
ಅಲ್ಲು ಅರ್ಜುನ್ ಅವರ ನಟನೆಯ ‘ಪುಷ್ಪ 2’ ಚಿತ್ರವು ವಿಶ್ವಾದ್ಯಂತ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅಲ್ಲು ಅರ್ಜುನ್ ಅವರು ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡೋದು ಕಡಿಮೆ. ಇದಕ್ಕೆ ಕಾರಣ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿ ತೊಂದರೆಗಳು ಉಂಟಾಗುತ್ತವೆ ಎಂಬ ಕಾರಣಕ್ಕೆ. ಈಗ ‘ಪುಷ್ಪ 2’ ಚಿತ್ರಕ್ಕೆ ಭರ್ಜರಿ ಹೈಪ್ ಇರೋ ಕಾರಣಕ್ಕೆ ಅವರು ಈ ಚಿತ್ರವನ್ನು ಅಭಿಮಾನಿಗಳ ಜೊತೆಯೇ ವೀಕ್ಷಣೆ ಮಾಡಿದ್ದಾರೆ. ಇದು ಫ್ಯಾನ್ಸ್ಗೆ ಖುಷಿ ನೀಡಿದೆ.
ಹೈದರಾಬಾದ್ನಲ್ಲಿರೋ ‘ಸಂಧ್ಯಾ 70 ಎಂಎಂ’ ಥಿಯೇಟರ್ ಸಾಕಷ್ಟು ವರ್ಷಗಳ ಇತಿಹಾಸ ಹೊಂದಿದೆ. ಈ ಥಿಯೇಟರ್ 1980ರಲ್ಲಿ ನಿರ್ಮಾಣ ಆಯಿತು. ಹಿಂದಿಯ ‘ಶಾಲಿಮಾರ್’ ಇಲ್ಲಿ ಪ್ರಸಾರ ಕಂಡ ಮೊದಲ ಸಿನಿಮಾ. ಈ ಥಿಯೇಟರ್ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ಪ್ರಸಾರ ಕಂಡಿವೆ. ಈಗ ಹೈದರಾಬಾದ್ನಲ್ಲಿರೋ ಈ ಥಿಯೇಟರ್ನಲ್ಲಿ ಅಲ್ಲು ಅರ್ಜುನ್ ಅವರು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಡಿಸೆಂಬರ್ 4ರಂದು ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾನ ‘ಸಂಧ್ಯಾ 70 ಎಂಎಂ’ ಥಿಯೇಟರ್ನಲ್ಲಿ ವೀಕ್ಷಣೆ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಅವರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮುತ್ತಿಕೊಂಡರು. ಎಲ್ಲಕಿಂತ ಮುಖ್ಯವಾಗಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಮಾಡಿದರು.
ಇದನ್ನೂ ಓದಿ: Pushpa 2 Twitter Review: ‘ಪಾರ್ಟಿ ಇದೆ ಪುಷ್ಪ’; ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ನೋಡಿ ಪ್ರತಿಕ್ರಿಯಿಸಿದ ಫ್ಯಾನ್ಸ್
ಅಲ್ಲು ಅರ್ಜುನ್ ಅವರು ಪುಷ್ಪರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಈ ಚಿತ್ರವನ್ನು ನೋಡಿ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ಫಹಾದ್ ಫಾಸಿಲ್, ತಾರಕ್ ಪೊನ್ನಪ್ಪ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದೆ. ಈ ಚಿತ್ರ ಮೊದಲ ದಿನ 12 ಸಾವಿರಕ್ಕೂ ಅಧಿಕ ಶೋಗಳನ್ನು ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:26 am, Thu, 5 December 24