Allu Arjun: ಕೇವಲ 24 ಗಂಟೆಯಲ್ಲಿ ಬಾಹುಬಲಿ ದಾಖಲೆ ಮುರಿದ ಅಲ್ಲು ಅರ್ಜುನ್ ನಟನೆಯ ಪುಷ್ಪ​!

Pushpa Teaser: ಟೀಸರ್​ನಲ್ಲಿ ಅಲ್ಲು ಅರ್ಜುನ್​ ಪಾತ್ರದ ಪರಿಚಯ ಮಾಡಿಸಲಾಗಿದೆ. ಇದು ಅಭಿಮಾನಿಗಳಿಗೆ ತುಂಬ ಇಷ್ಟವಾಗಿದ್ದು, ಎಲ್ಲರೂ ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಯೂಟ್ಯೂಬ್​ನಲ್ಲಿ ಪುಷ್ಪ ಟೀಸರ್​ ದಾಖಲೆ ಬರೆದಿದೆ.

Allu Arjun: ಕೇವಲ 24 ಗಂಟೆಯಲ್ಲಿ ಬಾಹುಬಲಿ ದಾಖಲೆ ಮುರಿದ ಅಲ್ಲು ಅರ್ಜುನ್ ನಟನೆಯ ಪುಷ್ಪ​!
(ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​)

Updated on: Apr 11, 2021 | 9:21 AM

ನಟ ಅಲ್ಲು ಅರ್ಜುನ್​ ಅಭಿಮಾನಿಗಳು ‘ಪುಷ್ಪ’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರು ಸಂಪೂರ್ಣ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಪೋಸ್ಟರ್​ ಮತ್ತು ಟೀಸರ್​ನಿಂದ ಕೌತುಕ ಮೂಡಿದೆ. ‘ಪುಷ್ಪ’ ಮೇಲೆ ಅಲ್ಲು ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಈ ಹಿಂದೆ ಟಾಲಿವುಡ್​ನಲ್ಲಿ ಸೂಪರ್ ಹಿಟ್​ ಎನಿಸಿಕೊಂಡ ಬಾಹುಬಲಿ ಚಿತ್ರವನ್ನೂ ಪುಷ್ಪ ಮೀರಿಸಲಿದೆಯೇನೋ ಎಂಬ ಸೂಚನೆ ಸಿಗುತ್ತಿದೆ.

ಅಲ್ಲು ಅರ್ಜನ್​ ಜನ್ಮದಿನದ ಸಲುವಾಗಿ ಇತ್ತೀಚೆಗೆ ಪುಷ್ಪ ಚಿತ್ರದ ಟೀಸರ್​ ಬಿಡುಗಡೆ ಆಯಿತು. ಟ್ರಕ್​ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕಥಾನಾಯಕನ ಪಾತ್ರವನ್ನು ಪರಿಚಯಿಸುವ ಈ ಟೀಸರ್​ನಲ್ಲಿ ಸಾಹಸ ದೃಶ್ಯಗಳ ಝಲಕ್​ ಕೂಡ ಇದೆ. ಅದು ಫ್ಯಾನ್ಸ್​ಗೆ ತುಂಬ ಇಷ್ಟವಾಗಿದೆ. ಹಾಗಾಗಿ ಎಲ್ಲರೂ ಇದನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಯೂಟ್ಯೂಬ್​ನಲ್ಲಿ ಪುಷ್ಪ ಟೀಸರ್​ ದಾಖಲೆ ಬರೆದಿದೆ.

ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 25 ಮಿಲಿಯನ್​ (2.5 ಕೋಟಿ) ಬಾರಿ ವೀಕ್ಷಣೆ ಕಂಡಿದೆ. ಈ ಸಾಧನೆಯನ್ನು ತೆಲುಗು ಚಿತ್ರರಂಗದ ಬೇರೆ ಯಾವುದೇ ಸಿನಿಮಾಗಳೂ ಮಾಡಿಲ್ಲ. ಬಾಹುಬಲಿ, ರಾಧೆ ಶ್ಯಾಮ್​, ಆರ್​ಆರ್​ಆರ್​ ಟೀಸರ್​ಗಳನ್ನೂ ಮೀರಿಸಿ ಪುಷ್ಪ ಟೀಸರ್ ಯಶಸ್ಸು ಕಂಡಿದೆ. 7 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. ಸದ್ಯ ಈ ಟೀಸರ್​ 37 ಮಿಲಿಯನ್​ ವೀವ್ಸ್​​ ದಾಟಿ ಮುನ್ನುಗ್ಗುತ್ತಿದೆ.

YouTube video player(ಪುಷ್ಪ ಚಿತ್ರದ ಟೀಸರ್​)

ಚಿಕ್ಕದೊಂದು ಟೀಸರ್​ಗೆ ಜನರು ಈ ಪರಿ ಪ್ರೀತಿ ತೋರಿಸಿರುವುದಕ್ಕೆ ಅಲ್ಲು ಅರ್ಜುನ್​ ಖುಷಿ ಆಗಿದ್ದಾರೆ. ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅವರು ಟ್ವಿಟರ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.

ರಕ್ತ ಚಂದನದ ಕಳ್ಳಸಾಗಾಣಿಕೆಯ ಕಥೆಯನ್ನು ಹೊಂದಿರುವ ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸುಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅವರ ಸಿನಿಖಾತೆಗೆ ಮತ್ತೊಂದು ಬ್ಲಾಕ್​ ಬಸ್ಟರ್​ ಹಿಟ್​ ಸಿಗುವುದು ಖಚಿತ ಎನಿಸುತ್ತಿದೆ. ಆಗಸ್ಟ್​ 13ರಂದು ಪುಷ್ಪ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ: Pushpa Teaser: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪಾತ್ರ ನೋಡಿದ್ರೆ ನೀವೊಮ್ಮೆ ಬೆಚ್ಚಿ ಬೀಳ್ತೀರಾ!

( Allu Arjun starrer Pushpa teaser breaks the record of Baahubali and RRR on Youtube)

Published On - 9:19 am, Sun, 11 April 21

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us