AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತುಂಬಾ ಚೆನ್ನಾಗಿ ಮಾಡಿದಿರಾ’ ಟ್ವೀಟ್​​ನಲ್ಲಿ ಕನ್ನಡ ಬಳಸಿದ ಅಲ್ಲು ಅರ್ಜುನ್, ಕಾರಣ?

Allu Arjun tweet: ಕುಟುಂಬದೊಟ್ಟಿಗೆ ಜಪಾನ್ ಪ್ರವಾಸದಲ್ಲಿರುವ ನಟ ಅಲ್ಲು ಅರ್ಜುನ್ ಇತ್ತೀಚೆಗಷ್ಟೆ ವಾಪಸ್ಸಾಗಿದ್ದಾರೆ. ವಾಪಸ್ಸಾಗುತ್ತಿದ್ದಂತೆ ಮಾಡಿರುವ ಟ್ವೀಟ್​​ನಲ್ಲಿ ಕನ್ನಡ ವಾಕ್ಯವೊಂದನ್ನು ಬಳಸಿದ್ದಾರೆ. ‘ತುಂಬಾ ಚೆನ್ನಾಗಿ ಮಾಡಿದಿರಾ’ ಎಂಬ ವಾಕ್ಯವನ್ನು ಅಲ್ಲು ಅರ್ಜುನ್ ತಮ್ಮ ಟ್ವೀಟ್​​ನಲ್ಲಿ ಬಳಸಿದ್ದಾರೆ. ಅಷ್ಟಕ್ಕೂ ಅಲ್ಲು ಅರ್ಜುನ್ ಕನ್ನಡ ವಾಕ್ಯವನ್ನು ಬಳಸಿರುವುದು ಏಕೆ? ಇಲ್ಲಿದೆ ಮಾಹಿತಿ...

‘ತುಂಬಾ ಚೆನ್ನಾಗಿ ಮಾಡಿದಿರಾ’ ಟ್ವೀಟ್​​ನಲ್ಲಿ ಕನ್ನಡ ಬಳಸಿದ ಅಲ್ಲು ಅರ್ಜುನ್, ಕಾರಣ?
Allu Arjun
ಮಂಜುನಾಥ ಸಿ.
|

Updated on: Jan 21, 2026 | 8:45 PM

Share

ಅಲ್ಲು ಅರ್ಜುನ್ (Allu Arjun), ಪ್ಯಾನ್ ಇಂಡಿಯಾ ಸ್ಟಾರ್ ನಟ. ಇದೀಗ ಅವರು ಅಟ್ಲಿ ನಿರ್ದೇಶನದ ಹಾಲಿವುಡ್ ಲೆವೆಲ್​​ನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್​​ಗೂ ಕರ್ನಾಟಕಕ್ಕೂ ಬಹಳ ಆಪ್ತ ಬಂಧವೇನಿಲ್ಲ. ಪುನೀತ್ ರಾಜ್​​ಕುಮಾರ್ ಅವರೊಟ್ಟಿಗೆ ಒಳ್ಳೆಯ ಗೆಳೆತನ ಹೊಂದಿದ್ದ ಅಲ್ಲು ಅರ್ಜುನ್ ಕರ್ನಾಟಕಕ್ಕೆ ಬರುವುದು ತೀರ ಅಪರೂಪಕ್ಕೆ. ಇದೀಗ ಅಲ್ಲು ಅರ್ಜುನ್ ಅವರ ಅಚಾನಕ್ಕಾಗಿ ತಮ್ಮ ಟ್ವೀಟ್​​ನಲ್ಲಿ ಕನ್ನಡ ಭಾಷೆ ಬಳಸಿದ್ದಾರೆ. ಅಲ್ಲು ಅರ್ಜುನ್ ಟ್ವೀಟ್​​ನಲ್ಲಿ ಕನ್ನಡ ಬಳಸಲು ವಿಶೇಷ ಕಾರಣವೂ ಇದೆ.

ಅಲ್ಲು ಅರ್ಜುನ್ ಅವರು ಚಿತ್ರೀಕರಣದಿಂದ ಬಿಡುವು ಪಡೆದು ಕುಟುಂಬದೊಟ್ಟಿಗೆ ಜಪಾನ್ ಪ್ರವಾಸ ಮಾಡಿ ಬಂದಿದ್ದಾರೆ. ಜಪಾನ್ ಪ್ರವಾಸದಿಂದ ಬಂದ ಕೂಡಲೇ ತಮ್ಮ ಮಾವ, ನೆಚ್ಚಿನ ನಟರೂ ಆಗಿರುವ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ ಅಲ್ಲು ಅರ್ಜುನ್. ಸಿನಿಮಾ ಬಗ್ಗೆ ಟ್ವೀಟ್​ ಮಾಡಿರುವ ಸ್ಟೈಲಿಷ್ ಸ್ಟಾರ್ ತಮ್ಮ ಟ್ವೀಟ್​​ನಲ್ಲಿ ಕನ್ನಡ ವಾಕ್ಯವೊಂದನ್ನು ಬಳಸಿದ್ದಾರೆ.

ಇದನ್ನೂ ಓದಿ:ಜಪಾನ್​​ನಲ್ಲಿ ಅಭಿಮಾನಿಗಳ ಪ್ರೀತಿಗೆ ಮನಸೋತ ಅಲ್ಲು ಅರ್ಜುನ್

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಅನ್ನು ಹೊಗಳುತ್ತಾ ಅಲ್ಲು ಅರ್ಜುನ್ ಮಾಡಿರುವ ಟ್ವೀಟ್​​ನಲ್ಲಿ, ‘ತುಂಬಾ ಚೆನ್ನಾಗಿ ಮಾಡಿದಿರಾ’ ಎಂಬ ವಾಕ್ಯವನ್ನು ಅಲ್ಲು ಅರ್ಜುನ್ ಬಳಸಿದ್ದಾರೆ. ಅದೂ ಮೆಗಾಸ್ಟಾರ್ ವಿರಂಜೀವಿ ಅವರನ್ನು ಹೊಗಳಲು ಅಲ್ಲ, ಬದಲಿಗೆ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ವೆಂಕಟೇಶ್ ಅವರನ್ನು ಹೊಗಳಲು. ಏಕೆಂದರೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾನಲ್ಲಿ ವೆಂಕಟೇಶ್ ಅವರು ಕನ್ನಡಿಗನ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಹೆಸರು ದಾವಣಗೆರೆಯ ವೆಂಕಿ ಗೌಡ. ಸಿನಿಮಾನಲ್ಲಿ ವೆಂಕಟೇಶ್ ಅವರ ಆರಂಭದ ಕೆಲವು ಸಂಭಾಷಣೆಗಳು ಕನ್ನಡದಲ್ಲೇ ಇವೆ. ಚಿರಂಜೀವಿ ಸಹ ವೆಂಕಿ ಅವರೊಟ್ಟಿಗೆ ಕನ್ನಡದಲ್ಲಿ ಮಾತನಾಡುವ ದೃಶ್ಯಗಳು ಇವೆ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಅವರು ವೆಂಕಟೇಶ್ ಅವರ ಪಾತ್ರವನ್ನು ಹೊಗಳುತ್ತಾ ಕನ್ನಡದ ವಾಕ್ಯ ಬಳಸಿದ್ದಾರೆ.

‘ಬಾಸ್ ಈಸ್ ಬ್ಯಾಕ್’ ಎಂದಿರುವ ಅಲ್ಲು ಅರ್ಜುನ್, ‘ಮೆಗಾಸ್ಟಾರ್ ಚಿರಂಜೀವಿ ಅವರು ಪರದೆಯ ಮೇಲೆ ಮಿಂಚಿದ್ದನ್ನು ನೋಡಲು ಖುಷಿ ಆಗುತ್ತದೆ. ಸಿನಿಮಾನಲ್ಲಿ ಸಖತ್ ಹುಕ್ ಸ್ಟೆಪ್ಪುಗಳು, ಆಕ್ಷನ್, ಕಾಮಿಡಿ ಎಲ್ಲವೂ ಅದ್ಭುತವಾಗಿದೆ. ನಯನತಾರಾ ಹಾಗೂ ಕ್ಯಾತರಿನ್ ಅವರು ಒಳ್ಳೆಯ ಗ್ಲಾಮರ್ ತಂದಿದ್ದಾರೆ. ಅನಿಲ್ ರವಿಪುಡಿ, ಸಂಕ್ರಾಂತಿ ಬ್ಲಾಕ್ ಬಸ್ಟರ್ ಮಷೀನ್ ಎನಿಸಿಕೊಂಡಿದ್ದಾರೆ, ಒಟ್ಟಾರೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಸಂಕ್ರಾಂತಿಯ ‘ಬಾಸ್ ಬಸ್ಟರ್’ ಆಗಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ