ಸೆಲೆಬ್ರಿಟಿಗಳು ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಗೆಳೆಯರ ಜತೆ, ಕುಟುಂಬದ ಜತೆ ಕಳೆದ ಸಮಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ವೇಳೆ ಕೆಲವರು ತಮ್ಮ ಮನಸ್ಸಿಗೆ ಬಂದ ಕಮೆಂಟ್ ಮಾಡುತ್ತಾರೆ. ಹಾಟ್ ಫೋಟೋಗಳನ್ನು ಹಂಚಿಕೊಂಡರಂತೂ ಮುಗಿಯಿತು. ಅದಕ್ಕೆ ಬರುವ ಕಮೆಂಟ್ಗಳಿಗೆ ನೈತಿಕತೆಯ ಮಿತಿ ಇರುವುದಿಲ್ಲ. ಸಾಕಷ್ಟು ಮಂದಿ ಅಶ್ಲೀಲವಾಗಿ ಕಮೆಂಟ್ ಹಾಕುತ್ತಾರೆ. ಇದಕ್ಕೆ ಹೀರೋಯಿನ್ಗಳು ಬಹುತೇಕವಾಗಿ ಮೌನ ತಾಳುತ್ತಾರೆ. ಆದರೆ, ನಟಿ ಅಮಲಾ ಪೌಲ್ ಹಾಗಲ್ಲ. ಅಶ್ಲೀಲ ಕಮೆಂಟ್ ಹಾಕಿದವರಿಗೆ ಅವರು ಖಡಕ್ ಉತ್ತರ ನೀಡಿದ್ದಾರೆ.
ಅಮಲಾ ಪೌಲ್ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಗ್ಲ್ಯಾಮ್ ಲುಕ್ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ಈ ಕಾರಣಕ್ಕೆ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಹಿಂಬಾಲಕರಿದ್ದಾರೆ. ನಟನೆ ಜತೆಗೆ ಅವರು ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಸುದ್ದಿಯಾಗುತ್ತಾರೆ.
ಅಮಲಾ ಸಹೋದರ ಅಭಿಜಿತ್ ಮದುವೆ ಆಗುತ್ತಿದ್ದಾರೆ. ಮದುವೆಗೂ ಮೊದಲು ಅಭಿಜಿತ್ ಬ್ಯಾಚುಲರ್ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಗೆ ಅಮಲಾ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಚಿಕ್ಕ ಡ್ರೆಸ್ ಹಾಕಿ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಇಂಗ್ಲಿಷ್ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಅವರು ಕುಟುಂಬದ ಜತೆ ಕಳೆದ ಸಮಯ. ಆದರೆ, ಅವರು ಹಾಕಿದ್ದ ಬಟ್ಟೆ ಅನೇಕರ ಕಣ್ಣನ್ನು ಕುಕ್ಕಿದೆ.
ಈ ವಿಡಿಯೋ ನೋಡಿದ ವ್ಯಕ್ತಿಯೋರ್ವ ‘ಅವರ ಖಾಸಗಿ ಅಂಗಾಗಳು ಹೇಗೆ ಕುಣಿಯುತ್ತಿವೆ ನೋಡಿ. ಅದನ್ನು ನೋಡಿದರೆ ಅವರು ಇಂದು ಏನು ಬಯಸುತ್ತಾರೆ ಎಂಬುದು ಗೊತ್ತಾಗುತ್ತದೆ’ ಎಂದು ಕಮೆಂಟ್ ಮಾಡಿದ್ದ. ಇದಕ್ಕೆ ಅಮಲಾ ವ್ಯಂಗ್ಯವಾಗಿ ‘ನಿನಗೆ ಗೊತ್ತಾಯಿತಲ್ಲ’ ಎಂದು ಉತ್ತರಿಸಿದ್ದಾರೆ. ಇನ್ನೋರ್ವ ‘ಲೆಜೆಂಡ್ಗಳಿಗೆ ಮಾತ್ರ ಅದು ಕಾಣುತ್ತದೆ’ ಎಂದು ಖಾಸಗಿ ಅಂಗ ಕಾಣುತ್ತಿದೆ ಎಂದು ಪರೋಕ್ಷವಾಗಿ ಬರೆದುಕೊಂಡಿದ್ದ. ಇದಕ್ಕೆ ಅವರು ಖಾರವಾಗಿ ಉತ್ತರಿಸಿದ್ದಾರೆ.
ಸದ್ಯ, ಈ ಕಮೆಂಟ್ ಸ್ಕ್ರೀನ್ಶಾಟ್ಗಳು ಸಾಕಷ್ಟು ವೈಲರ್ ಆಗುತ್ತಿವೆ. ಅನೇಕರು ಅಮಲಾ ಪೌಲ್ ಈ ರೀತಿ ಖಡಕ್ ಆಗಿ ಉತ್ತರಿಸಿದ್ದಕ್ಕೆ ಭೇಷ್ ಎಂದಿದ್ದಾರೆ. ಅವರ ಈ ಉತ್ತರದಿಂದ ನಾಲ್ಕು ಜನರಿಗೆ ಭಯ ಹುಟ್ಟಿದೆ ಎಂದು ಕೆಲವರು ಹೇಳಿದ್ದಾರೆ.
Rishab Shetty: ತೆಲುಗಿನಲ್ಲೂ ಮಿಂಚಲು ತಯಾರಾಗಿದ್ದಾನೆ ಕನ್ನಡದ ‘ಹೀರೋ’!
Published On - 1:54 pm, Wed, 22 September 21