ಅಲ್ಲು ಅರ್ಜುನ್ ಚಿತ್ರಕ್ಕೆ ಬಾಲಿವುಡ್​ನಿಂದ ಬರ್ತಿದ್ದಾರೆ ಮೂವರು ಬೆಡಗಿಯರು

ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದು, ಪ್ರಿಯಾಂಕಾ ಚೋಪ್ರಾ, ಜಾನ್ವಿ ಕಪೂರ್, ಮತ್ತು ದಿಶಾ ಪಟಾಣಿ ಅವರು ನಾಯಕಿಯರಾಗಿ ಅಭಿನಯಿಸುವ ಸಾಧ್ಯತೆ ಇದೆ. ಅಲ್ಲು ಅರ್ಜುನ್ ತ್ರಿವಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2026ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಅಲ್ಲು ಅರ್ಜುನ್ ಚಿತ್ರಕ್ಕೆ ಬಾಲಿವುಡ್​ನಿಂದ ಬರ್ತಿದ್ದಾರೆ ಮೂವರು ಬೆಡಗಿಯರು
ಅಲ್ಲು ಅರ್ಜುನ್
Edited By:

Updated on: Apr 16, 2025 | 10:58 AM

ಅಲ್ಲು ಅರ್ಜುನ್ ಅವರು ‘ಪುಷ್ಪ 2’ (Pushpa 2) ಯಶಸ್ಸಿನ ಬಳಿಕ ತಮ್ಮ ಮುಂದಿನ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ವಿಶೇಷ. ಅಟ್ಲಿ ಅವರು ‘ಜವಾನ್’ ಬಳಿಕ ಮಾಡುತ್ತಿರುವ ಸಿನಿಮಾ ಇದು. ಅಲ್ಲು ಅರ್ಜುನ್ ‘ಪುಷ್ಪ 2’ ಬಳಿಕ ಒಪ್ಪಿಕೊಂಡ ಸಿನಿಮಾ ಇದು. ಈಗ ಈ ಚಿತ್ರಕ್ಕೆ ಇಬ್ಬರು ಬಾಲಿವುಡ್ ಹೀರೋಯಿನ್​ಗಳು ಬರುತ್ತಿದ್ದಾರೆ ಎಂಬ ಬಗ್ಗೆ ವರದಿ ಆಗಿದೆ.

ಯಾರೇ ಹೀರೋ ಸಿನಿಮಾ ಘೋಷಣೆ ಮಾಡಿದರೂ ಅದರಲ್ಲಿ ನಾಯಕಿ ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡುತ್ತದೆ. ಅಲ್ಲು ಅರ್ಜುನ್ ಚಿತ್ರಕ್ಕೂ ಯಾರು ನಾಯಕಿ ಆಗುತ್ತಾರೆ ಎಂಬ ಬಗ್ಗೆ ಪ್ರಶ್ನೆ ಮೂಡಿದೆ. ಅವರು ತಮ್ಮ ಕೊನೆಯ ಸಿನಿಮಾದಲ್ಲಿ ರಶ್ಮಿಕಾ ಜೊತೆ ನಟಿಸಿದ್ದರು. ಹೀಗಾಗಿ, ಈ ಬಾರಿ ಮತ್ತೆ ಅವರಿಗೆ ನಿರ್ಮಾಪಕರು ಮಣೆ ಹಾಕುತ್ತಿಲ್ಲ.

ಕೆಲವು ವರದಿಗಳ ಪ್ರಕಾರ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಂದರೆ, ಈ ಚಿತ್ರದಲ್ಲಿ ಅವರದ್ದು ತ್ರಿಬಲ್ ರೋಲ್ ಎಂದಾಯಿತು. ಈ ರೀತಿ ಅವರು ಮಾಡುತ್ತಿರುವುದು ಇದೇ ಮೊದಲು. ಈಗ ಈ ಚಿತ್ರಕ್ಕೆ ಮೂವರು ನಾಯಕಿಯರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ
ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು
‘ಕೊನೆ ಉಸಿರಿನವರೆಗೂ ಐಶ್ವರ್ಯಾ ಪರವಾಗಿ ಹೋರಾಡುತ್ತೇನೆ’; ಅಮಿತಾಭ್
ರಶ್ಮಿಕಾ ಸಸ್ಯಾಹಾರಿಯೋ, ಮಾಂಸಹಾರಿಯೋ? ಈ ತರಕಾರಿ ಕಂಡರೆ ಆಗುವುದೇ ಇಲ್ಲ
ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; 5 ಕೋಟಿಗೆ ಡಿಮ್ಯಾಂಡ್

ಪ್ರಿಯಾಂಕಾ ಚೋಪ್ರಾ ಅವರು ಈ ಚಿತ್ರಕ್ಕೆ ನಾಯಕಿ ಎಂದು ಈ ಮೊದಲು ಘೋಷಣೆ ಆಗಿತ್ತು. ಅದೇ ರೀತಿ ಈಗ ಜಾನ್ವಿ ಕಪೂರ್, ದಿಶಾ ಪಟಾಣಿ ಕೂಡ ಚಿತ್ರದ ಭಾಗವಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಟ್ಲಿ ಅವರು ಹಲವು ಸ್ಟಾರ್ ಹೀರೋಯಿನ್​ಗಳ ಜೊತೆ ಕೆಲಸ ಮಾಡಿದ್ದಾರೆ. ಅವರ ಜೊತೆ ನಟಿಸಬೇಕು ಎಂದರೆ ಹೀರೋಯಿನ್​ಗಳು ಹಿಂದೇಟು ಹಾಕುವುದಿಲ್ಲ. ಅವರು ಯೋಚಿಸದೇ ಒಪ್ಪಿಕೊಳ್ಳುತ್ತಾರೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ರೇಂಜ್ ಬದಲು, ಮುಂದಿನ ಸಿನಿಮಾ ಸಂಭಾವನೆ ಎಷ್ಟು ಗೊತ್ತೆ?

ಅಲ್ಲು ಅರ್ಜುನ್ ಬರ್ತ್​ಡೇ ಪ್ರಯುಕ್ತ ಈ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಈ ಚಿತ್ರ 2026ರ ವೇಳೆಗೆ ತೆರೆಗೆ ಬರೋ ಸಾಧ್ಯತೆ ಇದೆ. ಶೀಘ್ರವೇ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us