Yash: ಇಟಲಿಯಲ್ಲಿ ​ಫ್ಯಾನ್ಸ್ ಭೇಟಿಯಾದ ಯಶ್​​; ಈ ಫೋಟೋಗೆ ಇದೆ ಒಂದು ವಿಶೇಷ ಹಿನ್ನೆಲೆ

ಸದ್ಯ ಯಶ್ ಇಟಲಿಯಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಲು ಒಂದು ಕಾರಣ ಇದೆ.

Yash: ಇಟಲಿಯಲ್ಲಿ ​ಫ್ಯಾನ್ಸ್ ಭೇಟಿಯಾದ ಯಶ್​​; ಈ ಫೋಟೋಗೆ ಇದೆ ಒಂದು ವಿಶೇಷ ಹಿನ್ನೆಲೆ
ಯಶ್​-ರಾಧಿಕಾ ಪಂಡಿತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 29, 2022 | 7:46 PM

ನಟ ಯಶ್ (Yash) ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ‘ಕೆಜಿಎಫ್ 2’ ಸರಣಿಯಲ್ಲಿ ನಟಿಸಿದ ನಂತರ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಕೆಲ ತಿಂಗಳ ಹಿಂದೆ ತೆರೆಗೆ ಬಂದ ‘ಕೆಜಿಎಫ್ 2’ ಚಿತ್ರದಿಂದ ಯಶ್​ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಸದ್ಯ ಯಶ್ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit) ಅವರ ಜತೆ ಯಶ್ ಯುರೋಪ್ ಸುತ್ತಾಡುತ್ತಿದ್ದಾರೆ. ಅಲ್ಲಿಯೂ ಯಶ್​ಗೆ ಫ್ಯಾನ್ಸ್ ಎದುರಾಗಿದ್ದಾರೆ. ಈ ಖುಷಿಯನ್ನು ಯಶ್​ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಕೆಜಿಎಫ್​’ ಸರಣಿಯ ಸಿನಿಮಾಗಳಲ್ಲಿ ಯಶ್​ ಅವರ ಮ್ಯಾನರಿಸಂ ಸಖತ್ ಇಷ್ಟವಾಗಿತ್ತು. ರಾಕಿ ಆಗಿ ಅವರು ಮಿಂಚಿದ್ದರು. ಈ ಕಾರಣಕ್ಕೆ ಅವರ ಜನಪ್ರಿಯತೆ ಹೆಚ್ಚಿದೆ. ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಇನ್ನೇನು ‘ಯಶ್ 19’ ಚಿತ್ರ ಘೋಷಣೆ ಆಗಬೇಕು ಎನ್ನುವಾಗ ಅವರು ವಿದೇಶಕ್ಕೆ ಹಾರಿದರು. ಸದ್ಯ ಯಶ್ ಇಟಲಿಯಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಲು ಒಂದು ಕಾರಣ ಇದೆ.

ಇದನ್ನೂ ಓದಿ
Image
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
Image
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಯಶ್ ಬಂದಿರುವ ವಿಚಾರ ಅಲ್ಲಿನ ಹೋಟೆಲ್​ ಮಂದಿಗೆ ಗೊತ್ತಾಗಿದೆ. ಯಶ್ ಆ ಸಂದರ್ಭದಲ್ಲಿ ಹೊರಗೆ ತೆರಳಿದ್ದರು. ಕೆಲಸದ ಅವಧಿ ಮುಗಿದರೂ ಯಶ್ ಬರುವವರೆಗೆ ಅವರು ಕಾದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಪ್ರೀತಿಯನ್ನು ನೋಡಿ ಯಶ್ ಸಂತಸ ಹೊರಹಾಕಿದ್ದಾರೆ. ಅವರು ತೋರಿದ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್ 2’ ಎದುರು ಬರದೆ ನಾವು ಬದುಕಿದೆವು; ಆಮಿರ್ ಖಾನ್​ಗೂ ಭಯ ಹುಟ್ಟಿಸಿದ್ದ ಯಶ್ ಚಿತ್ರದ ಅಬ್ಬರ

ಅಭಿಮಾನಿಗಳ ಜತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಯಶ್ ಟ್ವೀಟ್ ಮಾಡಿದ್ದಾರೆ. ‘ನಿಮ್ಮ ಪ್ರೀತಿ ಗಡಿಯನ್ನು ಮೀರಿದೆ. ನಾನು ಅದನ್ನು ಮುಕ್ತ ತೋಳುಗಳಿಂದ ಸ್ವೀಕರಿಸುತ್ತೇನೆ. ಇಟಲಿ ಹಾಗೂ ಬಾಂಗ್ಲಾದೇಶದ ಅಭಿಮಾನಿಗಳನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕೆಲಸ ಮುಗಿದ ನಂತರವೂ ನನಗಾಗಿ ಕಾದಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ ಯಶ್.

ನರ್ತನ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಚಿತ್ರದ ಕೆಲಸ ವಿಳಂಬ ಆಗುವ ಬಗ್ಗೆ ನರ್ತನ್ ಇತ್ತೀಚೆಗೆ ಸೂಚನೆ ನೀಡಿದ್ದರು. ಯಶ್ ಅವರು ಭಾರತಕ್ಕೆ ಮರಳಿದ ನಂತರದಲ್ಲಿ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್ ಸಿಗುವ ಸಾಧ್ಯತೆ ಇದೆ.