ತಲೆ ಮೇಲೆ ಬಿಳಿ ಕೂದಲು, ಕೈಯಲ್ಲಿ ಸಿಗಾರ್; ಅಬ್ಬಾ ಹೇಗೆ ಕಾಣ್ತಿದ್ದಾರೆ ನೋಡಿ ಅಲ್ಲು ಅರ್ಜುನ್
‘ಪುಷ್ಪ 2’ ಚಿತ್ರದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಅಪ್ಡೇಟ್ ಸಿಗುವ ಸಾಧ್ಯತೆ ಇದೆ. ‘ಪುಷ್ಪ 2’ ಬಗ್ಗೆ ಫ್ಯಾನ್ಸ್ ಅಪ್ಡೇಟ್ ಕೇಳುತ್ತಿದ್ದಾರೆ. ಹೀಗಿರುವಾಗಲೇ ಅಲ್ಲು ಅರ್ಜುನ್ ಅವರು ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ (Allu Arjun) ಅವರ ನಟನೆಯ ‘ಪುಷ್ಪ 2’ ಚಿತ್ರದ ಬಗ್ಗೆ ಈವರೆಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಈ ಚಿತ್ರದ ಬಗ್ಗೆ ಹೊಸ ಸುದ್ದಿ ಸಿಗಲಿ ಎಂದು ಫ್ಯಾನ್ಸ್ ಕಾದು ಕೂತಿದ್ದಾರೆ. ಈ ಸಂದರ್ಭದಲ್ಲೇ ಅಲ್ಲು ಅರ್ಜುನ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಅಲ್ಲು ಅರ್ಜುನ್ ರಗಡ್ ಲುಕ್ ಕಂಡು ಫ್ಯಾನ್ಸ್ ಅಚ್ಚರಿ ಹೊರಹಾಕುತ್ತಿದ್ದಾರೆ. ಕೆಲವರು ಇದು ‘ಪುಷ್ಪ 2’ ಸಿನಿಮಾ (Pushpa 2) ಲುಕ್ ಎಂದರೆ, ಇನ್ನೂ ಕೆಲವರು ಇದು ಜಾಹೀರಾತು ಎನ್ನುತ್ತಿದ್ದಾರೆ.
‘ಪುಷ್ಪ 2’ ಚಿತ್ರದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಅಪ್ಡೇಟ್ ಸಿಗುವ ಸಾಧ್ಯತೆ ಇದೆ. ‘ಪುಷ್ಪ 2’ ಬಗ್ಗೆ ಫ್ಯಾನ್ಸ್ ಅಪ್ಡೇಟ್ ಕೇಳುತ್ತಿದ್ದಾರೆ. ಹೀಗಿರುವಾಗಲೇ ಅಲ್ಲು ಅರ್ಜುನ್ ಅವರು ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ. ಬಾಯಲ್ಲಿ ಸಿಗಾರ್ ಇದೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿದ್ದಾರೆ. ಸ್ವಲ್ಪ ಕೂದಲು ಬೆಳ್ಳಗಾಗಿದೆ. ಈ ಲುಕ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಅಲ್ಲು ಅರ್ಜುನ್ ಅವರು ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲೂ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅನೇಕ ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಈಗ ವೈರಲ್ ಆಗಿರುವ ಫೋಟೋ ಕೂಡ ಜಾಹೀರಾತಿಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಸಖತ್ ಸ್ಟೈಲಿಶ್ ಆಗಿರುವ ಫೋಟೋ ಹಂಚಿಕೊಂಡಿದ್ದರು. ಆಗಲೂ ‘ಪುಷ್ಪ 2’ ಬಗ್ಗೆ ಚರ್ಚೆ ಆಗಿತ್ತು. ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಲುಕ್ ತುಂಬಾನೇ ಭಿನ್ನವಾಗಿತ್ತು. ಹಳ್ಳಿಯಲ್ಲಿ ದಿನಗೂಲಿ ಮಾಡುವ ವ್ಯಕ್ತಿಯಾಗಿ ಅವರು ಕಾಣಿಸಿಕೊಂಡಿದ್ದರು. ಅವರಿಗೆ ಡಿಗ್ಲ್ಯಾಮ್ ಲುಕ್ ಇತ್ತು. ಈಗ ರಿಲೀಸ್ ಆಗಿರುವ ಫೋಟೋಗೂ ‘ಪುಷ್ಪ 2’ ಲುಕ್ಗೂ ಸಾಮ್ಯತೆ ಇದೆ. ಈ ಕಾರಣಕ್ಕೆ ಫ್ಯಾನ್ಸ್ ಕುತೂಹಲಗೊಂಡಿದ್ದಾರೆ.
— Allu Arjun (@alluarjun) July 29, 2022
ಇದನ್ನೂ ಓದಿ: ‘ಸಲಾರ್’, ‘ಪುಷ್ಪ 2’ ಮುಂತಾದ ಚಿತ್ರಗಳ ಬಗ್ಗೆ ಬ್ಯಾಡ್ ನ್ಯೂಸ್; ಆ.1ರಿಂದ ಶೂಟಿಂಗ್ ಸ್ಥಗಿತ; ಕಾರಣ ಏನು?
ದೊಡ್ಡ ದೊಡ್ಡ ಚಿತ್ರಗಳ ಲುಕ್ ರಿವೀಲ್ ಮಾಡುವಾಗ ಒಂದಷ್ಟು ದಿನ ಮೊದಲ ಆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ‘ಪುಷ್ಪ 2’ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಹೀಗಾಗಿ, ಅವರು ಕೂಡ ಇದೇ ತಂತ್ರ ಉಪಯೋಗಿಸುತ್ತಿದ್ದರು. ಈ ಕಾರಣದಿಂದಲೂ ಇದು ಸಿನಿಮಾ ಪೋಸ್ಟರ್ ಅಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್.
Published On - 10:17 pm, Fri, 29 July 22