ಹೈದರಾಬಾದ್​​ನ ಅಲ್ಲು ಸಿನಿಮಾಸ್​​​ನಲ್ಲಿ ಕನ್ನಡದ ಇಬ್ಬರು ನಿರ್ದೇಶಕರ ಫೋಟೋ

ಅಲ್ಲು ಅರ್ಜುನ್ ಅವರ ‘ಅಲ್ಲು ಸಿನಿಮಾಸ್’ ಮಲ್ಟಿಪ್ಲೆಕ್ಸ್ ಹೈದರಾಬಾದ್‌ನಲ್ಲಿ ಶುರುವಾಗಿದೆ. ಅತ್ಯಾಧುನಿಕ ಸೌಲಭ್ಯಗಳಿರುವ ಈ ಥಿಯೇಟರ್‌ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಚಾಲನೆ ನೀಡಿದರು. ವಿಶೇಷವೆಂದರೆ, ಇಲ್ಲಿನ ವಾಲ್ ಆಫ್ ಫೇಮ್‌ನಲ್ಲಿ ಕನ್ನಡದ ಇಬ್ಬರು ನಿರ್ದೇಶಕರ ಫೋಟೋಗಳಿವೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಹೈದರಾಬಾದ್​​ನ ಅಲ್ಲು ಸಿನಿಮಾಸ್​​​ನಲ್ಲಿ ಕನ್ನಡದ ಇಬ್ಬರು ನಿರ್ದೇಶಕರ ಫೋಟೋ
ಆಲ್ಲು ಅರ್ಜುನ್ ಸಿನಿಮಾಸ್

Updated on: Mar 13, 2026 | 8:35 AM

ಅಲ್ಲು ಅರ್ಜುನ್ ಅವರು (Allu Arjun) ಸಿನಿಮಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಅಲ್ಲು ಸಿನಿಮಾಸ್’ ಮಲ್ಟಿಪ್ಲೆಕ್ಸ್​​ನ ಹೈದರಾಬಾದ್​​ನಲ್ಲಿ ಆರಂಭಿಸಿದ್ದಾರೆ. ಐಷಾರಾಮಿ ಆಸನ ವ್ಯವಸ್ಥೆ ಹಾಗೂ ಅದ್ಭುತ ಸಿನಿಮಾ ವೀಕ್ಷಣೆ ಅನುಭವ ನೀಡುವ ಈ ಮಲ್ಟಿಪ್ಲೆಕ್ಸ್ ಗುರುವಾರ (ಮಾರ್ಚ್ 12) ಉದ್ಘಾಟನೆ ಆಯಿತು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಈ ಥಿಯೇಟರ್​​ನ ವಾಲ್​​ ಆಫ್ ಫೇಮ್​ ಅಲ್ಲಿ ಇಬ್ಬರು ಕನ್ನಡದ ನಿರ್ದೇಶಕರ ಫೋಟೋ ಇದೆ ಎಂಬುದು ವಿಶೇಷ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಅಲ್ಲು ಅರ್ಜುನ್ ಅವರು ಹೈದರಾಬಾದ್​​ನವರು. ಅಲ್ಲಿಯ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಟಾಲಿವುಡ್​​ನ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮವನ್ನು ಅಲ್ಲು ಅರ್ಜುನ್ ಆರಂಭಿಸಿದ್ದಾರೆ. ಇದು ಹೈದರಾಬಾದ್​ನಲ್ಲಿರೋ ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಸ್​​ ಹಾಗೂ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್​ಗೆ ಸ್ಪರ್ಧೆ ಒಡ್ಡಲಿದೆ.

ಇನ್ನು, ಅಲ್ಲು ಅರ್ಜುನ್ ಅವರು ‘ಅಲ್ಲು ಸಿನಿಮಾಸ್’ ಅಲ್ಲಿ ವಾಲ್ ಆಫ್ ಫೇಮ್ ನಿರ್ಮಿಸಿದ್ದಾರೆ. ಇದರಲ್ಲಿ ಹಲವು ನಿರ್ದೇಶಕರ ಫೋಟೋಗಳನ್ನು ಹಾಕಲಾಗಿದೆ. ತೆಲುಗು ನಿರ್ದೇಶಕರಾದ ಸುಕುಮಾರ್, ತ್ರಿವಿಕ್ರಂ ಶ್ರೀನಿವಾಸ್, ರಾಜಮೌಳಿ, ತಮಿಳಿನ ವೆಟ್ರಿ ಮಾರನ್, ಮಣಿ ರತ್ನಂ, ಅಟ್ಲಿ, ಹಿಂದಿಯಲ್ಲಿ ಸಂದೀಪ್ ರೆಡ್ಡಿ ವಂಗ, ರಾಜ್​​ಕುಮಾರ್ ಹಿರಾನಿ ಇದ್ದಾರೆ.

ಇದನ್ನೂ ಓದಿ: ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ಕನ್ನಡದ ಇಬ್ಬರು ನಿರ್ದೇಶಕರ ಫೋಟೋಗಳನ್ನು ಹಾಕಲಾಗಿದೆ. ಅದುವೇ ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ. ಇದು ಕನ್ನಡಿಗರ ಪಾಲಿಗೆ ಹೆಮ್ಮೆ ಎನಿಸಿದೆ. ಇಬ್ಬರೂ ನಿರ್ದೇಶಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವುದರಿಂದ ಇವರ ಫೋಟೋಗಳನ್ನು ಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us