Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್-ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಬಗ್ಗೆ ಸಿಕ್ತು ದೊಡ್ಡ ಅಪ್​ಡೇಟ್​

ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಂ ಶ್ರೀನಿವಾಸ್ ಅವರ ಮುಂಬರುವ ಚಿತ್ರ ‘AA22’ಪೌರಾಣಿಕ ಕಥಾವಸ್ತುವನ್ನು ಹೊಂದಿದೆ. ತ್ರಿವಿಕ್ರಂ ಅವರು ಪ್ರಮುಖ ಪಾತ್ರಗಳಿಗಾಗಿ ತೆಲುಗು ಮತ್ತು ಇತರ ಭಾಷೆಯ ಕಲಾವಿದರನ್ನು ಸಂಪರ್ಕಿಸುತ್ತಿದ್ದಾರೆ. ಈ ಜೋಡಿಯ ಹಿಂದಿನ ಯಶಸ್ಸುಗಳನ್ನು ಗಮನಿಸಿದರೆ, ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ.

ಅಲ್ಲು ಅರ್ಜುನ್-ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಬಗ್ಗೆ ಸಿಕ್ತು ದೊಡ್ಡ ಅಪ್​ಡೇಟ್​
ತ್ರಿವಿಕ್ರಂ-ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on:Feb 24, 2025 | 6:59 AM

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಬಳಿಕ ಸೈಲೆಂಟ್ ಆಗಿದ್ದಾರೆ. ಈ ಚಿತ್ರದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಅವರ ಬಾಳಲ್ಲಿ ಕಪ್ಪು ಚುಕ್ಕೆ ಆಗಿದೆ. ಈ ಘಟನೆಯಿಂದ ಅವರು ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಕೂಡ ಬಂತು. ಈಗ ಅಲ್ಲು ಅರ್ಜುನ್ ಅವರು ಈ ಘಟನೆ ಮರೆತು ಮುಂದಿನ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್ ಒಂದು ಹೊರ ಬಿದ್ದಿದೆ.

ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಮಾಡೋದು ಗೊತ್ತೇ ಇದೆ. ಇದಕ್ಕೆ ತಾತ್ಕಾಲಿಕವಾಗಿ ‘AA22’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಹೀಗಾಗಿ, ಈ ಕಾಂಬಿನೇಷನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರದ ಕಡೆಯಿಂದ ಯಾವುದೇ ಅಪ್​ಡೇಟ್ ಬಂದಿರಲಿಲ್ಲ. ಈಗ ನಿರ್ದೇಶಕರು ಸಿನಿಮಾದ ಪ್ರಮುಖ ಕೆಲಸ ಒಂದನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.

ತ್ರಿವಿಕ್ರಂ ಶ್ರೀನಿವಾಸ್ ಅವರು ಈ ಚಿತ್ರದ ಪಾತ್ರವರ್ಗ ಆಯ್ಕೆಯಲ್ಲಿ ತೊಡಗಿದ್ದಾರೆ. ಹೌದು, ತ್ರಿವಿಕ್ರಂ ಅವರು ಬೇರೆ ಭಾಷೆಯ ಹಾಗೂ ತೆಲುಗು ಭಾಷೆಯ ಕೆಲವು ಕಲಾವಿದರನ್ನು ಭೇಟಿ ಮಾಡಿ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಈ ಪೈಕಿ ಕೆಲವರು ಸಿನಿಮಾಗೆ ಒಪ್ಪಿಗೆ ಸೂಚಿಸಿದ್ದಾರೆ.

ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಪೌರಾಣಿಕ ಕಥಾ ಹಂದರವನ್ನು ಹೊಂದಿದೆ. ತ್ರಿವಿಕ್ರಂ ಶ್ರೀನಿವಾಸ್ ಅವರು ದೊಡ್ಡ ಕಲಾವಿದರನ್ನು ಆಯ್ಕೆ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ಈ ಬಾರಿಯೂ ಅದೇ ಟ್ರೆಂಡ್​ನ ಫಾಲೋ ಮಾಡೋ ಸಾಧ್ಯತೆ ಇದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಬಳಿಕ ರಾಮ್ ಚರಣ್​ ಜೊತೆ ನಟಿಸಲಿರುವ ರಶ್ಮಿಕಾ ಮಂದಣ್ಣ

ತ್ರಿವಿಕ್ರಂ ಶ್ರೀನಿವಾಸ್ ಅವರು ಇತ್ತೀಚೆಗೆ ಲಯ ಕಳೆದುಕೊಂಡಿದ್ದಾರೆ. ಅವರ ನಿರ್ದೇಶನದ ‘ಗುಂಟೂರು ಖಾರಂ’ ಗೆಲುವು ಕಂಡಿಲ್ಲ. ಜುಲಾಯಿ, ಸನ್ ಆಫ್ ಸತ್ಯಮೂರ್ತಿ, ಅಲಾ ವೈಕುಂಠಪುರಮುಲೋ ಸಿನಿಮಾಗಳಲ್ಲಿ ತ್ರಿವಿಕ್ರಂ ಹಾಗೂ ಅಲ್ಲು ಅರ್ಜುನ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ ಎಂದಾಗ ನಿರೀಕ್ಷೆ ಬೆಳೆಯೋದು ಸಹಜ. ಆ ನಿರೀಕ್ಷೆಯನ್ನು ಸಿನಿಮಾ ತಲುಪುತ್ತದೆಯೇ ಎಂಬುದನ್ನು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Mon, 24 February 25