ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ‘ಪುಷ್ಪ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಲ್ಲು ಅರ್ಜುನ್ ನಾಯಕತ್ವದ ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಬಾರಿಯ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ‘ಪುಷ್ಪ’ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ನಿರ್ದಿಷ್ಟ ದಿನಾಂಕವನ್ನು ಚಿತ್ರತಂಡ ತಿಳಿಸಿರಲಿಲ್ಲ. ಈಗ ದಿನಾಂಕ ಕೂಡ ನಿಗದಿ ಆಗಿದೆ. ಆ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಡಿ.17ರಂದು ವಿಶ್ವಾದ್ಯಂತ ‘ಪುಷ್ಪ’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ಪುಷ್ಪ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹಲವು ಕಾರಣಗಳಿವೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಲಾರಿ ಡ್ರೈವರ್ ಪಾತ್ರ ಮಾಡಿದ್ದಾರೆ. ಅವರ ಲುಕ್ ರಗಡ್ ಆಗಿದೆ. ಖ್ಯಾತ ನಿರ್ದೇಶಕ ಸುಕುಮಾರ್ ಅವರು ರಕ್ತಚಂದನ ಕಳ್ಳಸಾಗಾಣಿಕೆಯ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಎರಡು ಪಾರ್ಟ್ನಲ್ಲಿ ‘ಪುಷ್ಪ’ ಮೂಡಿಬರುತ್ತಿದ್ದು, ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಪಾತ್ರವರ್ಗದ ಕಾರಣದಿಂದಲೂ ‘ಪುಷ್ಪ’ ಚಿತ್ರ ಹೈಪ್ ಸೃಷ್ಟಿಮಾಡಿದೆ. ಡಾಲಿ ಧನಂಜಯ, ಪ್ರಕಾಶ್ ರೈ, ಫಹಾದ್ ಫಾಸಿಲ್, ಜಗಪತಿ ಬಾಬು ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಗೂ ಡಬ್ ಆಗಿ ಈ ಸಿನಿಮಾ ತೆರೆಕಾಣುತ್ತಿದೆ.
This December, Theatres will go Wild with the arrival of #PushpaRaj ?#PushpaTheRise will hit the Big Screens on DEC 17th.#PushpaTheRiseOnDec17#ThaggedheLe ?@alluarjun @iamRashmika #FahadhFaasil @Dhananjayaka @aryasukku @ThisIsDSP @adityamusic @MythriOfficial pic.twitter.com/qkDSOM41G9
— Pushpa (@PushpaMovie) October 2, 2021
ರಶ್ಮಿಕಾ ನಿಭಾಯಿಸುತ್ತಿರುವ ಶ್ರೀವಲ್ಲಿ ಎಂಬ ಪಾತ್ರದ ಫಸ್ಟ್ ಲುಕ್ ಕೂಡ ಇತ್ತೀಚೆಗೆ ಬಿಡುಗಡೆ ಆಗಿದೆ. ಆದರೆ ಅದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಪೋಸ್ಟರ್ ಕೆಲವರಿಗೆ ಇಷ್ಟ ಆಗಿಲ್ಲ. ಅದನ್ನು ಮೀಮ್ಗಳ ರೂಪದಲ್ಲಿ ತಿಳಿಸಲಾಗುತ್ತಿದೆ. ಆ ಫೋಟೋವನ್ನು ಹಲವು ಬಗೆಯಲ್ಲಿ ಎಡಿಟ್ ಮಾಡಿ ಹರಿಬಿಡಲಾಗುತ್ತಿದೆ. ರಶ್ಮಿಕಾ ಟಾಯ್ಲೆಟ್ನಲ್ಲಿ ಕುಳಿತಿರುವಂತೆ, ಮಾರ್ಕೆಟ್ನಲ್ಲಿ ಮೀನು ಮಾರುತ್ತಿರುವಂತೆ, ಹೊಲ ಗದ್ದೆಯಲ್ಲಿ ಕುಳಿತು ಕೆಲಸ ಮಾಡುತ್ತಿರುವಂತೆ, ದುಂಡು ಪಾಳ್ಯ ಸಿನಿಮಾದಲ್ಲಿ ಪೂಜಾ ಗಾಂಧಿಯ ಪಕ್ಕ ಕುಳಿತಿರುವಂತೆ.. ಹೀಗೆ ನಾನಾ ಬಗೆಯಲ್ಲಿ ಮೀಮ್ಗಳನ್ನು ತಯಾರಿಸಲಾಗಿದೆ. ಇದರಿಂದ ‘ಪುಷ್ಪ’ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿದೆ.
ಇದನ್ನೂ ಓದಿ:
ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ; ಎಲ್ಲಿಂದ ಬರುತ್ತಿದೆ ಇಷ್ಟೊಂದು ದುಡ್ಡು?
ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?