
ಅಲ್ಲು ಅರ್ಜುನ್ (Allu Arjun) ಅವರು ಸ್ಟೈಲಿಶ್ ಸ್ಟಾರ್ ಎಂಬ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ‘ಪುಷ್ಪ’ ಚಿತ್ರ (Pushpa Movie) ತೆರೆಕಂಡ ಬಳಿಕ ಬಾಲಿವುಡ್ನಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಈ ಕಾರಣಕ್ಕೆ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಕೇವಲ ಸಿನಿಮಾ ಮಾತ್ರವಲ್ಲದೆ ಜಾಹೀರಾತು ಕ್ಷೇತ್ರಗಳಿಂದಲೂ ಅಲ್ಲು ಅರ್ಜುನ್ಗೆ ಹಲವು ಅವಕಾಶಗಳು ಹರಿದುಬರುತ್ತಿವೆ. ಆದರೆ, ಅವರು ಒಂದು ಜಾಹೀರಾತಿನಲ್ಲಿ ನಟಿಸಲು ನೋ ಎಂದಿದ್ದಾರೆ. ಈ ವಿಚಾರ ಫ್ಯಾನ್ಸ್ ಕಿವಿಗೂ ಬಿದ್ದಿದೆ. ಈ ಬಗ್ಗೆ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಅಲ್ಲು ಅರ್ಜುನ್ ಈಗಾಗಲೇ ಹಲವು ಜಾಹೀರಾತುಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ಅವರು ಜೊಮ್ಯಾಟೋ ಆ್ಯಡ್ನಲ್ಲಿ ಮಿಂಚಿದ್ದರು. ಇತ್ತೀಚೆಗೆ ತಂಬಾಕು ಹಾಗೂ ಮದ್ಯ ಕಂಪನಿಯೊಂದರ ಅಡ್ವಟೈಸ್ಮೆಂಟ್ನಲ್ಲಿ ನಟಿಸಲು ಸ್ಟೈಲಿಶ್ ಸ್ಟಾರ್ಗೆ ಆಫರ್ ನೀಡಲಾಗಿತ್ತು. ಸಂಭಾವನೆ ಜತೆಗೆ ಬೋನಸ್ ಕೊಡುವುದಾಗಿಯೂ ಕಂಪನಿ ಹೇಳಿತ್ತು. ಆದರೆ, ಹಣದ ಆಸೆಗೆ ಬೀಳದೆ ಅಲ್ಲು ಅರ್ಜುನ್ ಅವರು ಈ ಆಫರ್ ತಿರಸ್ಕರಿಸಿದ್ದಾರೆ.
ಅಲ್ಲು ಅರ್ಜುನ್ ಪ್ರತಿ ಜಾಹೀರಾತಿಗೆ 7.5 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಾರೆ ಎನ್ನಲಾಗಿದೆ. ತಂಬಾಕು ಹಾಗೂ ಮದ್ಯದ ಕಂಪನಿಯವರು ಈ ಸಂಭಾವನೆಯ ಜತೆಗೆ 2.5 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಕೊಡುವ ಆಫರ್ ನೀಡಿದ್ದರು. ಆದರೆ, ಇದಕ್ಕೆ ಅಲ್ಲು ಅರ್ಜುನ್ ನೋ ಎಂದಿದ್ದಾರೆ.
ತಂಬಾಕು, ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಸೆಲೆಬ್ರಿಟಿಗಳನ್ನು ಹಿಂಬಾಲಿಸುವವರು ಅನೇಕರು ಇರುತ್ತಾರೆ. ಹೀಗಾಗಿ ಸ್ಟಾರ್ಗಳು ಈ ರೀತಿ ಜಾಹೀರಾತು ಮಾಡದಿರಲಿ ಎಂದು ಫ್ಯಾನ್ಸ್ ಬಯಸುತ್ತಾರೆ. ಆದಾಗ್ಯೂ ಈ ರೀತಿಯ ಜಾಹೀರಾತಿನಲ್ಲಿ ನಟ/ನಟಿಯರು ಕಾಣಿಸಿಕೊಂಡರೆ ಫ್ಯಾನ್ಸ್ ಆಕ್ರೋಶ ಹೊರ ಹಾಕುತ್ತಾರೆ. ಈಗ ಅಲ್ಲು ಅರ್ಜುನ್ ಅವರು ಈ ಜಾಹೀರಾತನ್ನು ರಿಜೆಕ್ಟ್ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಲುಕ್ ಹೀಗಿರುತ್ತಾ? ವೈರಲ್ ಆಗಿದೆ ಹೊಸ ಫೋಟೋ
ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಛೀಮಾರಿ ಹಾಕಿಸಿಕೊಂಡಿದ್ದರು. ಅನೇಕರು ಅವರನ್ನು ಟ್ರೋಲ್ ಮಾಡಿದ್ದರು. ಆ ಬಳಿಕ ಅಕ್ಷಯ್ ಕುಮಾರ್ ಅವರು ಈ ಒಪ್ಪಂದವನ್ನು ರದ್ದು ಮಾಡಿಕೊಂಡರು. ಬಳಿಕ ಫ್ಯಾನ್ಸ್ ಬಳಿ ಕ್ಷಮೆ ಕೇಳಿದರು.