ಈ ಸೆಲೆಬ್ರಿಟಿಗಳ ಮದುವೆಗೆ ಖರ್ಚಾಗಿದ್ದು ಕೇವಲ ಒಂದೂವರೆ ಲಕ್ಷ ರೂ.; ನಟಿ ಧರಿಸಿದ ಸೀರೆಯ ಬೆಲೆ ಮೂರು ಸಾವಿರ

ಮದುವೆ ಆಗಲು ಮುಂಬೈನಿಂದ ಪುಣೆಗೆ ಬಂದಿದ್ದು, ಸೀರೆಗೆ ಕೇವಲ 3 ಸಾವಿರ ರೂಪಾಯಿ ಖರ್ಚು ಮಾಡಿದ್ದ ವಿಚಾರಗಳನ್ನು ಈ ಸೆಲೆಬ್ರಿಟಿ ದಂಪತಿ ಹೇಳಿಕೊಂಡಿದ್ದಾರೆ.

ಈ ಸೆಲೆಬ್ರಿಟಿಗಳ ಮದುವೆಗೆ ಖರ್ಚಾಗಿದ್ದು ಕೇವಲ ಒಂದೂವರೆ ಲಕ್ಷ ರೂ.; ನಟಿ ಧರಿಸಿದ ಸೀರೆಯ ಬೆಲೆ ಮೂರು ಸಾವಿರ
ಅಮೃತಾ-ಅನ್ಮೋಲ್

Updated on: May 20, 2023 | 11:27 AM

ಸೆಲೆಬ್ರಿಟಿಗಳ ಮದುವೆ ಎಂದಾಕ್ಷಣ ನೆನಪಿಗೆ ಬರೋದು ಅದ್ದೂರಿತನ. ದೊಡ್ಡ ಕಲ್ಯಾಣ ಮಂಟಪ, ಭರ್ಜರಿ ಭೋಜನ. ಇದರ ಜೊತೆಗೆ ದಿಗ್ಗಜರ ದಂಡು. ಇಷ್ಟೆಲ್ಲ ಸಂಭ್ರಮಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಆದರೆ, ಇಲ್ಲೊಂದು ಸೆಲೆಬ್ರಿಟಿ ಜೋಡಿ ಮದುವೆಗೆ ಖರ್ಚು ಮಾಡಿದ್ದು ಕೇವಲ ಒಂದೂವರೆ ಲಕ್ಷ ರೂಪಾಯಿ. ಜನಸಾಮಾನ್ಯರ ಮದುವೆ ಎಂದರೂ ಇದಕ್ಕಿಂತ ಹೆಚ್ಚಿನ ಖರ್ಚಾಗುತ್ತದೆ. ಆದರೆ, ಈ ದಂಪತಿ ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಬಗ್ಗೆ ಅವರು ಯೂಟ್ಯೂಬ್ (YouTube) ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ಅಮೃತಾ ರಾವ್ ಹಾಗೂ ಆರ್​ಜೆ ಅನ್ಮೋಲ್ ಅವರು 9 ವರ್ಷಗಳ ಹಿಂದೆ ಮದುವೆ ಆದರು. ವಿವಾಹ ಆದ ಇಷ್ಟು ವರ್ಷಗಳ ಬಳಿಕ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಆ್ಯನಿವರ್ಸರಿಗೆ ಸ್ಪೆಷಲ್ ವಿಡಿಯೋ ಒಂದನ್ನು ಮಾಡಿದ್ದಾರೆ. ಆಗ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಇದರಲ್ಲಿ ಹಲವು ವಿಚಾರ ರಿವೀಲ್ ಆಗಿದೆ. ಮದುವೆ ಆಗಲು ಮುಂಬೈನಿಂದ ಪುಣೆಗೆ ಬಂದಿದ್ದು, ಸೀರೆಗೆ ಕೇವಲ 3 ಸಾವಿರ ರೂಪಾಯಿ ಖರ್ಚು ಮಾಡಿದ್ದ ವಿಚಾರಗಳನ್ನು ಅವರು ಹೇಳಿಕೊಂಡಿದ್ದಾರೆ.

‘ಮೇ ಹೂ ನಾ’, ‘ಇಶ್ಕ್ ವಿಶ್ಕ್​’, ‘ಜಾಲಿ ಎಲ್​ಎಲ್​ಬಿ’, ‘ಠಾಕ್ರೆ’ ಮೊದಲಾದ ಸಿನಿಮಾಗಳಲ್ಲಿ ಅಮೃತಾ ರಾವ್ ನಟಿಸಿದ್ದಾರೆ. ಅವರಿಗೆ ಅದ್ದೂರಿ ಮದುವೆ ಇಷ್ಟ ಇರಲಿಲ್ಲ. ಹೀಗಾಗಿ, 3 ಸಾವಿರ ರೂಪಾಯಿ ಸೀರೆ ತೊಟ್ಟಿದ್ದರು. ಮದುವೆ ಕಲ್ಯಾಣ ಮಂಟಪ 11 ಸಾವಿರ ರೂಪಾಯಿಗೆ ಸಿಕ್ಕಿತ್ತು.

ಇದನ್ನೂ ಓದಿ: ರಾಜ್​ಕುಮಾರ್-ಪುನೀತ್ ಅವರ ಕಣ್ಣುಗಳಿಂದ ಅನೇಕರಿಗೆ ದೃಷ್ಟಿ ಕೊಟ್ಟಿದ್ದು ಭುಜಂಗ ಶೆಟ್ಟಿ

‘ನಾನು ಸಾಂಪ್ರದಾಯಿಕ ಉಡುಗೆಯನ್ನು ಧರಿಸಲು ಬಯಸಿದ್ದೆ. ನನ್ನ ಸೀರೆಯ ಬೆಲೆ 3000 ರೂಪಾಯಿ ಆಗಿತ್ತು. ಮದುವೆ ವೇಳೆ ಆಭರಣಗಳನ್ನು ಹಾಕಿರಲಿಲ್ಲ. ನನ್ನ ಮಂಗಳಸೂತ್ರಕ್ಕೆ ಖರ್ಚಾಗಿದ್ದು ಕೇವಲ 18,000 ರೂಪಾಯಿ ಮಾತ್ರ. ಮದುವೆ ಎಂದರೆ ಪ್ರೀತಿ ಅನ್ನೋದು ನಮ್ಮ ಅಭಿಪ್ರಾಯ. ನಮ್ಮ ಮದುವೆಯಲ್ಲಿ ನಮ್ಮ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಇರಬೇಕೆಂದು ನಾವು ಬಯಸಿದ್ದೆವು. ಮದುವೆಗೆ ದುಡ್ಡು ಖರ್ಚು ಮಾಡಿಲ್ಲ ಎಂಬ ವಿಚಾರದಲ್ಲಿ ಖುಷಿ ಇದೆ’ ಎಂದಿದ್ದಾರೆ ಅವರು.

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಅನೇಕರು ಈ ದಂಪತಿಯ ನಿರ್ಧಾರ ಶ್ಲಾಘಿಸಿದ್ದಾರೆ. ಅನೇಕರಿಗೆ ಇವರು ಮಾದರಿ ಎನ್ನುವ ಮಾತು ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ