ಲಂಡನ್ ವಸ್ತುಸಂಗ್ರಹಾಲಯದಲ್ಲಿ ಅಲ್ಲು ಅರ್ಜುನ್​ ಮೇಣದ ಪ್ರತಿಮೆ

|

Updated on: Sep 19, 2023 | 5:31 PM

Allu Arjun: ಇತ್ತೀಚೆಗಷ್ಟೆ ನಟ ಅಲ್ಲು ಅರ್ಜುನ್​ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ತೆಲುಗು ಚಿತ್ರರಂಗದಲ್ಲಿ ಈ ಸಾಧನೆ ಮಾಡಿದ ಪ್ರಥಮ ನಟ ಎನಿಸಿಕೊಂಡಿದ್ದಾರೆ ಅಲ್ಲು ಅರ್ಜುನ್. ಇದೀಗ ಅಲ್ಲು ಅವರ ಮೇಣದ ಪ್ರತಿಮೆ ಲಂಡನ್​ನ ಐತಿಹಾಸಿಕ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣಗೊಳ್ಳಲಿದೆ.

ಲಂಡನ್ ವಸ್ತುಸಂಗ್ರಹಾಲಯದಲ್ಲಿ ಅಲ್ಲು ಅರ್ಜುನ್​ ಮೇಣದ ಪ್ರತಿಮೆ
ಅಲ್ಲು ಅರ್ಜುನ್
Follow us on

ಅಲ್ಲು ಅರ್ಜುನ್ (Allu Arjun)​ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ‘ಅಲಾ ವೈಕುಂಟಪುರಂಲೋ’ ಸಿನಿಮಾ ಸೂಪರ್ ಹಿಟ್ ಆಯ್ತು, ಆ ಬಳಿಕ ಬಿಡುಗಡೆ ಆದ ‘ಪುಷ್ಪ‘ (Pushpa) ಸಿನಿಮಾ ಅಂತೂ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಹವಾ ಸೃಷ್ಟಿ ಮಾಡಿತು, ಅಲ್ಲು ಅರ್ಜುನ್ ಅನ್ನು ಪ್ಯಾನ್ ಇಂಡಿಯಾ ಹೀರೋ ಅನ್ನಾಗಿಸಿತು. ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಗೆದ್ದರು, ಇದೆಲ್ಲದರ ನಡುವೆ ಇದೀಗ ಅಲ್ಲು ಅರ್ಜುನ್​ರ ಮೇಣದ ಪ್ರತಿಮೆ ಲಂಡನ್​ನ ಪ್ರತಿಷ್ಠಿತ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣಗೊಳ್ಳಲಿದೆ.

ಬಾಲಿವುಡ್​ನ ಕೆಲವು ಸ್ಟಾರ್​ಗಳು, ಭಾರತದ ಕೆಲವು ರಾಜಕಾರಣಿಗಳ ಮೇಣದ ಪ್ರತಿಮೆ ನಿರ್ಮಾಣಗೊಂಡಿರುವ ಲಂಡನ್​ಲ್ಲಿರುವ ಜನಪ್ರಿಯ ವಸ್ತು ಸಂಗ್ರಹಾಲಯ ಮೇಡಮ್ ಟುಸ್ಸಾಡ್ಸ್​ನಲ್ಲಿ ಅಲ್ಲು ಅರ್ಜುನ್​ರ ಮೇಣದ ಪ್ರತಿಮೆ ನಿರ್ಮಾಣವಾಗಲಿದೆ. ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ಐಶ್ವರ್ಯಾ ರೈ ಇನ್ನೂ ಕೆಲವು ಬಾಲಿವುಡ್ ಸ್ಟಾರ್ ನಟರ ಮೇಣದ ಪ್ರತಿಮೆಗಳು ಮೇಡಮ್ ಟುಸ್ಸಾಡ್ಸ್​ನಲ್ಲಿ ಈಗಾಗಲೇ ನಿರ್ಮಾಣಗೊಂಡಿವೆ. ಇದೀಗ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಇದೇ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣವಾಗಲಿದೆ.

ಇದನ್ನೂ ಓದಿ:‘ಜವಾನ್​’ ಚಿತ್ರದ ವಿಮರ್ಶೆ ತಿಳಿಸಿದ ಅಲ್ಲು ಅರ್ಜುನ್​; ಪ್ರತಿಯೊಬ್ಬರಿಗೂ ಮೆಚ್ಚುಗೆ ಸೂಚಿಸಿದ ನಟ

ಮೇಡಮ್ ಟುಸ್ಸಾಡ್ಸ್​ ನಲ್ಲಿ ದಕ್ಷಿಣ ಭಾರತದ ಸ್ಟಾರ್ ನಟರ ಪ್ರತಿಮೆ ಇಲ್ಲವೆಂದೇನೂ ಇಲ್ಲ. ಈ ಹಿಂದೆ ‘ಬಾಹುಬಲಿ’ ನಟ ಪ್ರಭಾಸ್ ಹಾಗೂ ಮಹೇಶ್ ಬಾಬು ಅವರುಗಳ ಮೇಣದ ಪ್ರತಿಮೆಗಳು ಇದೇ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣಗೊಂಡಿವೆ. ಈ ವಸ್ತು ಸಂಗ್ರಾಹಲಯದಲ್ಲಿ ಮೇಣದ ಪ್ರತಿಮೆ ಹೊಂದುತ್ತಿರುವ ಮೂರನೇ ದಕ್ಷಿಣ ಭಾರತದ ನಟರಾಗಲಿದ್ದಾರೆ ಅಲ್ಲು ಅರ್ಜುನ್. ತೆಲುಗಿಗೆ ಮೊತ್ತ ಮೊದಲ ರಾಷ್ಟ್ರಪ್ರಶಸ್ತಿ ತಂದ ಶ್ರೇಯವನ್ನು ಇತ್ತೀಚೆಗಷ್ಟೆ ಪಡೆದುಕೊಂಡಿರುವ ಅಲ್ಲು ಅರ್ಜುನ್ ಮುಡಿಗೆ ಇದೀಗ ಮತ್ತೊಂದು ಗರಿಯೂ ಸೇರಿದಂತಾಗಿದೆ.

ಅಲ್ಲು ಅರ್ಜುನ್ ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ, ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. ಆ ಬಳಿಕ ಮತ್ತೆ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ. ಅದರ ಬಳಿಕ ‘ಅರ್ಜುನ್ ರೆಡ್ಡಿ’ ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ