Pushpa 2: ತುಟಿಗೆ ಬಣ್ಣ, ಕೈಗೆ ಬಳೆ, ಕಿವಿಗೆ ಓಲೆ ಏನಿದು ಅಲ್ಲು ಅರ್ಜುನ್ ಅವತಾರ

Pushpa 2: ತುಟಿಗೆ ಬಣ್ಣ, ಕಿವಿಗೆ ಓಲೆ, ಮೂಗಿಗೆ ಮೂಗುತಿ, ಕೈಗೆ ಬಳೆ, ಮೆಹಂದಿ ಏನಿದು ಅಲ್ಲು ಅರ್ಜುನ್ ಅವತಾರ?

Pushpa 2: ತುಟಿಗೆ ಬಣ್ಣ, ಕೈಗೆ ಬಳೆ, ಕಿವಿಗೆ ಓಲೆ ಏನಿದು ಅಲ್ಲು ಅರ್ಜುನ್ ಅವತಾರ
ಪುಷ್ಪ 2
Follow us
ಮಂಜುನಾಥ ಸಿ.
|

Updated on:Apr 07, 2023 | 9:01 PM

ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬದ (Birthday) ಪ್ರಯುಕ್ತ ಅವರ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 (Pushpa 2) ನ ಟೀಸರ್ ಬಿಡುಗಡೆ ಆಗಿ ಭಾರಿ ಸದ್ದು ಮಾಡುತ್ತಿದೆ. ಟೀಸರ್ ಜೊತೆಗೆ ಪೋಸ್ಟರ್ ಒಂದನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದ್ದು, ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್ ಅವತಾರ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸ್ಟೈಲಿಷ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಅಲ್ಲು ಅರ್ಜುನ್, ಪುಷ್ಪ 2 ಸಿನಿಮಾದ ಪೋಸ್ಟರ್​ನಲ್ಲಿ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಸಾಮಾನ್ಯ ಮಹಿಳೆಯಲ್ಲ, ಶಕ್ತಿದೇವತೆ ಕಾಳಿಯ ಅವತಾರದಲ್ಲಿ!

ಮೂಗಿಗೆ ಮೂಗುತಿ, ನತ್ತು, ಕಿವಿಯಲ್ಲಿ ತೂಗಾಡುವ ಓಲೆ, ತುಟಿಗೆ ಕೆಂಪು ಬಣ್ಣದ ಲಿಪ್​ಸ್ಟಿಕ್ಕು, ತೋಳಿಗೆ ತೋಳುಬಂಧಿ, ಕೊರಳಿಗೆ ಎರಡೆರಡು ಸರ ಜೊತೆಗೆ ನಿಂಬೆ ಹಾರ, ಕೆಂಪು ಬಣ್ಣದ ರವಿಕೆ, ಅದರ ಮೇಲೆ ನೀಲಿ ಸೀರೆ, ಕೈಗೆ ಕೆಂಪು ಬಳೆ, ಉಗುರಿಗೆ ಬಣ್ಣ, ಕೈಗೆ ಮೆಹಂದಿ, ಬೆರಳುಗಳಿಗೆ ಹಲವು ಉಂಗುರ ಧರಿಸಿರುವ ಜೊತೆಗೆ ಕೈಯಲ್ಲಿ ಬಂದೂಕು ಹಿಡಿದು, ಬಹು ತೀಕ್ಷಣ ದೃಷ್ಟಿಯಿಂದ ನೋಡುತ್ತಿರುವ ಅಲ್ಲು ಅರ್ಜುನ್ ಅಂದವಾಗಿ ಕಾಣುತ್ತಿರುವ ಜೊತೆಗೆ ಭಯಾನಕವಾಗಿಯೂ ಕಾಣುತ್ತಿದ್ದಾರೆ. ಯಾರನ್ನೋ ಸಂಹರಿಸಲು ಹೊರಟಂತಿದೆ ಅವರ ಅವತಾರ. ಆದರೆ ಈ ಕಾಳಿ ಅವತಾರದಲ್ಲಿಯೂ ಗಡ್ಡ ಹಾಗೆಯೇ ಬಿಟ್ಟಿದ್ದಾರೆ ಅಲ್ಲು.

ಪುಷ್ಪ 2 ಸಿನಿಮಾದ ಪೋಸ್ಟರ್ ಇದಾಗಿದ್ದು, ಸ್ವತಃ ಅಲ್ಲು ಅರ್ಜುನ್ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪುಷ್ಪ 2 ಪ್ರಾರಂಭ ಎಂದು ಬರೆದುಕೊಂಡಿದ್ದಾರೆ. ಹಲವರು, ಅಲ್ಲು ಅರ್ಜುನ್​ರ ಈ ಪೋಸ್ಟರ್ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ ಅಭಿಮಾನಿಗಳು. ದೊಡ್ಡ ಸ್ಟಾರ್ ಆಗಿದ್ದರು ಪಾತ್ರಕ್ಕಾಗಿ ಮಹಿಳೆಯ ಅಥವಾ ದೇವತೆಯ ವೇಷ ಧರಿಸಿರುವುದಕ್ಕೆ ಭರಪೂರ ಮೆಚ್ಚುಗೆಯೂ ವ್ಯಕ್ತವಾಗಿದೆ.

ಇದೇ ದಿನ ಪುಷ್ಪ 2 ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದ್ದು, ಟೀಸರ್​ನಲ್ಲಿ ಸಿನಿಮಾದ ಕತೆಯ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಡಲಾಗಿದೆ. ಮೊದಲ ಭಾಗದಲ್ಲಿ ಸಾಮಾನ್ಯ ಕೂಲಿಯವನಾಗಿದ್ದ ಪುಷ್ಪ, ಈಗ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾನೆ. ರಕ್ತ ಚಂದನ ಸಾಗಾಣಿಕೆಯಿಂದ ಕೋಟ್ಯಂತರ ಹಣ ಸಂಪಾದನೆ ಮಾಡಿದ್ದಾನೆ. ಆ ಹಣವನ್ನು ಬಡವರ ಏಳ್ಗೆಗಾಗಿ ಖರ್ಚು ಮಾಡಿ ದೊಡ್ಡ ಸಂಖ್ಯೆಯ ಜನರನ್ನು ತನ್ನ ಬೆಂಬಲಿಗರನ್ನಾಗಿ ಮಾಡಿಕೊಂಡಿದ್ದಾನೆ. ಮಕ್ಕಳ ಆಪರೇಷನ್​ಗೆ, ಶಿಕ್ಷಣಕ್ಕೆ ಹಣ ಕೊಟ್ಟಿದ್ದಾನೆ, ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಟ್ಟಿದ್ದಾನೆ. ಆದರೆ ರಾಜಕಾರಣಿಗಳಿಗೆ, ಪೊಲೀಸರಿಗೆ ಮಾಧ್ಯಮದವರಿಗೆ ಅವನು ಸಂಪಾದಿಸಿರುವ ಕೋಟ್ಯಂತರ ಹಣದ ಮೇಲಷ್ಟೆ ಕಣ್ಣು, ಆ ಹಣವನ್ನು ಅವನು ಏನು ಮಾಡಿದ ಎಂಬುದು ಅವರಿಗೆ ಬೇಕಿಲ್ಲ. ಪೊಲೀಸರು ರಾಜಕಾರಣಿಗಳು ಪುಷ್ಪನ ಬೆನ್ನು ಬಿದ್ದಿದ್ದಾರೆ ಇದರ ಫಲಿತವಾಗಿ ಪುಷ್ಪ ಜೈಲು ಸಹ ಸೇರಿದ್ದಾನೆ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಸಹ.

ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಿದ್ದು ಇದೇ ಕಾರಣಕ್ಕೆ ಪುಷ್ಪ 2 ಸಿನಿಮಾದ ಟೀಸರ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ನಾಯಕಿ. ಫಹಾದ್ ಫಾಸಿಲ್ ವಿಲನ್. ಸಿನಿಮಾದಲ್ಲಿ ಡಾಲಿ ಧನಂಜಯ್ ಸಹ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:30 pm, Fri, 7 April 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?