AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ, ಒಟಿಟಿಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಗೆ ಕಠಿಣ ನಿಯಮ; ಬೇಕಿದೆ ಜಿಲ್ಲಾಧಿಕಾರಿ ಅನುಮತಿ

ಮಕ್ಕಳನ್ನು ಒಳಗೊಂಡಂತಹ ಟಿವಿ, ಒಟಿಟಿ ಮುಂತಾದ ವೇದಿಕೆಗಳಲ್ಲಿ ಪೋಷಕರು ಮತ್ತು ಆಯೋಜಕರು ಹೊಸ ನಿಮಯಗಳನ್ನು ಪಾಲಿಸಬೇಕು. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಟಿವಿ, ಒಟಿಟಿಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಗೆ ಕಠಿಣ ನಿಯಮ; ಬೇಕಿದೆ ಜಿಲ್ಲಾಧಿಕಾರಿ ಅನುಮತಿ
ಮಕ್ಕಳ ಟಿವಿ ಶೋ (ಸಾಂದರ್ಭಿಕ ಚಿತ್ರ)
ಮದನ್​ ಕುಮಾರ್​
|

Updated on: May 20, 2023 | 11:33 AM

Share

ಕಿರುತೆರೆಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು (Kids Show) ಫೇಮಸ್​ ಆಗಿವೆ. ಮಕ್ಕಳ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಇಂಥ ವೇದಿಕೆಗಳು ಸಹಕಾರಿ ಆಗಿವೆ. ಪುಟಾಣಿಗಳು ನೀಡುವ ಮನರಂಜನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ಇನ್ಮುಂದೆ ಟಿವಿ, ಒಟಿಟಿ, ಸಿನಿಮಾ ಮುಂತಾದ ಮನರಂಜನಾ ಕ್ಷೇತ್ರಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವಾಗ ಕೆಲವು ಕಠಿಣ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (NCPCR) ಹೊಸ ನಿಯಮಗಳನ್ನು ಜಾರಿ ಮಾಡಿದೆ. ಅದರ ಅನ್ವಯ, ಮಕ್ಕಳು ಮತ್ತು ಅಪ್ರಾಪ್ತರು ಸಿನಿಮಾ, ಟಿವಿ, ಒಟಿಟಿ (OTT) ಮುಂತಾದ ಶೋಗಳಲ್ಲಿ ಭಾಗವಹಿಸುವುದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡ ನಂತರವೇ ಶೋಗಳಲ್ಲಿ ಪಾಲ್ಗೊಳ್ಳಬಹುದು. ಆರು ತಿಂಗಳ ಬಳಿಕ ಮತ್ತೆ ನೋಂದಣಿ ನವೀಕರಣ ಮಾಡಿಸಬೇಕು. ಇಂಥ ಅನೇಕ ನಿಮಯಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಟಿವಿ ಕಾರ್ಯಕ್ರಮಗಳ ಶೂಟಿಂಗ್​ ವೇಳೆ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ನಿಯಮಗಳನ್ನು ಜಾರಿ ಮಾಡಲಾಗಿದೆ. ಶೋ ಆಯೋಜಕರು ಮತ್ತು ಪೋಷಕರು ಹೊಸ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಬಾಲ ನಟರ ಹೆಸರನ್ನು ನೋಂದಣಿ ಮಾಡಿಸಲು ಸರ್ಕಾರಗಳು ಆನ್​ಲೈನ್​ನಲ್ಲಿ ಅವಕಾಶ ಕಲ್ಪಿಸಬೇಕು. ಮಕ್ಕಳ ಜೊತೆ ನಟಿಸುವ ಅಥವಾ ಕೆಲಸ ಮಾಡುವ ಎಲ್ಲರೂ ಮೆಡಿಕಲ್​ ಸರ್ಟಿಫಿಕೇಟ್​ ತೋರಿಸಬೇಕು. ಅಂಥ ಸಿಬ್ಬಂದಿಯ ಪೊಲೀಸ್​ ಪರಿಶೀಲನೆ ಆಗಿದೆಯೇ ಎಂದು ನಿರ್ಮಾಣ ಸಂಸ್ಥೆಗಳು ಖಾತ್ರಿ ಪಡಿಸಿಕೊಳ್ಳಬೇಕು.

ಇದನ್ನೂ ಓದಿ: ಮಕ್ಕಳ ಹಕ್ಕುಗಳ ಕಾಯ್ದೆಗೆ ತಿದ್ದುಪಡಿ ಪ್ರಶ್ನಿಸುವ ಮನವಿಗೆ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

ಮಕ್ಕಳಿಗೆ ಮುಜುಗರ, ಅಹಿತಕರ ಆಗುವಂತಹ ಪರಿಸ್ಥಿತಿ ನಿರ್ಮಾಣ ಆಗಬಾರದು. ಅಸಭ್ಯ, ಅಶ್ಲೀಲವಾದ ದೃಶ್ಯಗಳಲ್ಲಿ ಮಕ್ಕಳನ್ನು ಬಳಕೆ ಮಾಡಬಾರದು. ಮಕ್ಕಳ ದೇಹ ಪ್ರದರ್ಶಿಸಬಾರದು. ಮಕ್ಕಳ ವೀಕ್ಷಣೆಗೆ ನಿರ್ಬಂಧ ಇರುವಂತಹ ಯಾವುದೇ ದೃಶ್ಯಗಳಲ್ಲಿ ಬಾಲ ಕಲಾವಿದರು ನಟಿಸುವಂತಿಲ್ಲ. ಹಣ ಗಳಿಕೆ ಉದ್ದೇಶದಿಂದ ಮಕ್ಕಳನ್ನು ಬಳಸುವ ಸೋಶಿಯಲ್​ ಮೀಡಿಯಾ ಕಾಂಟೆಂಟ್​ ಕ್ರಿಯೇಟರ್​ಗಳು ‘ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986’ ಅಡಿಯಲ್ಲಿ ಬರುತ್ತಾರೆ ಎಂದು ಕೂಡ ಹೊಸ ನಿಮಯಗಳಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Parenting: ಮೊಬೈಲ್​ ಈಗ ನಮ್ಮ ಮಕ್ಕಳ ಹಕ್ಕು!?

ದೊಡ್ಡವರು ಬಟ್ಟೆ ಬದಲಾಯಿಸುವ ಸ್ಥಳದಲ್ಲೇ ಮಕ್ಕಳ ಕೂಡ ಬಟ್ಟೆ ಬದಲಾಯಿಸುವಂತಿಲ್ಲ. ಅದಕ್ಕಾಗಿ ಮಕ್ಕಳಿಗೆ ಪ್ರತ್ಯೇಕ ಸ್ಥಳ ಇರಬೇಕು. 5 ಗಂಟೆಗಿಂತಲೂ ಹೆಚ್ಚು ಅವಧಿಗೆ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಬಿಡುವು ನೀಡದೇ ಮೂರು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಸುವಂತಿಲ್ಲ. ಶಾಲಾ ಶಿಕ್ಷಣಕ್ಕೆ ತೊಂದರೆ ಆಗದಂತೆ ಪೋಷಕರು ಕಾಳಜಿವಹಿಸಬೇಕು.

ಇದನ್ನೂ ಓದಿ: ಬಾಂಬೆ ಬೇಗಮ್ಸ್ ಚಿತ್ರಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನೋಟಿಸ್

ಮಕ್ಕಳು ಭಾಗಿಯಾಗುವ ಶೋಗಳಿಂದ ಬಂದ ಹಣದಲ್ಲಿ ಶೇಕಡ 20ರಷ್ಟನ್ನು ಆತ/ಆಕೆಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಎಫ್​ಡಿ ಮಾಡಬೇಕು. ಮಕ್ಕಳಿಗೆ ಶೋಷಣೆ, ಕಿರುಕುಳ ಆದಾಗ ಆ ಸುದ್ದಿಯನ್ನು ಪ್ರಸಾರ ಮಾಡುವಾಗ ಮಾಧ್ಯಮಗಳು ಮಕ್ಕಳ ಗುರುತು ಬಹಿರಂಗಪಡಿಸಬಾರದು. ಮಕ್ಕಳಿಗೆ ಸಂಬಂಧಿಸಿದ ಸುದ್ದಿಯನ್ನು ವೈಭವೀಕರಿಸಬಾರದು ಎಂದು ನಿಯಮ ಜಾರಿ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?