೆ.

‘ಭಾರತದಲ್ಲಿನ ಜನರಿಗೆ ಹೊಸದನ್ನು ಮಾಡಬೇಕು ಎನ್ನುವ ಉತ್ಸಾಹ ಇತ್ತು. ಈಗ ಅದಕ್ಕೆ ವೇದಿಕೆ ಸಿಕ್ಕಿದೆ. ನನಗೆ ವೇವ್ಸ್ ಮೇಲೆ ನಂಬಿಕೆ ಇದೆ. ಕಂಟೆಂಟ್ ಕ್ರಿಯೇಷನ್​ನಲ್ಲಿ ವೇವ್ಸ್ ಸಹಕಾರಿ ಆಗಲಿದೆ’ ಎಂದು ಅವರು ಹೇಳಿದ್ದಾರೆ. ಅವರು ಈ ಕ್ರಮದ ಬಗ್ಗೆ ನಂಬಿಕೆ ಹೊಂದಿದ್ದಾರೆ.

ಅಟ್ಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಾ ಇದ್ದಾರೆ. ಈ ಬಗ್ಗೆ ಮಾತನಾಡಿರೋ ಅವರು, ‘ನಾವು ಭಾರತೀಯ ಸಂಸ್ಕೃತಿ ಜೊತೆ ಅಂತಾರಾಷ್ಟ್ರೀಯ ತಂತ್ರಜ್ಞಾನವನ್ನು ಸೇರ್ಪಡೆ ಮಾಡುತ್ತಾ ಇ್ದದೇವೆ. ಈ ಸಿನಿಮಾ ಭಾರತದ್ದು, ಭಾರತದವರಿಗಾಗಿ ಮಾಡಿದ ಸಿನಿಮಾ. ಇದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲಿದೆ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

ಇದನ್ನೂ ಓದಿ
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?
ಇಲ್ಲಿಗೆ ಬರಲು ನಾನೊಬ್ಬನೇ ಕಾರಣವಲ್ಲ; ಹಲವರಿಗೆ ಕ್ರೆಡಿಟ್ ಕೊಟ್ಟ ಅಲ್ಲು
ಅಜಿತ್​ಗೆ ಸಾವಿನ ಬಗ್ಗೆ ಶುರುವಾಗಿದೆ ಭಯ? ವಿಚಿತ್ರವಾಗಿ ಮಾತನಾಡಿದ ನಟ

‘ಅನೇಕ ಯುವ ನಟರು ಎಲ್ಲಾ ಭಾಷೆಗಳಲ್ಲೂ ಇದ್ದಾರೆ. ಅವರುಗಳು ಮಿಂಚುತ್ತಿದ್ದಾರೆ. ಯಾವಾಗಲೂ ಹಸಿವಿನಿಂದ ಇರಬೇಕು’ ಎಂದಿದ್ದಾರೆ ಅವರು. ಅಲ್ಲು ಅರ್ಜುನ್ ಅವರು ತಮ್ಮ ತಾತ ಅಲ್ಲು ರಾಮಲಿಂಗಯ್ಯ ಅವರನ್ನು ನೆನಪಿಸಿಕೊಂಡರು.

ಇದನ್ನೂ ಓದಿ: ‘ಈ ಮಟ್ಟಕ್ಕೆ ಬರಲು ನಾನೊಬ್ಬನೇ ಕಾರಣ ಅಲ್ಲ’; ಹಲವರಿಗೆ ಕ್ರೆಡಿಟ್ ಕೊಟ್ಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು ಸ್ಟಾರ್​ಗಳ ಮಧ್ಯೆ ಹುಟ್ಟಿ ಬೆಳೆದವರು. ಅವರುಗಳನ್ನು ನೋಡಿ ಅನೇಕ ವಿಚಾರಗಳನ್ನು ಅಲ್ಲು ಅರ್ಜುನ್ ಕಲಿತಿದ್ದಾರೆ. ಅಷ್ಟೇ ಅಲ್ಲ, ಅಲ್ಲು ಅರ್ಜುನ್ ಅವರ ವಿನಮ್ರತೆಗೆ ಸುತ್ತಲಿನ ಜನರೇ ಕಾರಣ ಎಂದು ಹೇಳಿದ್ದಾರೆ. ಚಿರಂಜೀವಿ, ತಂದೆ ಅಲ್ಲು ಅರವಿಂದ್ ಅವರಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ ಎಂದು ಅಲ್ಲು ಅರ್ಜುನ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.