20 ವರ್ಷಗಳ ಹಿಂದೆ ನಟಿ ಮಾಡಿದ ಕುಹಕದ ಮಾತಿನಿಂದ ಸಿಕ್ಸ್ ಪ್ಯಾಕ್​ ಮಾಡಿದ್ದ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು 20 ವರ್ಷಗಳ ಹಿಂದೆ ನಟಿಯೊಬ್ಬರ ಕುಹಕದ ಮಾತಿನಿಂದ ಪ್ರೇರಣೆ ಪಡೆದು ಸಿಕ್ಸ್ ಪ್ಯಾಕ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ದಕ್ಷಿಣ ಭಾರತದ ನಟರಲ್ಲಿ ಮೊದಲು ಸಿಕ್ಸ್ ಪ್ಯಾಕ್ ತೋರಿಸಿದವರು ತಾವೇ ಎಂದು ಅವರು ಹೇಳಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಅವರು ಇತ್ತೀಚೆಗೆ ವರ್ಲ್ಡ್ ಆಡಿಯೋ ವಿಶ್ಯುವಲ್ ಎಂಟರ್ಟೈನ್ಮೆಂಟ್ ಸಮ್ಮೇಳನದಲ್ಲಿ ಮಾತನಾಡಿದ್ದಾರೆ.

20 ವರ್ಷಗಳ ಹಿಂದೆ ನಟಿ ಮಾಡಿದ ಕುಹಕದ ಮಾತಿನಿಂದ ಸಿಕ್ಸ್ ಪ್ಯಾಕ್​ ಮಾಡಿದ್ದ ಅಲ್ಲು ಅರ್ಜುನ್
ಅಲ್ಲು ಅರ್ಜುನ್

Updated on: May 03, 2025 | 3:53 PM

ನಟ ಅಲ್ಲು ಅರ್ಜುನ್ (Allu Arjun) ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವರ್ಕೌಟ್ ವಿಚಾರಕ್ಕೆ ಬಂದರೆ ಅವರು ಎಂದಿಗೂ ಜಿಮ್​ನ ಮಿಸ್ ಮಾಡುವುದೇ ಇಲ್ಲ. ಈಗ ಅಲ್ಲು ಅರ್ಜುನ್ ಅವರು ‘ವರ್ಲ್ಡ್ ಆಡಿಯೋ ವಿಶ್ಯುವಲ್ ಎಂಟರ್​ಟೇನ್​ಮೆಂಟ್ ಸಮಿತ್’ನ (ವೇವ್ಸ್​) ಭಾಗವಾದರು. ಈ ವೇಳೆ ಅವರು ತಾವು ಸಿಕ್ಸ್ ಪ್ಯಾಕ್ ಮಾಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

2 ದಶಕಗಳ ಹಿಂದೆ ಬಾಲಿವುಡ್​ನಲ್ಲಿ ಸಿಕ್ಸ್ ಪ್ಯಾಕ್ ಮಾಡಿ ಮಿಂಚೋ ಟ್ರೆಂಡ್ ಇತ್ತು. ಅನೇಕ ಹೀರೋಗಳು ಶರ್ಟ್​ಲೆಸ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ದಕ್ಷಿಣದವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಈ ಟ್ರೆಂಡ್​ನ ದಕ್ಷಿಣದಲ್ಲಿ ಫಾಲೋ ಮಾಡಿದ ಮೊದಲಿಗರು ತಾವು ಎಂದು ಅಲ್ಲು ಅರ್ಜುನ್ ಹೇಳಿಕೊಂಡಿದ್ದಾರೆ.

‘20 ವರ್ಷಗಳ ಹಿಂದೆ ಬೇರೆ ಯಾರೊಬ್ಬರೂ ಮಾಡಿರದೇ ಇದ್ದಿದ್ದನ್ನು ನಾನು ಮಾಡಿದ್ದೆ.  ದಕ್ಷಿಣದ ಯಾವುದೇ ನಟರು ಸಿಕ್ಸ್ ಪ್ಯಾಕ್​ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಟಿಯೊಬ್ಬರು ಹೇಳಿದ್ದರು. ಇದನ್ನು ನಾನು ಮೋಟಿವ್ ಆಗಿ ತೆಗೆದುಕೊಂಡೆ. ಸಿಕ್ಸ್ ಪ್ಯಾಕ್ ಮಾಡಿದೆ. ನಾನು ಅದನ್ನು ಮಾಡಿದ್ದು ಜನರಿಗಾಗಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
ಬುಡಕಟ್ಟು ಜನಾಂಗದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳಿದ ವಿಜಯ್
‘ಕೆಜಿಎಫ್ 2’ ರಿಲೀಸ್ ಆಗಿ 3 ವರ್ಷವಾದರೂ ನಿಂತಿಲ್ಲ ಟಾಕ್
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?

ಅಚ್ಚರಿಯ ಸಂಗತಿ ಎಂದರೆ ಈ ರೀತಿ ಹೇಳಿಕೆ ಕೊಟ್ಟಿದ್ದು ಅಲ್ಲು ಅರ್ಜುನ್ ಜೊತೆ ನಟಿಸಿದ ಹೀರೋಯಿನ್. ಆದರೆ, ಅವರು ಯಾರು ಎಂಬುದನ್ನು ಅಲ್ಲು ಅರ್ಜುನ್ ಅವರು ರಿವೀಲ್ ಮಾಡಿಲ್ಲ.  ಅಲ್ಲು ಅರ್ಜುನ್ ಅವರು ‘ಗಂಗೋತ್ರಿ’, ‘ಆರ್ಯ’, ‘ಬನ್ನಿ’ ಹ್ಯಾಪಿ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹೀರೋ ಪಾತ್ರ ಮಾಡಿದ್ದರು. ಆ ಬಳಿಕದ ಪಾತ್ರಗಳಲ್ಲಿ ಅವರು ಶರ್ಟ್​ಲೆಸ್ ಆಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ‘ನಮಗೆ ಈಗ ವೇದಿಕೆ ಸಿಕ್ಕಿದೆ’; ವೇವ್ಸ್ ಬಗ್ಗೆ ಅಲ್ಲು ಅರ್ಜುನ್ ಮಾತು

ಅಲ್ಲು ಅರ್ಜುನ್ ಅವರು 2020ರಲ್ಲಿ ‘ಅಲಾ ವೈಕುಂಟಪುರಮುಲೋ’ ಸಿನಿಮಾ ಮಾಡಿದರು. ಆ ಬಳಿಕ ತಮ್ಮ ಜೀವನದ ಅತ್ಯಮೂಲ್ಯ ಐದು ವರ್ಷವರನ್ನು ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರಕ್ಕಾಗಿ ಮೀಸಲಿಟ್ಟರು. ಈಗ ಅವರು ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.