200 ಕೋಟಿ ರೂಪಾಯಿಗೆ ಮಾರಾಟ ಆಯ್ತು ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್​

ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರೇಕ್ಷಕರ ಸಂಖ್ಯೆ ದೊಡ್ಡದಿದೆ. ದಕ್ಷಿಣ ಭಾರತದಿಂದ ಹಿಂದಿಗೆ ಡಬ್​ ಆಗುವ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಆ ರಾಜ್ಯಗಳಲ್ಲಿ ಸಖತ್​ ಕಲೆಕ್ಷನ್​ ಆಗುತ್ತದೆ. ಆದ್ದರಿಂದ ‘ಪುಷ್ಪ 2’ ಚಿತ್ರದ ಹಿಂದಿ ವರ್ಷನ್​ಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ವರದಿಗಳ ಪ್ರಕಾರ, ‘ಪುಷ್ಪ 2’ ಚಿತ್ರದ ಹಿಂದಿ ವರ್ಷನ್​ ವಿತರಣೆ ಮಾಡಲು ಅನಿಲ್​ ತಡಾನಿ ಸಜ್ಜಾಗಿದ್ದಾರೆ. 200 ಕೋಟಿ ರೂಪಾಯಿ ನೀಡಿ ಅವರು ವಿತರಣೆ ಹಕ್ಕುಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

200 ಕೋಟಿ ರೂಪಾಯಿಗೆ ಮಾರಾಟ ಆಯ್ತು ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್​
ಅಲ್ಲು ಅರ್ಜುನ್​

Updated on: Apr 19, 2024 | 6:25 PM

ಟಾಲಿವುಡ್​ ನಟ ಅಲ್ಲು ಅರ್ಜುನ್​ (Allu Arjun) ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಈಗ ಎಲ್ಲರ ಗಮನ ‘ಪುಷ್ಪ 2’ ಸಿನಿಮಾದ ಮೇಲಿದೆ. ಆಗಸ್ಟ್​ 15ರಂದು ಈ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ಆಗಲಿದೆ. ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾ ಬಗ್ಗೆ ಹಲವು ಬಗೆಯ ಸುದ್ದಿ ಕೇಳಿಬರುತ್ತಿವೆ. ‘ಪುಷ್ಪ 2’ (Pushpa 2) ಸಿನಿಮಾದ ಹಿಂದಿ ವರ್ಷನ್​ನ ವಿತರಣೆ ಹಕ್ಕುಗಳು 200 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್​ ಅವರ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ಸುಕುಮಾರ್​ ಅವರ ನಿರ್ದೇಶನದಲ್ಲಿ ‘ಪುಷ್ಪ 2’ ಸಿನಿಮಾ ಮೂಡಿಬರುತ್ತಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಇದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಸಿನಿಮಾ. ತೆಲುಗಿನ ಜೊತೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಮುಂತಾದ ಭಾಷೆಗಳಿಗೆ ಡಬ್​ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು.

ಉತ್ತರ ಭಾರತದಲ್ಲಿ ಹಿಂದಿ ಪ್ರೇಕ್ಷಕರ ಸಂಖ್ಯೆ ದೊಡ್ಡದಿದೆ. ದಕ್ಷಿಣದಿಂದ ಹಿಂದಿಗೆ ಡಬ್​ ಆದ ಸಿನಿಮಾಗಳಿಗೆ ಉತ್ತರ ಭಾರತವೇ ದೊಡ್ಡ ಮಾರುಕಟ್ಟೆ. ಅಲ್ಲಿ ಭರ್ಜರಿ ಕಲೆಕ್ಷನ್​ ಆಗುತ್ತದೆ. ಹಾಗಾಗಿ ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್​ಗೆ ಭಾರಿ ಬೇಡಿಕೆ ಬಂದಿದೆ. ವರದಿಗಳ ಪ್ರಕಾರ, ಅನಿಲ್​ ತಡಾನಿ ಅವರು ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್​ ವಿತರಣೆ ಮಾಡಲು ಮುಂದಾಗಿದ್ದು, ಇದಕ್ಕಾಗಿ ಅವರು 200 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಸುದ್ದಿ ಆಗಿದೆ.

ಇದನ್ನೂ ಓದಿ: 51 ಟೇಕ್​ ತೆಗೆದುಕೊಂಡ ಅಲ್ಲು ಅರ್ಜುನ್​; ‘ಪುಷ್ಪ 2’ ಟೀಸರ್​ ಹಿಂದಿದೆ ಅಚ್ಚರಿ ವಿಷಯ

ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ನೋಡಿ ಅಲ್ಲು ಅರ್ಜುನ್​ ಅವರ ಅಭಿಮಾನಿಗಳು ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಹಾಡುಗಳ ಬಿಡುಗಡೆ ಬಾಕಿ ಇದೆ. ಆಡಿಯೋ ರಿಲೀಸ್​ ಆದ ಬಳಿಕ ಕ್ರೇಜ್​ ಇನ್ನಷ್ಟು ಹೆಚ್ಚಾಗಲಿದೆ. ‘ಪುಷ್ಪ 2’ ಸಿನಿಮಾದ ಆಡಿಯೋ ಹಕ್ಕುಗಳು (ಎಲ್ಲ ಭಾಷೆ ಸೇರಿ) 60 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಅಷ್ಟರಲ್ಲಾಗಲೇ ಈ ಪರಿ ಸುದ್ದಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us