AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ಸಾಲಿ ಸಿನಿಮಾಗೆ ಫಿದಾ; ಸಂಭಾವನೆ ಪಡೆಯದೆ ನಟಿಸಿದ್ದ ಅಮಿತಾಭ್ ಬಚ್ಚನ್

ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಜನ್ಮದಿನದ ಸಂಭ್ರಮ. ಅವರ ನಿರ್ದೇಶನದ 'ಬ್ಲ್ಯಾಕ್' ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಯಾವುದೇ ಸಂಭಾವನೆ ಪಡೆದಿರಲಿಲ್ಲ. 20 ಕೋಟಿ ಬಜೆಟ್‌ನ ಈ ಚಿತ್ರವು 66 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಅಮಿತಾಭ್ ಅವರು ಬನ್ಸಾಲಿ ಅವರ ಕೆಲಸವನ್ನು ಮೆಚ್ಚಿ ಈ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿದುಬಂದಿದೆ.

ಬನ್ಸಾಲಿ ಸಿನಿಮಾಗೆ ಫಿದಾ; ಸಂಭಾವನೆ ಪಡೆಯದೆ ನಟಿಸಿದ್ದ ಅಮಿತಾಭ್ ಬಚ್ಚನ್
ಬನ್ಸಾಲಿ-ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 24, 2025 | 7:45 AM

Share

ಇಂದು (ಫೆಬ್ರವರಿ 24) ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ. ಅವರ ಬಗ್ಗೆ ಹಲವು ವಿಚಾರಗಳು ರಿವೀಲ್ ಆಗುತ್ತಾ ಇರುತ್ತವೆ. ಒಮ್ಮೆ ಅವರ ಸಿನಿಮಾ ಮೇಕಿಂಗ್ ನೋಡಿ ಸ್ವತಃ ಅಮಿತಾಭ್ ಬಚ್ಚನ್ ಅವರು ಫಿದಾ ಆಗಿದ್ದರು. ಈ ಕಾರಣಕ್ಕೆ ಉಚಿತವಾಗಿ ಸಿನಿಮಾದಲ್ಲಿ ನಟಿಸಿದ್ದರು ಅನ್ನೋ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

‘ಬ್ಲ್ಯಾಕ್’ ಸಿನಿಮಾ 2005ರಲ್ಲಿ ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾಗೆ ಸಂಜಯ್ ಲೀಲಾ ಬನ್ಸಾಲಿ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದು ಬಾಲಿವುಡ್​ನ ದೊಡ್ಡ ಹಿಟ್​​ಗಳಲ್ಲಿ ಒಂದು. ಈ ಚಿತ್ರದಲ್ಲಿ ನಟಿಸಲು ಅಮಿತಾಭ್ ಯಾವುದೇ ಚಾರ್ಜ್ ಮಾಡಿರಲಿಲ್ಲ.

‘ನನಗೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಬೇಕಿತ್ತು. ಅವರ ಇತರ ಸಿನಿಮಾಗಳನ್ನು ನೋಡಿ ಈ ನಿರ್ಧಾರ ಮಾಡಿದ್ದೆ. ನನಗೆ ಅವಕಾಶ ಸಿಕ್ಕಾಗ ಖುಷಿ ಆಯಿತು. ನಾನು ಈ ಚಿತ್ರಕ್ಕಾಗಿ ಯಾವುದೇ ಹಣವನ್ನು ಕೇಳಿಲ್ಲ’ ಎಂದು ಅಮಿತಾಭ್ ಬಚ್ಚನ್ ರಿವೀಲ್ ಮಾಡಿದ್ದರು.

‘ಬ್ಲ್ಯಾಕ್’ ಸಿನಿಮಾದ ಬಜೆಟ್ 20 ಕೋಟಿ ರೂಪಾಯಿ ಆಗಿತ್ತು. ಈ ಸಿನಿಮಾ ಆಗಿನ ಕಾಲದಲ್ಲೇ 66 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಚಿತ್ರ ಅಮೆರಿಕದ ಕಾರ್ಯಕರ್ತೆ ಹೆಲೆನ್ ಕೆಲರ್ ಅವರ ಜೀವನ ಆಧರಿಸಿ ನಿರ್ಮಾಣ ಆಗಿತ್ತು.

ಇದನ್ನೂ ಓದಿ: ‘ಹೀರಾಮಂಡಿ’ ವಿಚಾರದಲ್ಲಿ ಸುಳ್ಳು ಹೇಳಿದ್ರಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ

ಸಂಜಯ್ ಲೀಲಾ ಬನ್ಸಾಲಿ ಅವರು ಬಾಲಿವುಡ್​​ನ ಮಿಸ್ಟರ್ ಪರ್ಫೆಕ್ಟ್ ಎನಿಸಿಕೊಂಡಿದ್ದಾರೆ. ಹಲವು ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ‘ಹೀರಾಮಂಡಿ’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದಾರೆ. ಈಗ ಅವರು ರಣಬೀರ್ ಕಪೂರ್ ಜೊತೆ ‘ಲವ್ ಆ್ಯಂಡ್ ವಾರ್’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್  ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More